ಇಡೀ ಗ್ರಾಮವನ್ನೇ ಖರೀದಿ ಮಾಡಿದ ಕಾಂಗ್ರೆಸ್ ಶಾಸಕ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ರಾಮನಗರದ ಕಿರಾತಕ ಶಾಸಕ ಇಕ್ಬಾಲ್‌ಹುಸೇನ್‌ ಒಂದು ಇಡೀ ಗ್ರಾಮವನ್ನೇ ಖರೀದಿ ಮಾಡಿರುವ ಬಗ್ಗೆ ರೈತ ಹೋರಾಟಗಾರರು ಲೋಕಾಯುಕ್ತಗೆ ದೂರು ನೀಡಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.

ಗಿಫ್ಟ್ ಕಾರ್ಡ್ ಶಾಸಕ ಇಕ್ಬಾಲ್, ಯಡಮಾರನಹಳ್ಳಿ ಗ್ರಾಮದಲ್ಲಿ 67 ಎಕರೆ 66 ಗುಂಟೆ ಜಾಗವನ್ನು ಅಕ್ರಮವಾಗಿ ನೋಂದಣಿ ಮಾಡಿಕೊಂಡು ರೈತರ ಜಮೀನನ್ನು ಲೂಟಿ ಹೊಡೆದಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.

50-60 ವರ್ಷಗಳಿಂದ ಅಲ್ಲಿ ವ್ಯವಸಾಯ ಮಾಡಿಕೊಂಡು ಬಂದಿರುವ ರೈತರು ಶಾಸಕನ  ಕಿರುಕುಳಕ್ಕೆ  ದಯಾ ಮರಣದ ಮೊರೆ ಹೋಗುತ್ತಿದ್ದಾರೆ.

ನ್ಯಾಯಾಲಯದಲ್ಲಿ ಅರ್ಜಿ ಇತ್ಯರ್ಥವಾಗದೆ, ಭೂ ನ್ಯಾಯ ಮಂಡಳಿಯಲ್ಲಿ ಬಾಕಿ ಇರುವಾಗಲೇ, ಭೂಮಿಯನ್ನು ಸರ್ಕಾರದ ಪ್ರಭಾವ ಬಳಸಿ  ಅಕ್ರಮವಾಗಿ ನೋಂದಣಿ ಮಾಡಿಸಿಕೊಂಡಿರುವ ಶಾಸಕರು ಮತ ಹಾಕಿ ಗೆಲ್ಲಿಸಿದ ತಪ್ಪಿಗೆ ರೈತರಿಗೆ ಕೊಟ್ಟ ನಿಜವಾದ ಗಿಫ್ಟ್ ಇದಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.

 

Share This Article
error: Content is protected !!
";