ಜೆಡಿಎಸ್‌ ಯಾವತ್ತಿದ್ದರೂ ಕನ್ನಡಿಗರ ಪ್ರಾಪರ್ಟಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಿಸ್ಟರ್‌ಡಿ.ಕೆ ಶಿವಕುಮಾರ್, ಜೆಡಿಎಸ್‌ಪಕ್ಷದ ಬಗ್ಗೆ ದಿನನಿತ್ಯ ಮಾತಾಡಿಲ್ಲ ಎಂದರೇ, ಕರ್ನಾಟಕ ಕಾಂಗ್ರೆಸ್ ಪಾರ್ಟಿಯಲ್ಲಿ ನಿಮಗೆ ಮೂರು ಕಾಸಿನ ಬೆಲೆ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದು ಜೆಡಿಎಸ್ ದೂರಿದೆ.

ಜೆಡಿಎಸ್‌ಅವರ ಪರ್ಸನಲ್‌ಪ್ರಾಪರ್ಟಿ” ಎನ್ನುವ ನೀವು, ಮೊದಲು ಕಾಂಗ್ರೆಸ್ ಪಕ್ಷ ಯಾವ ಒಂದು ಕುಟುಂಬದ ಕಪಿಮುಷ್ಠಿಯಲ್ಲಿದೆ ಎಂಬುದರ ಅರಿವು ಇದೆಯೇ ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

- Advertisement - 

ನಕಲಿ ಗಾಂಧಿ ಕುಟುಂಬದ ಗುಲಾಮಗಿರಿಯಲ್ಲಿ ಅಧ್ಯಕ್ಷಗಿರಿ ಗಿಟ್ಟಿಸಿಕೊಂಡಿರುವ ನೀವು, ಜೆಡಿಎಸ್‌ಪಕ್ಷದ ಬಗ್ಗೆ ಮಾತನಾಡಲು ಯಾವ ಅರ್ಹತೆ ಇದೆ ?

ಜೆಡಿಎಸ್‌ಪಕ್ಷದಿಂದಲೇ ಬಂದವರು ಸಿದ್ದರಾಮಯ್ಯ ಹಾಗೂ ನಿಮ್ಮ ಸಂಪುಟದ ಬಹುತೇಕ ಮಂತ್ರಿಗಳು ನಮ್ಮ ಜೆಡಿಎಸ್‌ʼನಿಂದಲೇ ಬಂದವರು.

- Advertisement - 

ಜೆಡಿಎಸ್‌ಯಾವತ್ತಿದ್ದರೂ ಕನ್ನಡಿಗರ ಪ್ರಾಪರ್ಟಿ”. ಧೀನದಲಿತರು, ಬಡವರು, ನಿರ್ಗತಿಕರ ಸಾವಿರಾರು ಕೋಟಿ ಬೆಲೆಬಾಳುವ ಪ್ರಾಪರ್ಟಿಯನ್ನು ಕಬಳಿಸಿರುವ ಡಿಕೆ ಶಿವಕುಮಾರ್‌ನಿಮ್ಮಂತಲ್ಲ ನಮ್ಮ ಜೆಡಿಎಸ್‌ಪಕ್ಷ ಎಂದು ಜೆಡಿಎಸ್ ಟಾಂಗ್ ನೀಡಿದೆ.

 

 

Share This Article
error: Content is protected !!
";