ಯುವತಿಯ ಹಿಂಭಾಗ ಮುಟ್ಟಿ ಓಡಿ ಹೋದ ಕಿಡಿಗೇಡಿ ವಿರುದ್ಧ ದೂರು ದಾಖಲು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಹಿಂಬದಿಯಿಂದ ಮೈ ಮುಟ್ಟಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿರುವ ಘಟನೆ ಬೆಂಗಳೂರು ನಗರದ ಮಾರತ್ ಹಳ್ಳಿ ಠಾಣೆ ವ್ಯಾಪ್ತಿಯ ಇಕೋ ವರ್ಲ್ಡ್ ಬಳಿ ನಡೆದಿದೆ.

ಈ ವಿಷಯ ಕುರಿತು 23 ವರ್ಷದ ಯುವತಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಮಾರತ್ ಹಳ್ಳಿ ಠಾಣೆ ಪೊಲೀಸರು, ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಇಕೋ ವರ್ಲ್ಡ್ ಮೈನ್ ಗೇಟ್ ಬಳಿ ಏಪ್ರಿಲ್ 30ರಂದು ರಾತ್ರಿ 11.30ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಹಿಂಭಾಗ ಸ್ಪರ್ಶಿಸಿ ಹೋಗಿದ್ದಾನೆ. ಕೆಲವೇ ನಿಮಿಷಗಳಲ್ಲಿ ಅದೇ ವ್ಯಕ್ತಿ ಪುನಃ ಹಿಂದಿನಿಂದ ಬಂದು ಮತ್ತದೇ ಅನುಚಿತ ವರ್ತನೆ ಮಾಡಿದ್ದಾನೆ‌.

ಈ ಸಂದರ್ಭದಲ್ಲಿ ಸಮೀಪದಲ್ಲಿದ್ದ ಕೆಲವರ ಸಹಾಯ ಕೇಳಿದರೂ ಯಾರೂ ನೆರವಿಗೆ ಬರಲಿಲ್ಲ ಎಂದು ನೊಂದ ಸಂತ್ರಸ್ತೆ ಯುವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
ಮಾರತ್ತಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು
ಕಿಡಿಗೇಡಿಗಾಗಿ ಪತ್ತೆ ಕಾರ್ಯಕ್ಕೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.

 

Share This Article
error: Content is protected !!
";