ಪಕ್ಷದ ಸಂಘಟನಾ ದೃಷ್ಟಿಯಿಂದ ಕಾರ್ಯಕರ್ತರ ಸಭೆ ಅತ್ಯಂತ ಮಹತ್ವ- ಹರೀಶ್ ಗೌಡ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗಾಗಿ ಕಾರ್ಯಕರ್ತರ ಸಭೆಯನ್ನು ಜನವರಿ 10ರ  ಶನಿವಾರದಂದು  ಬೆಳಗ್ಗೆ 10:30 ಗಂಟೆಗೆ ನಗರದ  ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ
, ಜೆಡಿಎಸ್ ಪಕ್ಷದ ಬಲವರ್ಧನೆಗೆ ಬೆಂಬಲ ನೀಡಬೇಕೆಂದು  ಜೆಡಿಎಸ್ ರಾಜ್ಯ ಮುಖಂಡ ಹರೀಶ್ ಗೌಡ ತಿಳಿಸಿದರು.

 ನಗರದ ಪ್ರವಾಸಿ ಮಂದಿರದಲ್ಲಿ  ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಪಕ್ಷದ ಸುಧಾರಣೆ ಮತ್ತು ಬಲವರ್ಧನೆಗಾಗಿ ಈ ಕಾರ್ಯಕರ್ತರ ಸಭೆ ಆಯೋಜನೆ ಮಾಡಲಾಗಿದ್ದು ಸಭೆಯಲ್ಲಿ ಕರ್ನಾಟಕ ರಾಜ್ಯ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ. ಕೃಷ್ಣಾರೆಡ್ಡಿ  ಭಾಗವಹಿಸಲಿದ್ದಾರೆ. ರಾಜ್ಯ ನಾಯಕರ ಮಾರ್ಗದರ್ಶನದಲ್ಲಿ ಪಕ್ಷದ ಮುಂದಿನ ಗುರಿಗಳ ಬಗ್ಗೆ ಚರ್ಚೆ ಮಾಡುವುದರ ಜೊತೆಗೆ  ಪಕ್ಷದ ಕಾರ್ಯಕರ್ತರ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶಕಲ್ಪಿಸಲಾಗಿದೆ. ಜೊತೆಗೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಪೂರ್ವಸಿದ್ಧತೆಯ ಕುರಿತಾದ ಚರ್ಚೆ ಮಾಡಲಿದ್ದಾರೆ ಎಂದರು.

- Advertisement - 

ಜೆಡಿಎಸ್ ರಾಜ್ಯ ಮುಖಂಡರಾದ ಡಾ ವಿಜಯ್ ಕುಮಾರ್ ಮಾತನಾಡಿ ಇತ್ತೀಚಿಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿದ್ದು ಪಕ್ಷವು ಪ್ರತಿ 3 ವರ್ಷಕ್ಕೊಮ್ಮೆ ಎಲ್ಲಾ ಪದಾಧಿಕಾರಿಗಳನ್ನು ಪುನರಾಯ್ಕೆ ಮಾಡುವ ಪ್ರಕ್ರಿಯೆ ನಡೆಸುತ್ತದೆ. ಅಂತೆಯೇ ಈ ಬಾರಿ ರಾಜ್ಯ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರನ್ನಾಗಿ ಮಾಜಿ ಸಭಾಪತಿಗಳಾದ ಜೆ ಕೆ ಕೃಷ್ಣ ರೆಡ್ಡಿ ಅವರನ್ನು  ಆಯ್ಕೆ ಮಾಡಿದ್ದು , ಜೆಡಿಎಸ್ ಕಾರ್ಯಕರ್ತರ ಸಲಹೆ ಸೂಚನೆಗಳನ್ನು ಪಡೆಯಲು ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಜನವರಿ 10ರಂದು ಕಾರ್ಯಕರ್ತರ ಸಭೆ ಆಯೋಜನೆ ಮಾಡಲಾಗಿದೆ. ಸ್ಥಳೀಯವಾಗಿ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಈ ಸಭೆ ಸಹಕಾರಿಯಾಗಲಿದೆ ಎಂದರು.

ನಗರಸಭಾ ಸದಸ್ಯ ಹಾಗೂ ತಾಲ್ಲೂಕು ಜೆಡಿಎಸ್ ಮುಖಂಡ ತ. ನ. ಪ್ರಭುದೇವ್ ಮಾತನಾಡಿ ತಾಲ್ಲೂಕಿನಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದರೂ ಕಳೆದ 20ವರ್ಷಗಳಿಂದ ತಾಲ್ಲೂಕಿನಲ್ಲಿ ಶಾಸಕರ ಸ್ಥಾನ ಪಡೆಯುವಲ್ಲಿ ನಾವು  ವಿಫಲರಾಗಿದ್ದೇವೆ. ಸ್ಥಳೀಯ ಕಾರ್ಯಕರ್ತರಲ್ಲಿ  ಹೊಸ ಚೈತನ್ಯ ಹುಮ್ಮಸ್ಸು ಮೂಡಿಸುವ ಈ ಕಾರ್ಯಕರ್ತ ಸಭೆ ಯೋಚನೆ ಮಾಡಲಾಗಿದ್ದು. ಸಭೆಯಲ್ಲಿ ಪಕ್ಷದ ಹಲವಾರು ವಿಚಾರಗಳು ಚರ್ಚೆಯಾಗಲಿವೆ. ಮುಂದಿನ ಸ್ಥಳೀಯ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ  ಜೆಡಿಎಸ್ ಅಭ್ಯರ್ಥಿ ಗೆಲುವು ಸಲ್ಲಿಸಲು ಈ ಕಾರ್ಯಕರ್ತ ಸಭೆ ಸಹಕಾರಿಯಾಗಲಿದೆ ಎಂದರು. 

- Advertisement - 

ಸುದ್ದಿಗೋಷ್ಠಿಯಲ್ಲಿ ರಾಜ್ಯ ಮುಖಂಡರಾದ ಡಾ. ವಿಜಯ್ ಕುಮಾರ್, ತಾಲ್ಲೂಕು ನಗರಸಭಾ ಸದಸ್ಯ ,ವಡ್ಡರಹಳ್ಳಿ ರವಿಮುಖಂಡರಾದ ಕೆಂಪರಾಜು, ಅಂಜನ್ ಗೌಡನಾಗರಾಜುಪಿ ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ರಾಮಚಂದ್ರ ಬಾಬು, ಶಿವಕುಮಾರ್ (ವೈರ್) ಪ್ರವೀಣ್ ಕುಮಾರ್, ಶಾಂತಮ್ಮ, ಜ್ಯೋತಿ,ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

 

Share This Article
error: Content is protected !!
";