ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜನಪರ ಕಾಳಜಿ, ಜನಹಿತ ಕಾಪಾಡುವ ಉದ್ದೇಶ ಯಾವುದೇ ಸರ್ಕಾರಕ್ಕೆ ಇಲ್ಲದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜ್ವಲಂತ ಉದಾಹರಣೆಯಾಗುತ್ತಿರುವುದು ನಮ್ಮ ರಾಜ್ಯದ ಜನರ ದುರಂತ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಕೇವಲ ಕಮಿಷನ್ ದುಡ್ಡಿನ ಆಸೆಗೆ, ಕಳಪೆ ಮಟ್ಟದ ಔಷಧಿಗಳನ್ನು ಪೂರೈಕೆ ಮಾಡಿ, ಪೂರೈಕೆಯಾದ ಔಷಧಿಗಳನ್ನು ಸರಿಯಾಗಿ ಪರೀಕ್ಷೆ ಮಾಡದೆ ಮಕ್ಕಳ ಹಾಗು ಬಾಣಂತಿಯರ ಸರಣಿ ಸಾವುಗಳನ್ನು ನೋಡುವುದು ಕಾಂಗ್ರೆಸ್ ಸರ್ಕಾರಕ್ಕೆ ಒಂದು ರೀತಿಯ ಪೈಶಾಚಿಕ ಸಂತೋಷದಂತೆ ಕಾಣುತ್ತದೆ ಎಂದು ರವಿ ವಾಗ್ದಾಳಿ ಮಾಡಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಅದು, ಕಮಿಷನ್‘ನಿಂದ, ಕಮಿಷನ್‘ಗಾಗಿ, ಕಮಿಷನ್‘ಗೋಸ್ಕರ ಇರುವ ಸರ್ಕಾರ ಎಂದು ಸಿ ಟಿ ರವಿ ಟೀಕಾಪ್ರಹಾರ ಮಾಡಿದ್ದಾರೆ.