ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರತಿಯೊಂದ ಜಿಲ್ಲೆಗಳಲ್ಲಿ ಬಾಲಕಿಯರ ಹಾಸ್ಟೆಲ್ ಸ್ಥಾಪಿಸುವುದು, ರಾಷ್ಟ್ರೀಯ ಆತಿಥ್ಯ ಸಂಸ್ಥೆಯನ್ನು ಸ್ಥಾಪಿಸುವುದು ಮತ್ತು ಪ್ರಮುಖ ಕೈಗಾರಿಕಾ ಕೇಂದ್ರಗಳ ಬಳಿ ಐದು ಹೊಸ ವಿಶ್ವವಿದ್ಯಾಲಯ ಪಟ್ಟಣಗಳನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಯೋಜನೆಯಾಗಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್‌ಸ್ಥಾಪನೆ ಮಾಡುವುದು ಉತ್ತಮ ಕೆಲಸವಾಗಿದೆ.
10 ಸಾವಿರ ಕೋಟಿ ರೂ ವೆಚ್ಚದ ಬಯೋಫಾರ್ಮಾ ಶಕ್ತಿ ಯೋಜನೆ
ಆ್ಯಕ್ಸಿಡೆಂಟ್ ವಿಮೆ ಪಡೆಯೋರಿಗೆ ಇಲ್ಲ ಟ್ಯಾಕ್ಸ್! ಏ.01ರಿಂದ ನೂತನ ಐಟಿ ಕಾಯ್ದೆ ಜಾರಿ
ಚೆನ್ನೈ-ಬೆಂಗಳೂರು ಸೇರಿದಂತೆ 7 ಹೈಸ್ಪೀಡ್ ರೈಲು ಕಾರಿಡಾರ್‌ಇದು ನಮ್ಮ ಆರ್ಥಿಕತೆಯನ್ನು ಉತ್ತಮ ಪಡಿಸಬಹುದು ಎಂದು ನಮ್ಮ ಭಾವನೆ
ನಮ್ಮ ಹಣಕಾಸು ಸಚಿವರು ಮಂಡಿಸಿದ ಬಜೆಟ್ ನಲ್ಲಿ ಅತ್ಯುತ್ತಮವಾದ ವಿಷಯದ ಬಗ್ಗೆ ಹೇಳುವುದಾದರೆ* 2ನೇ ಮತ್ತು 3ನೇ ಹಂತದ ನಗರಗಳಿಗಳಿಗಾಗಿ ಎಂಎಸ್‌ಎಂಇಗಳಿಗಾಗಿ ಕಾರ್ಪೊರೇಟ್ ಮಿತ್ರ ಯೋಜನೆ ಘೋಷಣೆ.
ಕ್ಯಾನ್ಸರ್ ಸಂಬಂಧಿತ 17 ಔಷಧಿಗಳು, 7 ಅಪರೂಪದ ಕಾಯಿಲೆಗಳಿಗೆ ಸಂಬಮಧಿಸಿದ 7 ಔಷಧಿಗಳ ಮೇಲೆ ತೆರಿಗೆ ವಿನಾಯಿತಿ. ತಮಿಳುನಾಡು, ಕೇರಳ, ಮಧ್ಯ ಪ್ರದೇಶ ಮತ್ತು ಒಡಿಶಾದಲ್ಲಿ ಅಪೂರ್ವ ಖನಿಜಗಳ ಕಾರಿಡಾರ್ ಘೋಷಣೆ. ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ, ಖಾದಿ ಕೈಮಗ್ಗಗಳಿಗೆ ಉತ್ತೇಜನ.
ರಿಫಾರ್ಮ್‌ಎಕ್ಸ್‌ಪ್ರೆಸ್ ಘೋಷಣೆ:
ಉದ್ಯೋಗ ಸೃಷ್ಟಿ, ಉತ್ಪಾದನೆಗೆ ಉತ್ತೇಜನ, ಬೆಳವಣೊಗೆಗ ಉತ್ತೇಜನ ಮೀಸಲು ವ್ಯಾಪಾರ ಕಾರಿಡಾರ್‌ಅಭಿವೃದ್ಧಿಗಾಗಿ ಮುಂದಿನ 5 ವರ್ಷಗಳಲ್ಲಿ 20 ಹೊಸ ಜಲಮಾರ್ಗಗಳನ್ನು ಕಾರ್ಯಗತಗೊಳಿಸಲಾಗುವುದು. ಹಡಗು ದುರಸ್ತಿ ಕೇಂದ್ರಗಳನ್ನು ವಾರಣಾಸಿ ಮತ್ತು ಪಟ್ನಾದಲ್ಲಿ ಸ್ಥಾಪಿಸುವ ಉದ್ದೇಶ. ಜತೆಗೆ ಕರಾವಳಿ ಕಾರ್ಗೊ ಉತ್ತೇಜನ ಯೋಜನೆಯನ್ನು ಒಳನಾಡು ಜಲಮಾರ್ಗ ಮತ್ತು ಕರಾವಳಿಯಲ್ಲೂ ಜಾರಿಗೆ ತರಲಾಗುವುದು. ಸೆಮಿ ಕಂಡಕ್ಟರ್‌ವಲಯಕ್ಕಾಗಿ 40,000 ಕೋಟಿ ಮೀಸಲು
ಸೇವಾ ವಲಯದಲ್ಲಿ ಎಐ ಪರಿಣಾಮ ಅಧ್ಯಯನಕ್ಕೆ ಉನ್ನತ ಮಟ್ಟದ ಸ್ಥಾಯಿ ಸಮಿತಿ ಘೋಷಣೆ: ಶೈಕ್ಷಣಿಕ್, ಔದ್ಯೋಗಿಕ ಮತ್ತು ಉದ್ಯಮದಲ್ಲಿ ಪರಿಣಾಮ ಕುರಿತ ಅಧ್ಯಯನ, ಈ ವಲಯಗಳು ಜಾಗತಿಕವಾಗಿ ಶೇ 10ರಷ್ಟು ಷೇರಿನೊಂದಿಗೆ ಜಾಗತಿಕವಾಗಿ ನಾಯಕತ್ವ ಸಾಧಿಸಲು ಸಾಧ್ಯವಾಗುತ್ತದೆ ಎಂದು ನಿರ್ಮಲಾ ಹೇಳಿದ್ದಾರೆ.
ನನ್ನ ಅಭಿಪ್ರಾಯದ ಪ್ರಕಾರ ಈ ಬಜೆಟ್ ಸರ್ವವ್ಯಾಪಿ ಬಜೆಟ್ ಆಗಿ ಪರಿಣಮಿಸಿದೆ. ಒಟ್ಟಾಗಿ ಈ ಬಜೆಟ್ ನಲ್ಲಿ ನೀಡಿದ ಅಂಶಗಳನ್ನು ಕಾರ್ಯರೂಪಕ್ಕೆ ತರಬೇಕಾಗಿದೆ.
ಬಜೆಟ್ ಅಭಿಪ್ರಾಯ-ರಾಘವೇಂದ್ರ ಪ್ರಭು ಕರ್ವಾಲು, ಸಮಾಜಿಕ ಕಾರ್ಯಕರ್ತ.

