ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಂಪೂರ್ಣ ದಿವಾಳಿಯಾಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಜೇಬಿಗೆ ಕನ್ನ ಹಾಕುವುದಕ್ಕೆ ಸದಾ “ಸಿದ್ದ”!!ವಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ಮಾಡಿದೆ.
ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ, ರಸ್ತೆ ತೆರಿಗೆಗಳನ್ನು ಈಗಾಗಲೇ ಏರಿಸಿರುವ ಕಾಂಗ್ರೆಸ್‌ಸರ್ಕಾರ ಈಗ ಹೊಸ ಕಾರು ಮತ್ತು ಬೈಕ್‌ಗಳಿಗೆ ಕ್ರಮವಾಗಿ 500 ಮತ್ತು 1000 ರೂ.ಸೆಸ್‌ಏರಿಸಲು ತೀರ್ಮಾನಿಸಿದ್ದು, ಇದು ಕಾಂಗ್ರೆಸ್‌ನ ಜನವಿರೋಧಿ ಮನಸ್ಥಿತಿಯ ಸುಸ್ಪಷ್ಟ ನಿದರ್ಶನವಾಗಿದೆ ಎಂದು ಬಿಜೆಪಿ ಗರಂ ಆಗಿದೆ.
ಸಿಎಂ ಸಿದ್ದರಾಮಯ್ಯ ಅವರೆ, ಸುಳ್ಳು ಹೇಳುವುದನ್ನು ಬಿಟ್ಟು ನಿಮ್ಮ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಕೂಡಲೇ ಶ್ವೇತಪತ್ರ ಹೊರಡಿಸಿ!! ಎಂದು ಸಿಎಂಗೆ ಬಿಜೆಪಿ ತಾಕೀತು ಮಾಡಿದೆ.