ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾರಿಗೆ ನಿಗಮದಲ್ಲಿನ ಸಿಬ್ಬಂದಿಗಳ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಉನ್ನತ  ವಿದ್ಯಾಭ್ಯಾಸ ಮಾಡಿ, ಹೆಚ್ಚಿನ ಅಂಕಗಳಿಸಿ ಚಿನ್ನದ ಪದಕ ಪಡೆದಿರುವ 06 ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ 5,000 ರೂ.ಗಳ ಗೌರವಧನ, ಪ್ರಮಾಣ ಪತ್ರ (ಹಾಗೂ ನಾನು ವೈಯಕ್ತಿಕವಾಗಿ ಎಲ್ಲಾ 06 ವಿದ್ಯಾರ್ಥಿಗಳಿಗೆ ತಲಾ ರೂ.20,000 ಗಳಂತೆ ನಗದು ಬಹಮಾನ) ನೀಡಿ ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ ಅವರು ಸನ್ಮಾನಿಸಿದರು.

1) ಡಾ. ಗಗನ ಎಂ., ಎಂ.ಬಿ.ಬಿ.ಎಸ್., (ಮುನಿರಾಜಪ್ಪ ಕೆ.ಇ., ಕುಶಲಕರ್ಮಿ, ಬಿ.ಸಂ. 1417, ಪ್ರಾದೇಶಿಕ ಕಾರ್ಯಗಾರ, ಕೆಂಗೇರಿ, ಬೆಂಗಳೂರು ರವರ ಮಗಳು) ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಚಿನ್ನದ ಪದಕ ಪಡೆದಿರುತ್ತಾರೆ.

- Advertisement - 

2) ಕು.ವಿಸ್ಮಯ ಟಿ.ಆರ್, M.Tech (ರೇಣುಕಾರ್ಯ ಟಿ.ಕೆ., ಚಾಲಕ ಕಂ ನಿರ್ವಾಹಕ, ಬಿ.ಸಂ 1795/16747, ಪುತ್ತೂರು ವಿಭಾಗ ರವರ ಮಗಳು) ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಚಿನ್ನದ ಪದಕ ಪಡೆದಿರುತ್ತಾರೆ.

3)  ಕು.ರೂಫಿಯಾ ಕೆ.ಎಂ, M.Sc (ಮಹಬೂಬ್ ಸಾಬ್ ಹೆಚ್. ಸಂಚಾರ ನಿಯಂತ್ರಕರು, ಚಿಕ್ಕಬಳ್ಳಾಪುರ ವಿಭಾಗ ರವರ ಮಗಳು) ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ 07 ಚಿನ್ನದ ಪದಕ ಪಡೆದಿರುತ್ತಾರೆ.

- Advertisement - 

4) ಕು.ಸತೀಶ್ ಕುಮಾರ್ ದೊಡ್ಡಮನಿ, Master of Performing Arts- Drama (ಪದ್ದವ್ವ ಗಣಿ, ಚಾಲಕ ಕಂ ನಿರ್ವಾಹಕಿ, ಬಿ.ಸಂ. 6404, ಬೆಂಗಳೂರು ಕೇಂದ್ರೀಯ ವಿಭಾಗ, 6ನೇ ಘಟಕ ರವರ ಮಗ) ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಚಿನ್ನದ ಪದಕ ಪಡೆದಿರುತ್ತಾರೆ.

5) ಡಾ. ಸಾನಿಯಾ ಬಿ.ಬಿ., Bachelor of Dental Surgery (BDS) ( ಅಕ್ರಂ ಪಾಷ, ಚಾಲಕ-ಕಂ-ನಿರ್ವಾಹಕ, ಬಿ.ಸಂ. 760, ಮೈಸೂರು ನಗರ ವಿಭಾಗ, ನಂಜನಗೂಡು ಘಟಕ ರವರ ಮಗಳು) ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ, 07 ಚಿನ್ನದ ಪದಕ ಹಾಗೂ 02 ಬೆಳ್ಳಿ ಪದಕ ಪಡೆದಿರುತ್ತಾರೆ.
6)
ಕು.ಟಿ. ಹರ್ಮೀನ್, B.Sc (ತಾಯಬ್ ಅಹ್ಮದ್, ನಿರ್ವಾಹಕ, ಬಿ.ಸಂ. 1219, ಮೈಸೂರು ಗ್ರಾಮಾಂತರ ವಿಭಾಗ ರವರ ಮಗಳು) ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ, 06 ಚಿನ್ನದ ಪದಕ ಪಡೆದಿರುತ್ತಾರೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಠಿಣ ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸ ಇವುಗಳೇ  ಯಶಸ್ಸಿನ ಮಂತ್ರಗಳು. ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು  ಬಳಸಿಕೊಂಡು‌ವಿಜ್ಞಾನ, ತಂತ್ರಜ್ಞಾನ, ಕಲೆ, ಕ್ರೀಡೆ ಅಥವಾ ಯಾವುದೇ ಕ್ಷೇತ್ರವಾಗಿರಲಿ ನೀವು ಆಸಕ್ತಿ ಹೊಂದಿರುವ ಕ್ಷೇತ್ರದಲ್ಲಿ ಶ್ರೇಷ್ಠತೆ ಸಾಧಿಸಲು ಪ್ರಯತ್ನಿಸಿ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲನಾ, ತಾಂತ್ರಿಕ ಸಿಬ್ಬಂದಿಗಳು ಬಹಳ ಶ್ರಮ ಜೀವಿಗಳಾಗಿದ್ದು, ಇವರುಗಳು ಸಾರ್ವಜನಿಕರ ಸೇವೆಗೆ ಹೆಚ್ಚಿನ ಅವಧಿಯನ್ನು ಮೀಸಲಿಟ್ಟು, ಕುಟುಂಬಕ್ಕೆ ಸಮಯವನ್ನು ನೀಡಲು ಕಷ್ಟಸಾಧ್ಯವಾಗಿರುತ್ತದೆ. ಆದರೂ ಸಹ ತಾವುಗಳು ಪೋಷಕರ ಶ್ರಮವನ್ನು ಅರ್ಥ ಮಾಡಿಕೊಂಡು ಉತ್ತಮ ವಿದ್ಯಾಭ್ಯಾಸ ಪಡೆದು ಚಿನ್ನದ ಪದಕ ಗಳಿಸಿ ಅವರಿಗೆ  ಗೌರವ ತಂದಿರುವುದು ಶ್ಲಾಘನೀಯ. ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ  ಎಲ್ಲಾ ರೀತಿಯಲ್ಲಿ ಶ್ರಮವಹಿಸಿದ ಎಲ್ಲಾ ಪೋಷಕರಿಗೂ ಇದೇ ಸಂದರ್ಭದಲ್ಲಿ ಸಚಿವರು ಅಭಿನಂದನೆ ಸಲ್ಲಿಸಿದರು.  

ನಿಮ್ಮ ಜ್ಞಾನವನ್ನು ಕೇವಲ ನಿಮ್ಮ ಲಾಭಕ್ಕಾಗಿ ಮಾತ್ರವಲ್ಲ, ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಬಳಸಿ ಯಶಸ್ಸು ಖಂಡಿತ ನಿಮ್ಮದಾಗುತ್ತದೆ. ನಿಮ್ಮ ಭವಿಷ್ಯ ಪ್ರಕಾಶಮಾನವಾಗಲಿ ಎಂದು ಅವರು ಹಾರೈಸಿದರು.

ನಿಗಮದಲ್ಲಿನ ಸಿಬ್ಬಂದಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಾರಿಗೆ ವಿದ್ಯಾಚೇತನ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆ ಅಡಿಯಲ್ಲಿ ಈವರೆಗೂ 5,450 ವಿದ್ಯಾರ್ಥಿಗಳಿಗೆ ರೂ.2.76 ಕೋಟಿಗಳ ವಿದ್ಯಾರ್ಥಿ ವೇತನ ನೀಡಲಾಗಿರುತ್ತದೆ ಎಂದು ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ಬೆಂ.ಮ.ಸಾ. ಸಂಸ್ಥೆ ಅಧ್ಯಕ್ಷ ವಿ.ಎಸ್‌. ಆರಾಧ್ಯ, ಕರಾರಸಾ ನಿಗಮ ಉಪಾಧ್ಯಕ್ಷ ಮೊಹಮ್ಮದ್‌ರಿಜ್ವಾನ್‌ನವಾಬ್, ಕರಾರಸಾ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ಕರಾರಸಾ (ಸಿ ಮತ್ತು ಜಾ) ನಿಗಮದ ನಿರ್ದೇಶಕಿ ಡಾ. ನಂದಿನಿದೇವಿ ಕೆ, ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

 

Share This Article
error: Content is protected !!
";