ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ : ಇಲ್ಲಿಗೆ ಸಮೀಪ್ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಅರಬಿಳಚಿ ಕ್ಯಾಂಪ್‌ನಲ್ಲಿ ಸದ್ಯ ಪರಿಸ್ಥಿತಿ ಶಾಂತವಾಗಿದೆ,
ಗಣಪತಿ ಮೆರವಣಿಗೆಯ ವೇಳೆ ಡೊಳ್ಳು ಬಾರಿಸುವ ವಿಚಾರದಲ್ಲಿ ಎರಡು ಸಂಘಟನೆಗಳ ನಡುವೆ ಶನಿವಾರ ರಾತ್ರಿ ಆರಂಭವಾದ ಗಲಾಟೆ ದೊಡ್ಡದಾಗಿತ್ತು. ಈ ವೇಳೆ ಪೊಲೀಸರು ಸೇರಿದಂತೆ ಹಲವರಿಗೆ ಗಾಯವಾಗಿತ್ತು.
ಸದ್ಯ ಸ್ಥಳದಲ್ಲಿ ಶಾಂತಿ ನೆಲೆಸಿದ್ದು, ಎರಡು ಪೊಲೀಸ್ ತುಕಡಿಗಳು ಅರಬಿಳಚಿ ಕ್ಯಾಂಪ್‌ನಲ್ಲಿ ಮೊಕ್ಕಾಂ ಹೂಡಿದೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿಯ ಜೊತೆಗೆ ಅಧಿಕಾರಿಗಳು ಸಹ ಸ್ಥಳದಲ್ಲಿದ್ದಾರೆ.
ಅರೆಬಿಳಚಿ ಕ್ಯಾಂಪ್‌ನ ಎಲ್ಲಾ 12 ಗಣಪತಿಯನ್ನು ವಿಸರ್ಜನೆ ಮಾಡಲಾಗಿದೆ.
ಗಲಾಟೆ ಸಂಬಂಧ ಮೂರು ಎಫ್‌ಐಆರ್ ದಾಖಲಾಗಿದ್ದು ಒಟ್ಟು 30 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಇದರ ನಡುವೆ ಹಲವರು ಪೊಲೀಸರ ಭಯದಿಂದ ಊರು ತೊರೆದಿದ್ದಾರೆ.