ಸಂಕಷ್ಟದಲ್ಲಿರುವ ನಾಯಿ(ಶ್ವಾನ)ಗಳನ್ನು ಮಕ್ಕಳಂತೆ ಪೋಷಿಸುತ್ತಿರುವ ದಂಪತಿಗಳು

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಅಪಘಾತ  ಅನಾರೋಗ್ಯ ಊಟ ಇಲ್ಲದೆ ಬಳುಲುತ್ತಿರುವ ಪ್ರಾಣಿ ಪಕ್ಷಿಗಳ ರಕ್ಷಣೆ ಮಾಡಿ ತಮ್ಮ  ಸ್ವಂತ ದುಡಿಮೆ ಯಿಂದ ಬಂದ ಹಣದಿಂದ ಪ್ರಾಣಿ ಪಕ್ಷಿಗಳಿಗೆ ಅನ್ನ ಅಹಾರ ತಯಾರು ಮಾಡಿ ರಕ್ಷಣೆ ಮಾಡುತ್ತಿರು ದಂಪತಿಗಳು.

 ದೊಡ್ಡಬಳ್ಳಾಪುರ ಹೊರವಲಯದ ದಲ್ಲಿ ಒಂದು ಎಕರೆ ಜಮೀನು ಬಾಡಿಗೆಗೆ ತೆಗೆದುಕೊಂಡು  ಸಂಕಷ್ಟದಲ್ಲಿರುವ ಪ್ರಾಣಿಗಳ ಹಾರೈಕೆ ಮಾಡಿಕೊಂಡು ತಮ್ಮ ದುಡಿಮೆಯಿಂದ ಬಂದ ಹಣದಿಂದ  ಜಮೀನು ಬಾಡಿಗೆ ಪಡೆದು ಮೂಕ ಪ್ರಾಣಿಗಳ ಸಾಕಾಣಿಕೆ ಮಾಡುತಿದ್ದಾರೆ.ಗಂಡ ಹೆಂಡತಿಯಿಂದ ಕಳೆದ ಒಂದು ದಶಕದಿಂದ ಪ್ರಾಣಿಗಳು ಹಾರೈಕೆ. ಮಾಡಿಕೊಂಡು ಹಾರೈಕೆ ಮಾಡಿಕೊಂಡು ಬರುತಿದ್ದಾರೆ.ನಗರ ಹಾಗು ಗ್ರಾಮಾಂತರ  ಸೇರಿದಂತೆ ಹಲವು ಕಡೆ ಕೆಲವರು ಮೂಕ ಪ್ರಾಣಿಗಳ ಮೇಲೆ ಅಟ್ಟಹಾಸಕ್ಕೆ ಗುರಿಯಾಗಿ ಬಳುತ್ತಿರುವ  ಪ್ರಾಣಿ ಹಾಗು ಪಕ್ಷಿಗಳನ್ನು ರಕ್ಷಣೆ ಮಾಡಿ  ಅವರು ಇರುವ ಜಾಗಕ್ಕೆ ತಂದು ಅವುಗಳಿಗೆ ಚಿಕಿತ್ಸೆ ನೀಡಿ ಅವು ಸಹ ಎಲ್ಲಾ ಪ್ರಾಣಿಗಳಂತೆ ಜೀವನ ಮಾಡಲಿ ಎಂದ ಹಾರೈಕೆ ಮಾಡುತ್ತಿರುವುದನ್ನು ಕಂಡು ಮೂಕ ಪ್ರಾಣಿಗಳ ಯೋಗ ಕ್ಷೇಮದ ಬಗ್ಗೆ ಸಾರ್ವಜನಿಕರು ಹಾಗು ಪ್ರಾಣಿ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  ಖಾಲಿ ಜಮೀನಿನಲ್ಲಿ ಸ್ವತಂತ್ರವಾಗಿ ಒಡಾಡುತ್ತಿರುವ ನೂರಾರು ಬೀದಿ ನಾಯಿಗಳು.. ಅಪಘಾತದಲ್ಲಿ ಸೊಂಟ ಕಾಲು ಸೇರಿದಂತೆ ಅಂಗಾಂಗ ಡ್ಯಾಮೇಜ್ ಮಾಡಿಕೊಂಡಿರುವ  ಮೂಕ ಪ್ರಾಣಿಗಳು ಬೀದಿ ಬದಿಯ ಪ್ರಾಣಿಗಳಿಗೆ ಸ್ವಂತ ದುಡಿದ ಹಣದಿಂದ ಆಹಾರ ಸಿದ್ದಪಡಿಸಿ  ಹೊಟ್ಟೆ ತುಂಬಿಸಿ  ಮೂಕ ಪ್ರಾಣಿಗಳ ಹಾರೈಕೆಯಲ್ಲಿ ದಂಪತಿಗಳು ತಮ್ಮನ್ನ ತಾವು ತೋಡಗಿಸಿಕೊಂಡಿರುವುದು ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಬ್ಯಾತ ಗ್ರಾಮದ ಬಳಿ ಇವರು ವಾಸವಾಗಿದ್ದು ಇವರು ಮೂಲತಃ ಪಂಜಾಬ್ ರಾಜ್ಯದ ಸೂರ್ಯ ಪ್ರತಾಪ್ ಸಿಂಗ್ ಮತ್ತು ಅಂಜು ಅನ್ನೋ ಈ ದಂಪತಿ ಕಳೆದ ಕೆಲ ವರ್ಷಗಳ ಹಿಂದೆ ಮನೆಯಲ್ಲಿ ನಾಯಿಯನ್ನು ಸಾಕಿದ್ದು ಮನೆಯಿಂದ ತಪ್ಪಿಹೋದ ನಾಯಿ ಅಪಘಾತದಲ್ಲಿ ಗಾಯಗೊಂಡು ದುರ್ಮರಣಕ್ಕೀಡಾಗಿದೆ.

ಹೀಗಾಗಿ ತಮ್ಮ ಸಾಕು ನಾಯಿ ನರಳಾಡಿ ಸಾವನ್ನಪ್ಪಿದನ್ನು  ಕಂಡ ದಂಪತಿ ಬೇರೆ ನಾಯಿಗಳು ಈ ರೀತಿ ಅಗಬಾರದು ಎಂದು ನಿರ್ಧಾರ ಮಾಡಿದ್ದು ಅಂದಿನಿಂದ ನಾಯಿಗಳನ್ನು ಮಕ್ಕಳಂತೆ ಸಾಕಲು ಮುಂದಾಗಿದ್ದಾರೆ. ಜೊತೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಗಾಯಗೊಂಡ ಮತ್ತು ಅಪಘಾತಕ್ಕೀಡಾದ ನಾಯಿಗಳನ್ನು ತಂದು ಸಾಕುತ್ತಾ ಅವುಗಳ ಹಾರೈಕೆ ಮಾಡುತಿದ್ದಾರೆ.

 ನಗರದಲ್ಲಿ ನಾಯಿಗಳನ್ನು ಸಾಕಾಣಿಕೆ ಮಾಡುತ್ತಿದ್ದುದನ್ನು ಕಂಡು  ಕೆಲವರು ದಂಪತಿಗಳ ಮೇಲೆ ಹಲ್ಲೆ ಮಾಡಿದಕ್ಕೆ ದಂಪತಿ ನಗರದಿಂದ ಹೊರಗೆ ಬಂದಿದ್ದು ರೈತರಿಂದ 1 ಎಕರೆ ಜಮೀನನ್ನು ವರ್ಷಕ್ಕೆ 60 ಸಾವಿರ ರೂಪಾಯಿಯಂತೆ ಬಾಡಿಗೆಗೆ ಪಡೆದುಕೊಂಡಿದ್ದಾರೆ. ಜೊತೆಗೆ ಬಾಡಿಗೆ ಪಡೆದ ಜಮೀನಿನಲ್ಲಿ ಶೆಡ್ ಮತ್ತು ಕಾಂಪೌಂಡ್ ನಿರ್ಮಾಣ ಮಾಡಿಕೊಂಡು 400 ಕ್ಕೂ ಅಧಿಕ ಮೊಲ ಬೆಕ್ಕು ನಾಯಿ ಹಸು ಅಂತಹ ಮೂಕ ಪ್ರಾಣಿಗಳನ್ನ ಪೋಷಣೆ ಮಾಡ್ತಿದ್ದಾರೆ.

 ಅಲ್ಲದೆ ಸೂರ್ಯ ಪ್ರತಾಪ್ ಸಿಂಗ್ ಮಾರ್ಕೆಂಟಿಗ್ ಕೆಲಸ ಮಾಡಿಕೊಂಡು ಬಂದ ಹಣದಿಂದ ನಿತ್ಯ ಮೂಕ ಪ್ರಾಣಿಗಳಿಗೆ ಆಹಾರ ತಯಾರಿಸಿ ಶೆಡ್ ಮಾತ್ರವಲ್ಲದೆ ರಸ್ತೆ ಬದಿಯಲ್ಲಿನ ಪ್ರಾಣಿಗಳಿಗೆ ನೀಡ್ತಿದ್ದಾರೆ. ಇನ್ನೂ ದಂಪತಿಯ ಪ್ರಾಣಿ ಪ್ರೀತಿಯನ್ನ ಕಂಡು ಕೆಲವರು ಆಗಾಗ ಸಹಾಯ ಸಹ ಮಾಡುತಿದ್ದು  ಅನಾರೋಗ್ಯದಿಂದ ಬಳಲುತ್ತಿರುವ ದಂಪತಿ ನಾವಿರುವವರಗೂ ಮೂಖ ಪ್ರಾಣಿಗಳ ಹಾರೈಕೆ ಮಾಡ್ತಿವಿ ಅಂತ ಶಪಥ ಮಾಡಿದ್ದಾರೆ.

 ಒಟ್ಟಾರೆ ಕಷ್ಟಾ ಅಂದ್ರೆ ಹೆತ್ತ ತಂದೆ ತಾಯಿ ಸೇರಿದಂತೆ ಒಡ ಹುಟ್ಟಿದವರನ್ನು ನೋಡಿಕೊಳ್ಳದ ಈ ಕಾಲದಲ್ಲು ಗಾಯಗೊಂಡ ಪ್ರಾಣಿಗಳನ್ನ ಹೊತ್ತು ತಂದು ಮಕ್ಕಳಂತೆ ಹಾರೈಕೆ ಮಾಡುತ್ತಾ ಅವುಗಳ ಪೋಷಣೆ ಮಾಡ್ತಿರುವ ದಂಪತಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ.

- Advertisement -  - Advertisement -  - Advertisement - 
Share This Article
error: Content is protected !!
";