ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗ ಚಿತ್ರದುರ್ಗ ನಗರದ ಕ್ರೀಡಾ ಭವನದಲ್ಲಿ ಕಂಪಳ ಗೆಳೆಯರ ಬಳಗ ವತಿಯಿಂದ ಏರ್ಪಡಿಸಿದ ಸನ್ಮಾನ ಹಾಗೂ ಗೆಳೆಯರ 5ನೇ ವಾರ್ಷಿಕ ಸಮ್ಮಿಲನ ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯ ಪ್ರೊ. ಟಿ.ಎಸ್. ಹೂವಯ್ಯ ಗೌಡ ಉದ್ಘಾಟಿಸಿದರು.
ನಂತರ ಮಾತನಾಡಿದ ಹೂವಯ್ಯಗೌಡ, ನಾನು ಚಿತ್ರದುರ್ಗ ಕಲಾ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಹಾಗೂ ಎನ್. ಸಿ. ಸಿ. ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿ ನಂತರ ಶಿವಮೊಗ್ಗಕ್ಕೆ ವರ್ಗಾವಣೆ ಗೊಂಡೆ. ನನ್ನ ಚಿತ್ರದುರ್ಗ ಕಲಾ ಕಾಲೇಜಿನ ಸೇವೆ ನನಗೆ ಗೌರವ ಮತ್ತು ಕೀರ್ತಿಯನ್ನು ತಂದುಕೊಟ್ಟು ನನ್ನನ್ನು ಉನ್ನತ ಮಟ್ಟಕ್ಕೆ ಬೆಳೆಸುವಂಥಾಯಿತು ಎಂದರು.
ಈಗಲೂ ಸಹ ನಾನು ಕಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಮತ್ತು ಸಹೋದ್ಯೋಗಿಗಳನ್ನು ಸದಾ ನೆನಪಿಸಿಕೊಳ್ಳುತ್ತೇನೆ. ಚಿತ್ರದುರ್ಗ ಕಲಾ ಕಾಲೇಜಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದು ತಿಳಿಸಿ ಗೌಡರು ಭಾವುಕರಾದರು.
ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನನ್ನ ಪ್ರೀತಿಯ ವಿದ್ಯಾರ್ಥಿಗಳನ್ನು ಮತ್ತು ಸಹೋದ್ಯೋಗಿಗಳನ್ನು ದಶಕಗಳ ನಂತರ ನೋಡುವುದಕ್ಕೆ ಅವಕಾಶ ದೊರೆತು ಸಂತೋಷವಾಯಿತು. ಇದರಿಂದ ನನ್ನ ಆಯಸ್ಸು ಹೆಚ್ಚಾಯಿತು ಎಂದು ಭಾವಿಸಿದ್ದೇನೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಮತ್ತು ಸಮಯ ಪ್ರಜ್ಞೆ ಬಹಳ ಮುಖ್ಯ ಎಂದು ಕಿವಿಮಾತು ತಿಳಿಸಿದರು.
ಇದೇ ಸಂದರ್ಭದಲ್ಲಿ ಗುರುಗಳಾದ ಪ್ರೊ. ಟಿ. ಎಸ್. ಹೂವಯ್ಯ ಗೌಡ ರವರನ್ನು ಕಂಪಳ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಬಳಗದ ಗೌರವಾಧ್ಯಕ್ಷ ನಿವೃತ್ತ ಜಂಟಿ ನಿರ್ದೇಶಕ ಎಂ.ರೇವಣಸಿದ್ದಪ್ಪ ಪ್ರಾಸ್ತಾವಿಕ ನುಡಿಯಲ್ಲಿ ಕಂಪಳ ಗೆಳೆಯರ ಬಳಗವು ಒಂದು ಜಾತ್ಯತೀತ ಮತ್ತು ಧರ್ಮರಹಿತ ಸೌಹಾರ್ದ ಬಳಗವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಡಾ. ಚಂದ್ರಪ್ಪ ವಿರಚಿತ ಡಾ. ಬಿ.ಆರ್. ಅಂಬೇಡ್ಕರ್ ರವರ ವಿರಚಿತ ‘ಜಾತಿ ವಿನಾಶ‘ ಅನುವಾದ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ಪುಸ್ತಕ ಕುರಿತು ನಿವೃತ್ತ ಪ್ರಾಚಾರ್ಯ ಡಾ.ಅಂಜಿನಪ್ಪ, ಪ್ರೊ.ಹೆಚ್. ಲಿಂಗಪ್ಪ, ಪ್ರೊ. ಸಿ. ಕೆ. ಮಹೇಶ್ವರಪ್ಪ, ಪ್ರೊ. ಅಶೋಕ್ ಕುಮಾರ್ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಡಾ. ಮಂಜಣ್ಣ, ಜೈ ಶ್ರೀನಿವಾಸ್, ಇವರುಗಳನ್ನು ಬಳಗದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತರು ತಮ್ಮ ಅನಿಸಿಕೆಗಳ ಬಗ್ಗೆ ಮಾತನಾಡಿದರು.
ಬಳಗದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ ಮಾತನಾಡಿ ಪ್ರೊ. ಟಿ.ಎಸ್. ಹೂವಯ್ಯ ಗೌಡರು ನಾನು ಚಿತ್ರದುರ್ಗ ಕಲಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುವಾಗ ನನ್ನ ಗುರುಗಳು, ಎನ್.ಸಿ.ಸಿ ಕೆಡೆಟ್ ಆದಾಗ ಎನ್ ಸಿ ಸಿ ಕ್ಯಾಪ್ಟನ್ ಸಹ ಆಗಿದ್ದರು. ನನ್ನ ಗುರುಗಳು ನನಗೆ ಅರೆಕಾಲಿಕ ಉಪನ್ಯಾಸಕರ ಸೇವೆ ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಟ್ಟು ನನ್ನ ಜೀವನ ಭದ್ರತೆ ರೂಪಿಸಿ ಕೊಟ್ಟಂತ ಗುರುಗಳಿಗೆ ನಾನು ಚಿರಋಣಿಯಾಗಿರುತ್ತೇನೆ.
ಟಿ.ಎಸ್. ಹೂವಯ್ಯ ಗೌಡರವರ ಕಲಾ ಕಾಲೇಜಿನ ಪ್ರಾಚಾರ್ಯರ ಅವಧಿ ಒಂದು ಸುವರ್ಣ ಯುಗ ಎಂದು ಬಣ್ಣಿಸಿದರು. ಜಂಟಿ ನಿರ್ದೇಶಕ ವಿ. ಅಜ್ಜಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ನಾವುಗಳೆಲ್ಲರೂ ಗ್ರಾಮೀಣ ಭಾಗದಿಂದ ಬಂದವರು ನಾವು ಎಂದು ಸಹ ಒಳ್ಳೆ ಸರ್ಕಾರಿ ಉದ್ಯೋಗ ಪಡೆಯುತ್ತೇವೆ ಎಂಬ ಕನಸು ಕಂಡಿರಲಿಲ್ಲ ನಮ್ಮಗಳ ಸ್ವಂತ ಪ್ರಯತ್ನದಿಂದ ನಾವುಗಳೇ ಜೀವನ ರೂಪಿಸಿಕೊಂಡೆವು ಎಂದರು.
ಮುಂದಿನ ದಿನಗಳಲ್ಲಿ ನಮ್ಮ ಬಳಗದ ವತಿಯಿಂದ ಒಳ್ಳೆ ಒಳ್ಳೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಣ ಎಂದು ತಿಳಿಸಿದರು.
ನಿವೃತ್ತ ಜಂಟಿ ನಿರ್ದೇಶಕ ಎಂ. ರೇವಣಸಿದ್ದಪ್ಪ, ಲಲಿತಮ್ಮ ರೇವಣಸಿದ್ದಪ್ಪ, ಡಾ. ಅಂಜಿನಪ್ಪ, ಪ್ರೊ. ರವಿ, ಲೇಖಕ ಡಾ. ಚಂದ್ರಪ್ಪ, ಯುವ ಮುಖಂಡ ಪ್ರತಾಪ್ ಜೋಗಿ, ಬೆಂಗಳೂರು ಗೃಹ ರಕ್ಷಕ ದಳ ಅಧಿಕಾರಿ ಹಾಗೂ ಬಳಗದ ಖಜಾಂಚಿ ಆರ್. ಪಿ. ಜಯಣ್ಣ, ತಿಪಟೂರು ಬಸವರಾಜ್, ಹಿಂದಿ ಶಿಕ್ಷಕ ನಾಗರಾಜ್ (ಸಾದಂ ), ಮೈಸೂರ್ ರಾಮಣ್ಣ, ನೆಲಗತನಹಟ್ಟಿ ಮ್ಯಾಕಲ್ ಬೋರಯ್ಯ, ಬಾಲಕಿಯರ ಪಿಯು ಕಾಲೇಜ್ ಉಪನ್ಯಾಸಕ ಎಚ್ ಶ್ರೀನಿವಾಸ್, ಬಸವರಾಜ್, ಮೋರನಾಳ್, ಸೆಂಟರ್ ನಾಗಭೂಷಣ್ ,ಕೋಗುಂಡೆ ರಾಮಣ್ಣ ಇತರರು ಉಪಸ್ಥಿತರಿದ್ದರು.

