ಜವಳಿ ಮಾರುಕಟ್ಟೆ ಸಂಕಿರ್ಣ ನಿರ್ಮಾಣದಿಂದ ನೇಕಾರರಿಗೆ ಅನುಕೂಲ-ಕೆ. ಹೆಚ್. ಮುನಿಯಪ್ಪ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಜಿಲ್ಲೆಯಲ್ಲಿ ಜವಳಿ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ವಾಗುವುದರಿಂದ ಸ್ಥಳೀಯ ನೇಕಾರರಿಗೆ ಹಾಗೂ ಸೀರೆ ಉತ್ಪಾದಕರಿಗೆ ವ್ಯಾಪಾರ ವಹಿವಾಟಿಗೆ ಉತ್ತೇಜಿಸಲು ಸಹಕಾರಿಯಾಗಲಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ನವರು ಹೇಳಿದರು.

ದೊಡ್ಡಬಳ್ಳಾಪುರ ನಗರದಲ್ಲಿ ನೇಕಾರರ ಜವಳಿ ಮಾರುಕಟ್ಟೆ ಸಂಕೀರ್ಣದ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ  ಮಾತನಾಡಿದ ಅವರು ಸರ್ಕಾರದ ಅನುದಾನ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಅನುದಾನ ಸೇರಿ 2.70 ಕೋಟಿ ರೂ. ವೆಚ್ಚದಲ್ಲಿ 30 ಮಳಿಗೆಗಳ ಎರಡು ಮಹಡಿಯ ಕಟ್ಟಡ ನಿರ್ಮಾಣ ವಾಗಲಿದ್ದು, ಮೊದಲ ಹಂತದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ 15 ಮಳಿಗೆಗಳು ನಿರ್ಮಾಣ ವಾಗಲಿವೆ. ಇದರಿಂದಾಗಿ ಸ್ಥಳೀಯ ನೇಕಾರರು ತಾವು ಉತ್ಪಾದಿಸುವ ಸೀರೆಯ ಜವಳಿ ವ್ಯಾಪಾರಕ್ಕೆ ಬಹಳಷ್ಟು ಅನುಕೂಲವಾಗುವ ಜತೆಗೆ ನಮ್ಮ ರೇಷ್ಮೆ ಬೆಳೆಗಾರರನ್ನು ಉತ್ತೇಜಿಸ ಲಾಗುವುದು ಎಂದರು.

- Advertisement - 

 ನಂತರ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಅವರು ಮಾತನಾಡಿ ಈ ಜವಳಿ ಮಾರುಕಟ್ಟೆ ಸಂಕೀರ್ಣ ಸ್ಥಾಪನೆಯಿಂದ ಸ್ಥಳೀಯ ನೇಕಾರರು ನೇಯ್ದ ಸೀರೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಸಿಗಲಿದೆ. ಇದರಿಂದ ನೇಕಾರರಿಗೆ ಮಧ್ಯವರ್ತಿಗಳ ಅವಲಂಬನೆ ತಪ್ಪಿಸಿ, ನ್ಯಾಯಯುತ ಮತ್ತು ಲಾಭದಾಯಕ ಆರ್ಥಿಕವಾಗಿ ಸದೃಢರಾಗಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಬಿ. ರಾಜಣ್ಣ, ನಗರಸಭೆ ಅಧ್ಯಕ್ಷ ಸುಮಿತ್ರಾ ಕೆ. ಆನಂದ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಚುಂಚೇ ಗೌಡ, ಜಿಲ್ಲಾ ಜವಳಿ ಮತ್ತು ಕೈಮಗ್ಗ ಇಲಾಖೆ ಉಪನಿರ್ದೇಶಕರಾದ ಸುರೇಶ್ ಕುಮಾರ್. ಕೆಪಿಸಿಸಿ ಸದಸ್ಯರಾದ ಲಕ್ಷ್ಮೀಪತಿ, ಬಿ. ಜಿ. ಹೇಮಂತರಾಜ್, ನಗರಸಭಾ ಸದಸ್ಯರಾದ ಶಿವ ಶಂಕರ್(ಶಂಕ್ರಿ), ಶಿವಣ್ಣ, ಆನಂದ್, ಚಂದ್ರಮೋಹನ್, ಸೇರಿದಂತೆ  ಹಲವಾರು ಕಾಂಗ್ರೆಸ್, ಬಿಜೆಪಿ ಮುಖಂಡರು ಹಾಗೂ ನೇಕಾರ ಸಂಘಟನೆಗಳ  ಮುಖಂಡರುಉಪಸ್ಥಿತರಿದ್ದರು.

- Advertisement - 

 

Share This Article
error: Content is protected !!
";