ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದ ವಿಚಾರವಾಗಿ ಕರ್ನಾಟಕ ಹೈಕೋರ್ಟ್ ಪಕ್ಕದ ಮನೆಯವರ ಮೇಲೆ 498ಎ ಅಡಿ ಕೇಸ್ ದಾಖಲಿಸುವಂತಿಲ್ಲ ಎಂದು ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಮಹತ್ವದ ಆದೇಶ ನೀಡಿದೆ.
ಮಹಿಳೆಯೊಬ್ಬರು ತಮ್ಮ ಮೇಲೆ ದಾಖಲಾಗಿರುವ ಕೇಸ್ ರದ್ದುಪಡಿಸುವಂತೆ ಸಲ್ಲಿಸಿದ್ದ ಅರ್ಜಿ ಮಾನ್ಯಮಾಡಿದ ಹೈಕೋರ್ಟ್ ಪೀಠವು ದೂರು ರದ್ದುಗೊಳಿಸಿದೆ. ಮುನಿರತ್ನಮ್ಮ ಎಂಬಾಕೆ ಪತಿ, ಅತ್ತೆ, ಮಾವ, ನಾದಿನಿ ಹಾಗೂ ಪಕ್ಕದ ಮನೆ ಮಹಿಳೆ ಮೇಲೂ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ದೂರು ದಾಖಲಿಸಿದ್ದರು. ಆದರೆ 498ಎ ಅಡಿ ಸಂಬಂಧಿಗಳ ವಿರುದ್ಧ ದೂರು ದಾಖಲಿಸಬಹುದೇ ಹೊರತು, ಪಕ್ಕದ ಮನೆಯವರ ವಿರುದ್ಧ ದೂರಿಗೆ ಅವಕಾಶವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ವೈವಾಹಿಕ ವಿವಾದದಲ್ಲಿ ಪತಿ, ಪತ್ನಿ ಅಥವಾ ಇತರ ಕುಟುಂಬ ಸದಸ್ಯರ ನಡುವಿನ ವಿಷಯದಲ್ಲಿ ಪರಿಚಿತವಲ್ಲದ ವ್ಯಕ್ತಿ ಅಥವಾ ನೆರೆಹೊರೆಯವರನ್ನು ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಪ್ರಕರಣಕ್ಕೆ ಒಳಪಡಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಜೊತೆಗೆ ಆಶಾ ಎಂಬುವರ ವಿರುದ್ಧದ ದೂರನ್ನೂ ಸಹ ಪೀಠವು ರದ್ದುಪಡಿಸಿದೆ. ಆಶಾ ಅವರ ವಿರುದ್ಧ ಐಪಿಸಿ ಸೆಕ್ಷನ್498ಎ, 504, 506, 323 ಹಾಗೂ 34 ಅಡಿಯಲ್ಲಿ ಆರೋಪಿಯಾಗಿಸಲಾಗಿತ್ತು.

