ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಬಿಜಿ ರಾಮ್‌ಜೀ (VB-G RAM G) ಯೋಜನೆ ಬಗ್ಗೆ ಹತಾಶೆಯಿಂದ ಕಾಂಗ್ರೆಸ್‌ಅಪಪ್ರಚಾರ ಮಾಡುತ್ತಿದೆ. ವಿಬಿಜಿ ರಾಮ್‌ಜೀ ಯೋಜನೆಯು ನಿರುದ್ಯೋಗಿಗಳ ಹೆಸರಲ್ಲಿ ಹಣ ದುರುಪಯೋಗಕ್ಕೆ ಕಡಿವಾಣ ಹಾಕಲಿದೆ.
ಅಲ್ಲದೆ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಆರ್ಥಿಕ ಶಕ್ತಿ ತುಂಬಲಿದೆ ಎಂದು ಕೇಂದ್ರ ಬೃಹತ್‌ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

