ದ್ವೇಷ ಹಾಗೂ ದಿವಾಳಿ ರಾಜಕಾರಣ ಆರಂಭಿಸಿದ ಭ್ರಷ್ಟ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶಾಂತಿ-ನೆಮ್ಮದಿ ಹಾಗೂ ಸಮೃದ್ಧಿಯಾಗಿದ್ದ  ಕರ್ನಾಟಕದಲ್ಲಿ ದ್ವೇಷದ ಹಾಗೂ ದಿವಾಳಿ ರಾಜಕಾರಣವನ್ನು ಆರಂಭಿಸಿದೆ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ!! ಎಂದು ಬಿಜೆಪಿ ಆರೋಪಿಸಿದೆ.

ಗೋವುಗಳ ಪಾಲನೆ ಹಾಗೂ ಪೋಷಣೆಗೆ ಹಿಂದಿನ ಬಿಜೆಪಿ ಸರ್ಕಾರ ಆರಂಭಿಸಿದ್ದ ಜಿಲ್ಲೆಗಳಿಗೊಂದು ಗೋ-ಶಾಲೆಯನ್ನು ಭ್ರಷ್ಟ ಕಾಂಗ್ರೆಸ್‌ಸರ್ಕಾರ ಹಿಂಪಡೆದಿರುವುದು ಸರ್ಕಾರದ ದ್ವೇಷ ರಾಜಕಾರಣಕ್ಕೆ ಸಾಕ್ಷಿ!! ಎಂದು ಬಿಜೆಪಿ ಕಿಡಿಕಾರಿದೆ.

ಸಿಎಂ ಸಿದ್ದರಾಮಯ್ಯ ಅವರೆ, ಗೋಶಾಲೆಗಳಿಗೆ ಮೀಸಲಾಗಿರುವ ಹಣವನ್ನು ಹಾಲಿ ಇರುವ ಗೋಶಾಲೆಗಳಿಗೆ ಬಳಸಬೇಕು, ಒಂದು ಆ ಹಣವನ್ನು ಇತರೆ ಕಾರ್ಯಕ್ಕೆ ಬಳಸಿದ್ದಲ್ಲಿ ರಾಜ್ಯಾದ್ಯಂತ ಬೀದಿಗಿಳಿಯಲಾಗುವುದು ಎಂದು ಬಿಜೆಪಿ ಎಚ್ಚರ!! ನೀಡಿದೆ.

 

- Advertisement -  - Advertisement - 
Share This Article
error: Content is protected !!
";