ಶಿಕ್ಷಣ, ಸಾಮಾಜಿಕ ಸುಧಾರಣೆಯ ಪ್ರವರ್ತಕಿ ಸಾವಿತ್ರಿಬಾಯಿ ಫುಲೆ- ಡಾ.ಜೆ.ಕರಿಯಪ್ಪ ಮಾಳಿಗೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಕ್ಷರದ ಮೂಲಕ ಅರಿವಿನ ಗೂಡು ಕಟ್ಟಿ
, ಆ ಗೂಡಿಗೆ ದೀಪದ ಬೆಳಕಾದವರು ಸಾವಿತ್ರಿ ಬಾಯಿ ಪುಲೆಯವರು. ವಂಚಿತ ಸಮುದಾಯಗಳಿಗೆ ಹಿಂದುಳಿದ ಅಸ್ಪಶ್ಯ ಮಹಿಳೆಯರಿಗೆ ಅಕ್ಷರದ ಅರಿವು ಮೂಡಿಸಿ ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಯ ಪ್ರವರ್ತಕಿಯಾಗಿದ್ದಾರೆ ಎಂದು ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಡಾ.ಜೆ.ಕರಿಯಪ್ಪ ಮಳಿಗೆ ಹೇಳಿದರು.

ನಗರದ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಭಾಂಗಣದಲ್ಲಿ ಮಂಗಳವಾರ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಮಹಿಳಾ ಘಟಕ ಸಮಿತಿ ಹಾಗೂ ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ಅಕ್ಷರ ಅರಿವು-ಸಾವಿತ್ರಿಬಾಯಿ ಫುಲೆ ಒಂದು ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

- Advertisement - 

ಅಂಚಿನಲ್ಲಿರುವ ಸಮುದಾಯಗಳ ಸಬಲೀಕರಣಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಇವರು ಸಾಮಾಜಿಕ ಸಮಾನತೆಗಾಗಿ ಸತ್ಯಶೋಧಕ ಸಮಾಜವನ್ನು ಕಟ್ಟಿ ಹಲವಾರು ಸುಧಾರಣೆಗಾಗಿ ಶ್ರಮಿಸಿ ಈ ಹೊತ್ತಿನ ಸ್ತ್ರೀ ಕುಲಕ್ಕೆ ಸ್ಫೂರ್ತಿ ಮತ್ತು ಮಾದರಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು. 

ಅಸಮಾನತೆಗಳ ಹೋಗಲಾಡಿಸುವುದಕ್ಕೆ ಅಕ್ಷರದಿಂದ ಮಾತ್ರ ಸಾಧ್ಯ. ಆಧುನಿಕ ಯುಗದಲ್ಲಿ ಮಾನವ ಸಂಬಂಧಗಳ ಬೆಸೆಯುವ ಕಾರ್ಯ ಆಗಬೇಕಾಗಿದೆ. ಮಾನವರು ಎಲ್ಲರನ್ನು ಪ್ರೀತಿಸುವ ಭಾವನಾ ಜೀವಿಗಳಾಗಬೇಕು, ಭಾವನೆಗಳಿರಬೇಕು ಎಂದು ಹೇಳಿದರು.

- Advertisement - 

ಸಮಾಜಶಾಸ್ತ್ರ ಸಹ ಪ್ರಾಧ್ಯಾಪಕರು ಪ್ರೊ.ಸಿ.ವೈ.ಯಶೋಧ ಮಾತನಾಡಿ, ಅಂದಿನ ಬಲಾಢ್ಯ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಸೆಟೆದುನಿಂತು ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸಲು ಅಪಮಾನಗಳ ಎದುರಿಸಿ ಮುಂದಾದ ಪುಲೆ ದಂಪತಿಗಳು ಮತ್ತು ಫಾತಿಮಾ ಶೇಕ್ ಅವರ ಧೈರ್ಯ, ಬದ್ಧತೆ, ತ್ಯಾಗ, ಬಲಿದಾನ ಮತ್ತು ಸೇವೆಯನ್ನು ಸ್ಮರಿಸಿದರು. ಬೋಧಿಸುವುದು ಸುಲಭ ಆದರೆ ಅದಕ್ಕೆ ಮಾದರಿಗಳಾಗುವುದು ಕಷ್ಟ. ಆದರೆ ಇವರು ಅಂದಿನ ಸಮಾಜ ಒಡ್ಡಿದ ಸವಾಲುಗಳನ್ನು ಎದುರಿಸಿ ಇತಿಹಾಸವನ್ನು ಸೃಷ್ಠಿಸಿದ್ದು ಆಶ್ಚರ್ಯ ಮಾಡುವುದೆಂದು ತಿಳಿಸಿದರು.

ಹೂ ಬೆಳೆದು ಹಾರಗಳನ್ನು ಮಾಡಿ ಮಾರುವ ಸಮುದಾಯಕ್ಕೆ ಸೇರಿದ ಸಾವಿತ್ರಿ, ಹೂ ಮಾರುವುದನ್ನು ಬಿಟ್ಟು ತನ್ನ ಹುಡಿಯಲ್ಲಿ ಅಕ್ಷರವ ಹಿಡಿದು ಕ್ರಾಂತಿಯ ಹೂವಿನ ಹಾರವ ಕಟ್ಟಲು ಕಣ್ಣೀರನ್ನೇ ಕುಡಿದರು. ಇತಿಹಾಸದಲ್ಲಿ ಹಾದುಹೋದ ಹಲವಾರು ಮಹನೀಯರುಗಳನ್ನು ಅವರ ಜಾತಿ ಧರ್ಮ, ಊರು-ಕೇರಿ, ಭಾಷೆ ಇವುಗಳ ಆಧಾರದ ಮೇಲೆ ನೋಡದೆ ಅವರ ಚಿಂತನೆಗಳನ್ನು ನಾವು ನಮ್ಮ ಆಚರಣೆಗಳಲ್ಲಿ ತರಬೇಕು ಎಂದು ತಿಳಿಸಿದರು.

ಅಕ್ಷರ ಅರಿವು ಕಾರ್ಯಕ್ರಮವು ವಿಶೇಷವಾಗಿ ವಿದ್ಯಾರ್ಥಿಗಳ ಚಿಂತನೆಯ ವೇದಿಕೆಯಾಗಿದ್ದು, ವಿದ್ಯಾರ್ಥಿಗಳೇ ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ವಿವಿಧ ವಿಭಾಗಗಳ ಸ್ನಾತಕೋತ್ತರ ವಿದ್ಯಾರ್ಥಿಗಳು ಸಾವಿತ್ರಿ ಬಾಯಿ ಫುಲೆಯವರ ಬಾಲ್ಯ, ವೈವಾಹಿಕ, ಶೈಕ್ಷಣಿಕ ಜೀವನ ಕುರಿತಂತೆ ಮತ್ತು ಅವರ ಸಮಾಜ ಸುಧಾರಣೆ, ಸವಾಲುಗಳನ್ನು ಕುರಿತಂತೆ ವಿವಿಧ ವಿಚಾರಗಳನ್ನು ಪ್ರಸ್ತುತಪಡಿಸಿದರು.

ಇತಿಹಾಸ ಪ್ರಾಧ್ಯಾಪಕರು ಹಾಗೂ ಸಾಂಸ್ಕøತಿಕ ಸಮಿತಿಯ ಸಂಚಾಲಕ ಪ್ರೊ.ಬಿ.ಇ.ಜಗನ್ನಾಥ ಅವರು ಫಾತಿಮಾ ಶೇಕ್ ಹಾಗೂ ಸಾವಿತ್ರಿಬಾಯಿ ಫುಲೆಯವರ ಜಂಟಿ ಭಾವಚಿತ್ರವನ್ನು ಕಾಲೇಜಿಗೆ ಕೊಡುಗೆಯಾಗಿ ನೀಡಿದರು. ಮಾನವ ಬಂಧುತ್ವ ವೇದಿಕೆಯ ಸದಸ್ಯ ಮಾರುತೇಶ್ ಅವರು ಭೀಮಗೀತೆ ಹಾಡುವ ಮೂಲಕ ಎಲ್ಲರ ಗಮನ ಸೆಳೆದರು. ಸ್ನಾತಕೋತ್ತರ ಅರ್ಥಶಾಸ್ತ್ರ ವಿದ್ಯಾರ್ಥಿಗಳಾದ ಟಿ.ವರ್ಷಿಣಿ ಮತ್ತು ಅರುಣ್ ಕುಮಾರ್ ಅವರಿಗೆ ಉತ್ತಮ ಭಾಷಣಕ್ಕಾಗಿ ಮಾನವ ಬಂಧುತ್ವ ವೇದಿಕೆಯು ಬಹುಮಾನ ನೀಡಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಕಲಾ ಕಾಲೇಜಿನ ಐಕ್ಯೂಐಸಿ ಸಹ ಸಂಚಾಲಕಿ ಹಾಗೂ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕಿ ಡಾ.ಲೀಲಾವತಿ, ಕಾಲೇಜು ಅಧ್ಯಾಪಕ ಸಂಘದ ಕಾರ್ಯದರ್ಶಿ ಹಾಗೂ ಅರ್ಥಶಾಸ್ತ್ರ ಪ್ರಾಧ್ಯಾಪಕ ಹನುಮಂತಪ್ಪ, ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಬಿ.ಬಸವರಾಜ್ಮಹಿಳಾ ಸಂಚಾಲಕಿ ಬೈಲಮ್ಮ, ಪ್ರತಿಭಾ ಅಕಾಡೆಮಿಯ ಪ್ರಕಾಶ್ ರಾಮನಾಯ್ಕ್. ಮಾನವ ಬಂಧುತ್ವ ವೇದಿಕೆಯ ವಿವಿಧ ತಾಲ್ಲೂಕುಗಳ ಸಂಚಾಲಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

Share This Article
error: Content is protected !!
";