ಡೆಂಘಿ ಜ್ವರಕ್ಕೆ ಬಾಲಕ ಬಲಿ

News Desk

ಚಂದ್ರವಳ್ಳಿ ನ್ಯೂಸ್, ಪಾವಗಡ:
ಕರ್ನಾಟಕದಲ್ಲಿ ವೈರಲ್ ಫಿವರ್ ಜೊತೆಗೆ ಇದೀಗ ಡೆಂಘಿ ಜ್ವರ ಕೂಡ ಒಕ್ಕರಿಸಿಕೊಂಡಿದೆ. ತುಮಕೂರು ಜಿಲ್ಲೆಯ ಪಾವಗಡದಲ್ಲಿ ಡೆಂಘಿ ಜ್ವರಕ್ಕೆ ಓರ್ವ  ಬಾಲಕ ಬಲಿ ಆಗಿದ್ದಾನೆ.

ಹರೀಶ್ ಕುಮಾರ್​ ಎನ್ನುವವರ ಪುತ್ರ ಕರುಣಾಕರ್​(7) ಮೃತ ಬಾಲಕ. ಜಿಲ್ಲೆಯ ಪಾವಗಡ ಪಟ್ಟಣದ ಬಾಬೈಯನ ಗುಡಿಬೀದಿಯಲ್ಲಿ ಘಟನೆ ನಡೆದಿದೆ.

- Advertisement - 

ಪಾವಗಡ ಪಟ್ಟಣದ ಸುಧಾ ಕ್ಲಿನಿಕ್​ನಲ್ಲಿ ಬಾಲಕ ಕಳೆದ 8 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೊನೆ ಕ್ಷಣದವರೆಗೂ ಡೆಂಘಿ ಜ್ವರ ಎಂದು ವೈದ್ಯರು ಪೋಷಕರಿಗೆ ತಿಳಿಸಿಲ್ಲ.

ಹೀಗಾಗಿ ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಧಾ ಕ್ಲಿನಿಕ್ ಮುಂದೆ ಪ್ರತಿಭಟನೆ ಮಾಡಲಾಗಿದೆ. ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement - 

 

Share This Article
error: Content is protected !!
";