ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರ ಪೋಲಿಸ್ ಟಾಣೆ ಸಹಯೋಗದೊಂದಿಗೆ ಹಲೋ ದೊಡ್ಡಬಳ್ಳಾಪುರ ಪತ್ರಿಕೆ ಮತ್ತು ಡಮರುಗ ಸತ್ಯದ ನೆರಳು ಯೂಟ್ಯೂಬ್ ಚಾನೆಲ್ ವತಿಯಿಂದ ಉಚಿತ ಹೆಲ್ಮೆಟ್ ವಿತರಣೆ ಹಾಗೂ ಹೆಲ್ಮೆಟ್ ಅರಿವು ಕಾರ್ಯಕ್ರಮವನ್ನ ದೊಡ್ಡಬಳ್ಳಾಪುರ ಪೋಲಿಸ್ ಟಾಣೆ ಮುಂಬಾಗದಲ್ಲಿ ಇಂದು ಆಯೋಜಿಸಲಾಗಿತ್ತು.
ಹೆಲ್ಮೆಟ್ ಅರಿವು ಕಾರ್ಯಕ್ರಮದಲ್ಲಿ ವಯಸ್ಸಾದವರಿಗೆ, ಅಂಗವಿಕಲರಿಗೆ, ಹಳ್ಳಿ ಜನರಿಗೆ ಹಣ ಪಡೆಯದೇ ಉಚಿತ ಹೆಲ್ಮೆಟ್ ನೀಡಲಾಯಿತು. ಉಳಿದಂತೇ ಕೆಲವರಿಗೆ 50% ದರದಲ್ಲಿ ಹೆಲ್ಮೆಟ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರದ ಹಿರಿಯ ನ್ಯಾಯಮೂರ್ತಿಗಳು, ವಕೀಲರ ಸಂಘದ ಅಧ್ಯಕ್ಷರು ಹಾಗೂ ಪದಾದಿಕಾರಿಗಳು, ನಗರ ಪೋಲಿಸ್ ಇನ್ಸ್ಪೆಕ್ಟರ್ ಅಮರೇಶ್ ಗೌಡ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಹೆಲ್ಮೆಟ್ ಧರಿಸದೇ ಇತ್ತೀಚಿನ ದಿನಗಳಲ್ಲಿ ತಲೆಗೆ ಪೆಟ್ಟು ಬಿದ್ದು ಅಫಘಾತಗಳಲ್ಲಿ ಸಾವನಪ್ಪುತ್ತಿರುವ ಹಿನ್ನಲೆಯಲ್ಲಿ ದೊಡ್ಡಬಳ್ಳಾಪುರ ಭಾಗದಲ್ಲಿ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಹೆಲ್ಮೆಟ್ ಧರಿಸದ ವಾಹನ ಸವಾರರಿಗೆ 500ರೂ ದಂಡ ವಿಧಿಸಲಾಗುತ್ತದೆ. ಆದರೇ ಇಂದು ಹೆಲ್ಮೆಟ್ ಅರಿವು ಕಾರ್ಯಕ್ರಮದಲ್ಲಿ ದಂಡ ವಿಧಿಸದೇ ಮೂರು ನೂರು ರೂಪಾಯಿಗಳಿಗೆ ಹೆಲ್ಮೆಟ್ ಕೊಟ್ಟು ಹೆಲ್ಮೆಟ್ ನ ಮಹತ್ವವನ್ನ ತಿಳಿಸಿ ಹೇಳಲಾಗುತ್ತಿತ್ತು. ಹೆಲ್ಮೆಟ್ ಕಡ್ಡಾಯ ಯೋಜನೆ ಜನ ಸಾಮಾನ್ಯರಿಂದ ಬಾರಿ ಮೆಚ್ಚುಗೆ ಪಡೆದಿದ್ದು 70% ವಾಹನ ಸವಾರರು ಹೆಲ್ಮೆಟ್ ಧರಿಸುತ್ತಿರುವುದು ಸಂತಸದ ವಿಷಯವಾಗಿದೆ.

