ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದಲಿತ ವಿದ್ಯಾರ್ಥಿನಿಗೆ ಅತ್ಯಾಚಾರ ಎಸಗಿ ಪೆಟ್ರೋಲ್ ಹಾಕಿ ಅರೆ ಬರೆ ಸುಟ್ಟು ಅತ್ಯಂತ ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ನಗರದ ಹೊರ ವಲಯದಲ್ಲಿ ಜರುಗಿದೆ.
ಹಿರಿಯೂರು ತಾಲೂಕಿನ ಕೊವೇರಹಟ್ಟಿ ಗ್ರಾಮದ ವರ್ಷಿತಾ(19) 2ನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು ಅರೆಬರೆ ಸುಟ್ಟ ಸ್ಥಿತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಯುವತಿ ಶವ ಪತ್ತೆಯಾಗಿದೆ.
ಚಿತ್ರದುರ್ಗ ನಗರದ ಹೊರವಲಯದ ಗೋನೂರು ಬ್ರಿಡ್ಜ್ ಬಳಿ ಅತ್ಯಾತಾರ ಎಸಗಿ ಕೊಲೆ ಮಾಡಿ ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ. ದುಷ್ಕರ್ಮಿಗಳು ಪೆಟ್ರೋಲ್ ಹಾಕಿ ಸುಟ್ಟು ಪರಾರಿಯಾಗಿದ್ದಾರೆ.
ಮೃತ ಯುವತಿಯ ಕೈ ಮೇಲಿರುವ ನವಿಲು ಮತ್ತು ಅಮ್ಮ ಎಂದು ಬರೆಸಿಕೊಂಡಿರುವ ಅಚ್ಚೆ ಗುರುತಿನ ಮೇರೆಗೆ ಮೃತ ಯುವತಿ ನನ್ನ ಪುತ್ರಿಯೇ ಎಂದು ಕೊವೇರಹಟ್ಟಿಯ ತಾಯಿ ತಿಳಿಸಿದ್ದಾರೆ.
ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ಪರಿಶೀಲಿಸಿದ್ದಾರೆ. ಮೃತ ದೇಹವನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಹಾಕಲಾಗಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಂಸದ ಗೋವಿಂದ ಕಾರಜೋಳ, ಮಾಜಿ ಸಂಸದ ಆನೇಕಲ್ ನಾರಾಯಣಸ್ವಾಮಿ, ದಲಿತ ಸಂಘಟನೆಗಳು ಸೇರಿದಂತೆ ಮತ್ತಿತರರು ಆರೋಪಿಗಳನ್ನು ಪತ್ತೆ ಮಾಡಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ. ಆರೋಪಿಗಳ ಪತ್ತೆ ನಂತರವೇ ಮೃತ ದೇಹವನ್ನು ಕೊಂಡಯಿಯಲಾಗುತ್ತದೆ ಎಂದು ಕೊವೇರಹಟ್ಟಿಯ ನೊಂದ ಕುಟುಂಬ ತಿಳಿಸಿವೆ.

