ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಜನವರಿ 10ರಿಂದ 12ವರೆಗೆ ಸ್ವಾಮಿ ವಿವೇಕಾನಂದರ 164ನೇ ಜಯಂತ್ಯುತ್ಸವ ಸತ್ಸಂಗ ಕಾರ್ಯಕ್ರಮ ಆಯೋಜಿಸಿದ್ದು ಪ್ರತಿದಿನ ಸಂಜೆ 5.30 ರಿಂದ 7.30ರವರೆಗೆ ವಿವಿಧ ಸೇವಾ ಕಾರ್ಯಕ್ರಮಗಳು ನಡೆಯಲಿವೆ.
ಮೊದಲ ದಿನ ಶ್ರೀಶಾರದಾಶ್ರಮದ ಯುವ ಸಂಘದಿಂದ “ವಿವೇಕ ಸ್ಪೂರ್ತಿ” ನಾಟಕ ಪ್ರದರ್ಶನ, ಎರಡು ಮತ್ತು ಮೂರನೇ ದಿನ ಜೀವ ಶಿವ ಸೇವೆಯ ಕುರಿತು ಯುವಕ-ಯುವತಿಯರಿಂದ ಅನಿಸಿಕೆಗಳು,
ಚಳ್ಳಕೆರೆಯ ಬಾಪೂಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಟಿ.ಬಸವರಾಜಪ್ಪ ಅವರಿಂದ ವಿಶೇಷ ಉಪನ್ಯಾಸ, ಪೂಜ್ಯ ಮಾತಾಜೀ ತ್ಯಾಗಮಯೀ ಅವರಿಂದ ಸ್ವಾಮಿ ವಿವೇಕಾನಂದರ ಬಗ್ಗೆ ವಿಶೇಷ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀಶಾರದಾಶ್ರಮದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

