ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
ಮದುವೆ ಮಾಡಲಿಲ್ಲ ಎಂದು ಹೆತ್ತ ತಂದೆಯನ್ನೇ ಪಾಪಿ ಮಗನೊಬ್ಬ ಕೊಲೆಗೈದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಅತ್ತಿಘಟ್ಟ ಗ್ರಾಮದಲ್ಲಿ ನಡೆದಿದೆ.
ಪಾಪಿ ಪುತ್ರ ಲಿಂಗರಾಜ್ ನಿಂದ ಕೊಲೆಯಾದ ತಂದೆ ಸಣ್ಣ ನಿಂಗಪ್ಪ (60).
ಪಾಪಿ ಪುತ್ರ ಲಿಂಗರಾಜ್ ಎಂಬಾತ ತಂದೆಯನ್ನೇ ಕೊಲೆಗೈದು ಆರೋಪಿಯಾಗಿದ್ದಾನೆ. ಮನೆಯಲ್ಲಿ ಮದುವೆ ವಿಚಾರಕ್ಕೆ ಜಗಳ ಮಾಡಿದ್ದು, ತಂದೆಯ ತಲೆಗೆ ರಾಡ್ ನಿಂದ ಹೊಡೆದು ಹತ್ಯೆ ಮಾಡಿದ್ದಾನೆ.
ತಂದೆಯನ್ನು ಹತ್ಯೆ ಮಾಡಿದ ಆರೋಪಿ ಲಿಂಗರಾಜನನ್ನ ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಹೊಸದುರ್ಗ ಪಿ.ಐ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.

