ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಧಿಕಾರದ ಏಣಿ ಹತ್ತಿದ ಬಳಿಕ ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರನ್ನು ಮೂರ್ಖರನ್ನಾಗಿಸಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ರಾಜ್ಯದ ಮಹಿಳೆಯರಿಗೆ 4 ತಿಂಗಳಿಂದ ಗೃಹಲಕ್ಷ್ಮಿ ಹಣ ಕೊಡಲು ಹೆಣಗಾಡುತ್ತಿರುವ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ, ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ತಿಂಗಳ ತಿಂಗಳ ಚಾಚು ತಪ್ಪದೇ ಭತ್ಯೆ ನೆಪದಲ್ಲಿ ಜೇಬು ತುಂಬಿಸುತ್ತಿದೆ.
ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡುತ್ತೇವೆ ಎಂದು ನಾವು ಹೇಳಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಬಹಿರಂಗವಾಗಿಯೇ ಹೇಳಿದ್ದರು.
ಗ್ಯಾರಂಟಿ ಅನುಷ್ಠಾನ ಸಮಿತಿಯಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ಏಪ್ರಿಲ್ʼನಿಂದ ಆಗಸ್ಟ್ ತಿಂಗಳ ವರೆಗೆ 7 ಕೋಟಿ 65 ಲಕ್ಷ ರೂ. ಭತ್ಯೆಯನ್ನು ಮುಂಗಡವಾಗಿ ಪಾವತಿಸಿದೆ.
ಗ್ಯಾರಂಟಿ ಗ್ಯಾರಂಟಿ ಎಂದು ರಾಜ್ಯದ ಜನರ ಕೈಗೆ ಚಿಪ್ಪು ಕೊಟ್ಟು, ಕಾಂಗ್ರೆಸ್ ಕಾರ್ಯಕರ್ತರಿಗೆ ಕೈ ತುಂಬ ಸಂಬಳ (ಭತ್ಯೆ) ಕೊಡುವುದಕ್ಕೆ ನಿಮ್ಮ ಆತ್ಮಸಾಕ್ಷಿಯಾದರೂ ಹೇಗೆ ಒಪ್ಪುತ್ತದೆ ?
ವಚನ ಭ್ರಷ್ಟ ಸಿಎಂ, ಡಿಸಿಎಂ ಇದು ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಮಹಾದ್ರೋಹವಲ್ಲದೇ ಮತ್ತೇನು ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.