ಲಾವಣ್ಯ ಬಿಎಡ್ ಕಾಲೇಜಿನಲ್ಲಿ ಬಿಇಡಿ ಪ್ರತಿಕ್ಷಾಣಾರ್ಥಿಗಳ ಸ್ವಾಗತ ಕಾರ್ಯಕ್ರಮ

News Desk
- Advertisement -  - Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಲಾವಣ್ಯ ಬಿಇಡಿ ಕಾಲೇಜಿನ ಪ್ರಥಮ ವರ್ಷದ ಪ್ರತಿಕ್ಷಾಣಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಗಿತ್ತು. ಕಾರ್ಯಕ್ರಮವನ್ನು  ಲಾವಣ್ಯ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳು ಹಾಗೂ  ಟಿ ಎ ಪಿ ಎಂ ಸಿ ಎಸ್ ನಿರ್ದೇಶಕರಾದ  ವಿಶ್ವಾಸ್ ಹನುಮಂತೇಗೌಡ ರವರು ಮಾತನಾಡಿ  ಶಿಕ್ಷಕ ವೃತ್ತಿ ಜೀವನದಲ್ಲೇ ಒಂದು ಪವಿತ್ರವಾದ ವೃತ್ತಿ ಶಿಕ್ಷಣ ಮನುಷ್ಯನ ವ್ಯಕ್ತಿತ್ವವನ್ನೇ ಬದಲಾಯಿಸುತ್ತದೆ.

ಆದುದರಿಂದ ನೀವುಗಳು ಉತ್ತಮ ವಿದ್ಯಾರ್ಥಿಗಳಿಗಾಗಿ ಮುಂದಿನ ನಿಮ್ಮ ವೃತ್ತಿಯಲ್ಲಿ ಉತ್ತಮ ಪ್ರಜೆಗಳನ್ನು ರೂಪಿಸುವ ಮೂಲಕ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ನಿಟ್ಟಿನಲ್ಲಿ ತಾವುಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವ ವಹಿಸುತ್ತದೆ ಎಂದು ಹೇಳಿದರು.

- Advertisement - 

      ಲಾವಣ್ಯ ಸಂಯುಕ್ತ ಪದವಿಪೂರ್ವ ಮತ್ತು ಪದವಿ ಕಾಲೇಜು ಪ್ರಾಂಶುಪಾಲ ಎಂ ಸಿ ಮಂಜುನಾಥ್ ಮಾತನಾಡಿ ಕೆಟ್ಟ ವಿದ್ಯಾರ್ಥಿಗಳನ್ನು ಕಾಣಬಹುದು. ಆದರೆ ಕೆಟ್ಟ ಶಿಕ್ಷಕರನ್ನು ಕಾಣಲು ಸಾಧ್ಯವಿಲ್ಲ. ಅಂತಹ ಕೆಟ್ಟ ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕನದ್ದಾಗಿರುತ್ತದೆ. ಆದ್ದರಿಂದ ಶಿಕ್ಷಕ ಅತ್ಯಂತ ಪವಿತ್ರವಾದ ವೃತ್ತಿ ಎಂದು ಹೇಳಿದರು.

 ಬಿಇಡಿ ಕಾಲೇಜು ಪ್ರಾಂಶುಪಾಲ ಪ್ರೊ,ಜಿ. ಕೃಷ್ಣಮೂರ್ತಿ ಮಾತನಾಡಿ ವೈದ್ಯರು ವಕೀಲರು ಇಂಜಿನಿಯರ್ ಗಳು ಐಎಎಸ್ ಕೆಎಎಸ್ ಅಧಿಕಾರಿಗಳನ್ನು ಸೃಷ್ಟಿಸುವ ಶಕ್ತಿ ಒಬ್ಬ ಸಾಮಾನ್ಯ ಶಿಕ್ಷಕನದ್ದಾಗಿರುತ್ತದೆ. ಉತ್ತಮ ಶಿಕ್ಷಕರು ಈ ದೇಶದ ರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಣೆ ಮಾಡಿರುವುದು ಶಿಕ್ಷಕರ ಪಾವಿತ್ರ್ಯತೆಯನ್ನು ತೊರಿಸುತ್ತದೆ ಎಂದು ಹೇಳಿದರು.

- Advertisement - 

ಕಾರ್ಯಕ್ರಮದಲ್ಲಿ ಬಿಎಡ್ ಕಾಲೇಜು ಉಪನ್ಯಾಸಕರಾದ ಪ್ರಕಾಶ್,ಲತಾ,ತ್ರಿಭುವನ್, ಹಾಗೂ ಬಿಇಡಿ ಕಾಲೇಜಿನ ಪ್ರತಿಕ್ಷಾಣಾರ್ಥಿಗಳು ಭಾಗವಹಿಸಿದ್ದರು.

 

Share This Article
error: Content is protected !!
";