ಮಾರ್ಚ್ 31ರವರೆಗೆ ಕಲಾ ವೈಭವ: ಸಂಸ್ಕೃತಿ, ಇತಿಹಾಸ ಮತ್ತು ಪ್ರವಾಸೋದ್ಯಮದ ಸಂಗಮ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತದ ಪ್ರಮುಖ ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾದ ಕೊಚ್ಚಿ-ಮುಝಿರಿಸ್ ಬೈಯೆನ್ನೇಲ್ಈ ಬಾರಿಯ ಪ್ರವಾಸಿ ಋತುವನ್ನು ಮತ್ತಷ್ಟು ವರ್ಣರಂಜಿತವಾಗಿಸಿದೆ. ಸಮಕಾಲೀನ ಕಲೆಗೆ ಜಾಗತಿಕ ವೇದಿಕೆಯಾಗಿರುವ ಕೊಚ್ಚಿ, ಪ್ರತಿ ಎರಡು ವರ್ಷಗಳಿಗೊಮ್ಮೆ ಸಾಂಸ್ಕೃತಿಕವಾಗಿ ಮರುಹುಟ್ಟು ಪಡೆಯುತ್ತದೆ. ಕೊಚ್ಚಿ ಕೋಟೆಯ ಐತಿಹಾಸಿಕ ಮತ್ತು ಪಾರಂಪರಿಕ ಪರಿಸರದಲ್ಲಿ ನಡೆಯುತ್ತಿರುವ ಈ ಕಲಾ ಹಬ್ಬವು ಕಲೆ, ಇತಿಹಾಸ ಮತ್ತು ಪ್ರವಾಸೋದ್ಯಮವನ್ನು ಬೆಸೆಯುವ ಮೂಲಕ ಪ್ರವಾಸಿಗರಿಗೆ ಅನನ್ಯ ಅನುಭವವನ್ನು ನೀಡುತ್ತಿದೆ.

ದಕ್ಷಿಣ ಏಷ್ಯಾದಲ್ಲೇ ಅತ್ಯಂತ ದೊಡ್ಡದಾದ ಈ ಕಲಾ ಉತ್ಸವವು ಮಾರ್ಚ್ 31ರವರೆಗೆ ಮುಂದುವರಿಯಲಿದ್ದು, ವಿಶ್ವದ ಮೂಲೆಮೂಲೆಗಳ ಕಲಾವಿದರ ಅತ್ಯಾಧುನಿಕ ಕಲಾಕೃತಿಗಳು ಇಲ್ಲಿನ ಪಾರಂಪರಿಕ ತಾಣಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ. ಕಲೆಯನ್ನೇ ಪ್ರವಾಸೋದ್ಯಮದ ಕೇಂದ್ರಬಿಂದುವಾಗಿಸಿಕೊಂಡಿರುವ ಈ ಉತ್ಸವವು, ಕೊಚ್ಚಿಯನ್ನು ಇತಿಹಾಸ ಮತ್ತು ಸೃಜನಶೀಲತೆಯ ಸಂಗಮ ತಾಣವನ್ನಾಗಿ ಮರುರೂಪಿಸಿದೆ.

- Advertisement - 

ಪ್ರವಾಸೋದ್ಯಮ ಸಚಿವರ ಮಾತು:
ಈ ಕುರಿತು ಮಾತನಾಡಿದ ಕೇರಳ ಪ್ರವಾಸೋದ್ಯಮ ಸಚಿವ ಶ್ರೀ ಪಿ.ಎ. ಮೊಹಮ್ಮದ್ ರಿಯಾಸ್, “ಕೋವಿಡ್ ನಂತರದ ದಿನಗಳಲ್ಲಿ ಕೇರಳಕ್ಕೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ನಮ್ಮ ಸಾಂಪ್ರದಾಯಿಕ ಆಕರ್ಷಣೆಗಳ ಜೊತೆಗೆ ಹೊಸದಾಗಿ ಪರಿಚಯಿಸಲಾದ ಪ್ರವಾಸಿ ಉತ್ಪನ್ನಗಳಿಗೂ ದೇಶ-ವಿದೇಶಗಳ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ,” ಎಂದು ಹರ್ಷ ವ್ಯಕ್ತಪಡಿಸಿದರು.

ದೇಶಾದ್ಯಂತ ರೋಡ್ ಶೋಮತ್ತು ಪ್ರಚಾರಾಂದೋಲನ:
ಮುಂಬರುವ ಬೇಸಿಗೆ ರಜೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ಕೇರಳ ಟೂರಿಸಂದೇಶದ ಪ್ರಮುಖ ನಗರಗಳಲ್ಲಿ ರೋಡ್ ಶೋಗಳನ್ನು ಆಯೋಜಿಸಿದೆ. ಜನವರಿ 20ರಂದು ಚೆನ್ನೈನಲ್ಲಿ ಆರಂಭವಾದ ಈ ಅಭಿಯಾನವು ಇಂದು (ಜ. 22) ಬೆಂಗಳೂರಿನಲ್ಲಿ ನಡೆದಿದೆ. ಮುಂದಿನ ದಿನಗಳಲ್ಲಿ ಹೈದರಾಬಾದ್, ಕೋಲ್ಕತ್ತಾ, ಲಕ್ನೋ ಮತ್ತು ಇಂದೋರ್‌ಗಳಲ್ಲಿಯೂ ಬಿ2ಬಿ ಸಭೆಗಳನ್ನು ನಡೆಸುವ ಮೂಲಕ ಹೊಸ ಪ್ರವಾಸಿ ಪ್ಯಾಕೇಜ್‌ಗಳನ್ನು ಪರಿಚಯಿಸಲಿದೆ.

- Advertisement - 

ಇದರ ಜೊತೆಗೆ, ಜನವರಿ 20ರಂದು ನವದೆಹಲಿಯಲ್ಲಿ ಚಾಲನೆ ನೀಡಲಾದ ಲೆನ್ಸ್‌ಸ್ಕೇಪ್ ಕೇರಳಛಾಯಾಚಿತ್ರ ಪ್ರದರ್ಶನವು ದೇಶದ 10 ಪ್ರಮುಖ ಛಾಯಾಗ್ರಾಹಕರು ಸೆರೆಹಿಡಿದ ಕೇರಳದ ಸೌಂದರ್ಯವನ್ನು 100 ವಿಶೇಷ ಫ್ರೇಮ್‌ಗಳ ಮೂಲಕ ಅನಾವರಣಗೊಳಿಸುತ್ತಿದೆ.

ಸಾಂಸ್ಕೃತಿಕ ಮತ್ತು ಸಾಹಸ ಪ್ರವಾಸೋದ್ಯಮಕ್ಕೆ ಒತ್ತು:
ಫೆಬ್ರವರಿಯಲ್ಲಿ ನಡೆಯುವ ಒಡಿಸ್ಸಿ, ಕಥಕ್ಕಳಿ ಮತ್ತು ಭರತನಾಟ್ಯಂ ಒಳಗೊಂಡ *ನಿಶಾಗಂಧಿ ನೃತ್ಯೋತ್ಸವ‘* ಪ್ರವಾಸಿಗರಿಗೆ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಅಲ್ಲದೆ, ಉತ್ತರ ಕೇರಳದ ಕೋಯಿಕ್ಕೋಡ್, ವಯನಾಡ್ ಮತ್ತು ಬೇಕಲ್ ಕೋಟೆಯಂತಹ ಕಡಿಮೆ ಪ್ರಚಲಿತ ತಾಣಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಕೇವಲ ಹಿನ್ನೀರು ಮತ್ತು ಬೀಚ್‌ಗಳಿಗೆ ಸೀಮಿತವಾಗದೆ, ಸರ್ಫಿಂಗ್, ಸೈಕ್ಲಿಂಗ್, ಪ್ಯಾರಾಗ್ಲೈಡಿಂಗ್ ಮತ್ತು ಚಾರಣದಂತಹ ಸಾಹಸ ಚಟುವಟಿಕೆಗಳು ಹಾಗೂ ಡೆಸ್ಟಿನೇಷನ್ ವೆಡ್ಡಿಂಗ್ನಂತಹ ಹೊಸ ಪರಿಕಲ್ಪನೆಗಳನ್ನು ಉತ್ತೇಜಿಸಲಾಗುತ್ತಿದೆ.

ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ರಾಜ್ಯ ಸರ್ಕಾರ, ಇತ್ತೀಚೆಗೆ ಮುಝಿರಿಸ್ ಹೆರಿಟೇಜ್ ಯೋಜನೆಅಡಿಯಲ್ಲಿ ಕಾಸರಗೋಡಿನಿಂದ ಕೊಲ್ಲಂವರೆಗೆ *33 ಹೆರಿಟೇಜ್ ಟ್ರೈಲ್‌ಗಳನ್ನು ಆರಂಭಿಸಿದೆ.

ಜಾಗತಿಕ ಮನ್ನಣೆ:
ಕೇರಳವು ರಫ್ ಗೈಡ್ಸ್ಪಟ್ಟಿಯಲ್ಲಿ 2026ರ ವಿಶ್ವದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿ ಸ್ಥಾನ ಪಡೆದಿದೆ. ಅಲ್ಲದೆ, 2025ಟ್ರಾವೆಲ್+ಲೀಷರ್ನ ಅತ್ಯುತ್ತಮ ವೆಲ್‌ನೆಸ್ ತಾಣ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದೆ. ಹೌಸ್‌ಬೋಟ್‌ಗಳು, ಕಾರವಾನ್ ಸ್ಟೇಗಳು, ಆಯುರ್ವೇದ ಚಿಕಿತ್ಸೆ ಮತ್ತು ಹೋಮ್‌ಸ್ಟೇಗಳ ಮೂಲಕ ಕೇರಳವು ಜಾಗತಿಕ ಪ್ರವಾಸಿ ನಕ್ಷೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

 

Share This Article
error: Content is protected !!
";