ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರೀತಿಸುವಂತೆ ಸದಾ ಪೀಡಿಸುತ್ತಿದ್ದ ಯುವಕನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿಯೊಬ್ಬಳು ಕಾಲೇಜು ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ನಗರದ ಚಿತ್ರಾ ಡಾನ್ ಬಾಸ್ಕೋ ಕಾಲೇಜಿನ ಮೂರನೇ ಮಹಡಿಯಿಂದವಿದ್ಯಾರ್ಥಿನಿ ಪ್ರೇಮಾ(19) ಜಿಗಿದು ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನ ತಕ್ಷಣ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಚಿತ್ರಾ ಡಾನ್ ಬಾಸ್ಕೋ ಕಾಲೇಜಿನಲ್ಲಿ ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಪ್ರೇಮಾ ಮೃತ ವಿದ್ಯಾರ್ಥಿನಿ. ಬೆಳಗ್ಗೆ ಮನೆಯಿಂದ ಕಾಲೇಜಿಗೆ ಹೊರಟು ಕಾಲೇಜಿನ ಮೂರನೇ ಮಹಡಿಯನ್ನ ಏರಿ ಕೆಳಗೆ ಜಿಗಿದು ಪ್ರಾಣ ಕಳೆದುಕೊಂಡಿದ್ದಾಳೆ.
ಕಟ್ಟಡ ಮೇಲಿಂದ ಬಿದ್ದು ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ. ಚಿತ್ರದುರ್ಗ ನಗರದ ಚಿತ್ರಾ ಡಾನ್ ಬೋಸ್ಕೋ ಕಾಲೇಜಲ್ಲಿ ಪ್ರಥಮ ಬಿಎಸ್ಸಿ ಓದುತ್ತಿದ್ದ ಪ್ರೇಮಾ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟವಳು.
ಚಿತ್ರದುರ್ಗದ ಮೆದೆಹಳ್ಳಿ ನಿವಾಸಿಯಾದ ಪ್ರೇಮಾ, ಶುಕ್ರವಾರ ಬೆಳಗ್ಗೆ ಕಾಲೇಜಿಗೆ ಬಂದು ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸ್ಥಳಕ್ಕೆ ಬಡಾವಣೆ ಪೊಲೀಸ್ ಠಾಣೆ ಪಿಎಸ್‌ಐ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಪ್ರೇಮಾಳಿಗೆ ಯುವಕನೊಬ್ಬ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ತರುಣ್‌ಎಂಬಾತ ಪ್ರೀತಿಮಾಡುವಂತೆ ಪ್ರೇಮಾಳಿಗೆ ಪೀಡುಸುತ್ತಿದ್ದ ಎನ್ನಲಾಗಿದೆ. ವಾಟ್ಸ್‌ಆ್ಯಪ್‌ನಲ್ಲಿ ನಿತ್ಯವೂ ಚಾಟಿಂಗ್ ಮಾಡಿ ಕಿರಿಕಿರಿ ಮಾಡುತ್ತಿದ್ದ. ಆತನ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ತರುಣ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು.
ಮೃತ ವಿದ್ಯಾರ್ಥಿನಿ ಚಿತ್ರದುರ್ಗ ತಾಲೂಕಿನ ಮೆದೇಹಳ್ಳಿ ಗ್ರಾಮದ ನಿವಾಸಿ ಸುಧಾಕರ್ ಎಂಬುವರ ಮಗಳು ಎಂದು ತಿಳಿದು ಬಂದಿದೆ.
ವಿದ್ಯಾರ್ಥಿನಿಗೆ ಪ್ರೀತ್ಸೆ ಪ್ರೀತ್ಸೆ ಅಂತ ರಘು ಎಂಬ ಹುಡುಗ ವಾಟ್ಸಾಪ್ ಸಂದೇಶಗಳನ್ನು ಕಳಿಸುತ್ತಿದ್ದ, ನೀನು ಪ್ರೀತಿಸದಿದ್ದರೆ ನಾನು ಚಾಕುವಿನಲ್ಲಿ ಕೊಲೆ ಮಾಡಿಕೊಳ್ಳುವುದಾಗಿ ವಾಟ್ಸಪ್ ನಲ್ಲಿ ಚಾಕುವಿನ ಭಾವಚಿತ್ರವನ್ನ ರವಾನಿಸಿದ್ದಾನೆ.
ಭಯ ಬಿದ್ದ ವಿದ್ಯಾರ್ಥಿನಿ ದಿಕ್ಕು ದೋಚದೆ ಚಿತ್ರ ಡಾನ್ ಬಾಸ್ಕೋ ಕಾಲೇಜಿನ ಮೂರನೇ ಮಹಡಿ ಏರಿ ಕೆಳಗೆ ಜಿಗಿದು ಪ್ರಾಣ ಕಳೆದುಕೊಂಡಿದ್ದಾಳೆ. ಮಾಹಿತಿ ತಿಳಿದ ಕೂಡಲೇ ಚಿತ್ರದುರ್ಗ ಜಿಲ್ಲೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಹಾಗೂ ಚಿತ್ರದುರ್ಗ ಬಡಾವಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರೇಮ ಮೃದು ಸ್ವಭಾವದವಳು ಅವಳ ಮೇಲೆ ತುಂಬಾನೇ ಪ್ರೀತಿ ನಮಗೆ, ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೇಳಿದವಳು ಮಗಳು ಸೂಸೈಡ್ ಮಾಡಿಕೊಂಡಿದ್ದಾಳೆ ಎಂದು ಕಾಲೇಜಿನವರು ಫೋನ್ ಮಾಡಿದಾಗ ಭೂಮಿಯ ಕುಸಿದು ಹೋಯಿತು ಎಂದು ಮೃತಳ ತಂದೆ ಸುಧಾಕರ್ ಅವರು ತಿಳಿಸಿದ್ದಾರೆ.
ವಿದ್ಯಾರ್ಥಿನಿ ಮನನೊಂದು ಕಾಲೇಜು ಕಟ್ಟಡದಿಂದ ಜಿಗಿದು ಮೃತಪಟ್ಟಿರುವ ವಿಚಾರವನ್ನು ತಿಳಿದ ಕೂಡಲೇ ಎಬಿವಿಪಿ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆ ಕಾರ್ಯಕರ್ತರು ಕಾಲೇಜು ಮುಂಭಾಗದಲ್ಲಿ ಜಮಾಯಿಸಿ ಕಾಲೇಜು ಆಡಳಿತ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕೆಲವೊಂದಿಷ್ಟು ಸಮಯ ಕಾಲೇಜು ಸಿಬ್ಬಂದಿಗಳ ನಡುವೆ ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ಇದರ ನಡುವೆ ಕಾಲೇಜು ಸಿಬ್ಬಂದಿ ಪ್ರತಿಭಟನ ಕಾರ್ಯಕರ್ತರ ಮೇಲೆ ಏಕಾಏಕಿಯಾಗಿ ದರ್ಪ ತೋರಿದ್ದಾನೆ, ಕಾಲೇಜು ಮುಂಭಾಗದಲ್ಲಿ ಏಕೆ ಪ್ರತಿಭಟನೆ ಮಾಡುತ್ತಿದ್ದೀರಾ? ನೀವು ಯಾರು ಪ್ರತಿಭಟನೆ ಮಾಡುವುದಕ್ಕೆ, ಏನು ಮಾಡಿಕೊಳ್ಳುತ್ತೀರಾ? ಮಾಡ್ಕೊಳ್ಳಿ ಎಂದು ಏರು ಧ್ವನಿಯಲ್ಲಿ ಮಾತನಾಡಿದ್ದಾನೆ ಇದಕ್ಕೆ ಪ್ರತಿಕ್ರಿಸಿದ ಕಾರ್ಯಕರ್ತರು ಕಾಲೇಜು ಸಿಬ್ಬಂದಿಗೆ ಕಪಾಳ ಮೋಕ್ಷ ಹಾಗೂ ತಳ್ಳಾಟ ನಡೆಸಿದ್ದಾರೆ. ಈ ನಡುವೆ ಪೊಲೀಸರು ಮಧ್ಯಸ್ಥಿಕೆ ವಹಿಸಿ ಬಿಗುವಿನ ವಾತಾವರಣವನ್ನು ತಣ್ಣಗೆ ಗೊಳಿಸಿ, ಕಾಲೇಜು ಸಿಬ್ಬಂದಿಯಿಂದ ಕಾರ್ಯಕರ್ತರಿಗೆ ಕ್ಷಮಾಪಣೆಯನ್ನು ಕೇಳಿಸಿ ಪ್ರತಿಭಟನೆಯನ್ನ ಮುಟುಕುಗೊಳಿಸಿದ್ದಾರೆ.
ಪ್ರೇಮಳ ಸಾವಿಗೆ ಕಾರಣವಾದ ರಘು ಎಂಬ ಹುಡುಗ ತಲೆಮರ್ಸಿಕೊಂಡಿದ್ದು, ಚಿತ್ರದುರ್ಗ ಬಡಾವಣೆ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿ ಪತ್ತೆಗಾಗಿ ಭಲೇ ಬೀಸಿದ್ದಾರೆ.
ಚಿತ್ರ ಡಾನ್ ಬಾಸ್ಕೊ ಕಾಲೇಜಿನಲ್ಲಿ ಪ್ರಥಮ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಪ್ರೇಮಾ ಸಾವಿಗೆ ನ್ಯಾಯಕ್ಕಾಗಿ ಹಾಗೂ ಚಿತ್ರ ಡಾನ್ ಬಾಸ್ಕೋ ಕಾಲೇಜು ಆಡಳಿತ ಕಚೇರಿ ವಿರುದ್ಧ ಎಬಿವಿಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಬಿವಿಪಿ ಕಾರ್ಯಕರ್ತ ಗೋಪಿಯವರು ತಿಳಿಸಿದ್ದಾರೆ.