ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರು ಒಕ್ಕೂಟವು ಸರ್ಕಾರದ ಗಮನ ಸೆಳೆದು ವಿಶೇಷ ಅಪಘಾತ ವಿಮಾ ಯೋಜನೆಯ ವಯೋಮಿತಿಯನ್ನು ಹೆಚ್ಚಿಸಿ ರಾಜ್ಯದ ದಿನಪತ್ರಿಕೆಗಳ ವಿತರಕರಿಗೆ ಸಂತೋಷದ ಸುದ್ದಿ ತಿಳಿಸುತ್ತಿದೆ.
16 ರಿಂದ 59 ವರ್ಷದ ವಯೋಮಿತಿಯ ಅವಕಾಶವನ್ನು ಹೆಚ್ಚಿಸಿ ಈಗ 16 ರಿಂದ 70 ವರ್ಷದವರೆಗೂ ಅಂಬೇಡ್ಕರ್ ಸಹಾಯ ಹಸ್ತ ಯೋಜನೆ ಅಡಿಯಲ್ಲಿ ಪತ್ರಿಕಾ ವಿತರಕರಿಗಾಗಿ ವಿಶೇಷ ಯೋಜನೆ ತಂದಿರುವ ಸರ್ಕಾರ ತಾವು ಕುಳಿತಲ್ಲೇ ನೋಂದಾವಣೆ ಮಾಡಿಕೊಳ್ಳಬಹುದು ಎಂದು ತಿಳಿಸುತ್ತಿದೆ.
https://ambedkarsahayahasta.karnataka.gov.in/ ಈಗ ತಿಳಿಸಿರುವ ವೆಬ್ಸೈಟ್ನ ಮುಖಾಂತರ ತಾವುಗಳು ನೊಂದಾವಣೆಯದಲ್ಲಿ ತಮಗೆ ಅಪಘಾತದಲ್ಲಿ ಮೃತಪಟ್ಟಲ್ಲಿ 2 ಲಕ್ಷ ರೂಪಾಯಿ ಪರಿಹಾರ ಹಣ ಕುಟುಂಬಕ್ಕೆ ಅಪಘಾತದಲ್ಲಿ ಅಂಗವಿಪಲ್ಯವಾದರೆ ಅಪಘಾತದ ತೀವ್ರತೆಯನ್ನು ಅರಿತು 2 ಲಕ್ಷ ರೂಪಾಯಿ ವರೆಗೂ ಪರಿಹಾರ ಹಣ ಹಾಗೂ ಒಂದು ಲಕ್ಷ ರೂಪಾಯಿ ಗಂಭೀರ ಕಾಯಿಲೆಗಳಿಗಾಗಿ ಸರ್ಕಾರ ನೀಡುತ್ತಿದೆ.
ರಾಜ್ಯದ ಪತ್ರಿಕಾ ವಿತರಕರು ಈ ಯೋಜನೆಯಲ್ಲಿ ನೋಂದಾಯಿತರಾಗಿ ಸರ್ಕಾರದ ಸೌಲಭ್ಯವನ್ನು ಪಡೆಯಬೇಕೆಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರು ಒಕ್ಕೂಟದ ರಾಜ್ಯಾಧ್ಯಕ್ಷ ಶಂಭುಲಿಂಗ ತಿಳಿಸಿದರು.

