ವಿಧಾನಸೌಧದ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಅಸಾಹಯಕನಾಗಿದ್ದೇನೆ-ಕಾಂಗ್ರೆಸ್ ಶಾಸಕ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಧಾನಸೌಧದ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಅಸಾಹಯಕನಾಗಿದ್ದೇನೆ” -ಇದು ಜನಸಾಮಾನ್ಯರ ಮಾತಲ್ಲ!!

ಇದು ಕರ್ನಾಟಕ ಕಾಂಗ್ರೆಸ್ ಪಕ್ಷದ ಕಾಗವಾಡದ ಶಾಸಕ ರಾಜು ಕಾಗೆ ಅವರ ಮಾತು.

ಆಡಳಿತ ಪಕ್ಷದ ಶಾಸಕರೆ, ತಮ್ಮ ಸರ್ಕಾರ ತಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ಮಾತ್ರವಲ್ಲದೆ, ಮಾಧ್ಯಮದವರಿಗೆ ದಯವಿಟ್ಟು ಇದನ್ನು ಸುದ್ದಿ ಮಾಡಿ ಎಂದು ಅಂಗಲಾಚುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರೆ, ನಿಮ್ಮ ಕರ್ನಾಟಕ ನಿರ್ನಾಮದ ಬೋಗಸ್ ಗ್ಯಾರಂಟಿ ಸರ್ಕಾರದ ರಿಯಾಲಿಟಿ ಚೆಕ್ ನಿಮ್ಮ ಶಾಸಕರಿಂದಲೇ ನಡೆಯುತ್ತಿರುವುದು ಸ್ವಾಗತಾರ್ಹ ಎಂದು ಬಿಜೆಪಿ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.

 

- Advertisement -  - Advertisement -  - Advertisement - 
Share This Article
error: Content is protected !!
";