ನಗರಸಭೆ ಕರಡು ಬಜೆಟ್ ತಯಾರಿಗಾಗಿ ಡಿ-13 ರಂದು ಸಮಾಲೋಚನಾ ಸಭೆ:ಎ.ವಾಸೀಂ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ೨೦೨೫-೨೦೨೬ನೇ ಸಾಲಿನ ಕರಡು ಆಯವ್ಯಯ ಅಂದಾಜುಪಟ್ಟಿ ತಯಾರಿಸುವ ಸಂಬಂಧ ಪೂರ್ವಭಾವಿಯಾಗಿ ಸಾರ್ವಜನಿಕರ ಹಾಗೂ ಸಂಘ-ಸಂಸ್ಥೆಗಳ ಜೊತೆಗೆ

೨ನೇ ಸಮಾಲೋಚನಾ ಸಭೆಯನ್ನು ನಗರಸಭಾ ಅಧ್ಯಕ್ಷ ಅಜಯ್ ಕುಮಾರ್  ಅಧ್ಯಕ್ಷತೆಯಲ್ಲಿ ಡಿಸೆಂಬರ್-೧೩ರ ಶುಕ್ರವಾರ ಬೆಳಿಗ್ಗೆ ೧೧ ಗಂಟೆಗೆ  ಕರೆಯಲಾಗಿದೆ ಎಂದು ನಗರಸಭೆ ಪೌರಾಯುಕ್ತ ಎ.ವಾಸೀಂ ಮಾಹಿತಿ ನೀಡಿದ್ದಾರೆ.

- Advertisement - 

ಅವರು ಪತ್ರಿಕಾ ಪ್ರಕಟಣೆ ಹೊರಡಿಸಿ ಸಮಾಲೋಚನಾ ಸಭೆಗೆ  ಸಾರ್ವಜನಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪತ್ರಕರ್ತರು, ಉದ್ಯಮಿಗಳು, ನಾಗರೀಕರು ಹಾಗೂ ಸಾರ್ವಜನಿಕರು ಸಕಾಲಕ್ಕೆ ಆಗಮಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಬಜೆಟ್ ಪೂರ್ವಭಾವಿ ಸಭೆ ಯಶಸ್ವಿಗೊಳಿಸಿಕೊಡಬೇಕೆಂದು ಎ.ವಾಸೀಂ ಮನವಿ ಮಾಡಿದ್ದಾರೆ.

- Advertisement - 
Share This Article
error: Content is protected !!
";