ಕನ್ನಡ ಚಲನಚಿತ್ರಗಳ ಪ್ರೋತ್ಸಾಹಕ್ಕಾಗಿ ತಜ್ಞರು, ತಾಂತ್ರಿಕ ಪರಿಣಿತರ ನಿಯೋಗ ರಚನೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ಚಲನಚಿತ್ರಗಳ ಪ್ರೋತ್ಸಾಹಕ್ಕಾಗಿ
OTT ವೇದಿಕೆ ಸೃಜಿಸಲು ಪೂರಕವಾಗಿ ರೂಪುರೇಷೆಗಳನ್ನು ರಚಿಸಲು ಅಗತ್ಯ ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಲು ತಜ್ಞರು/ತಾಂತ್ರಿಕ ಪರಿಣಿತರನ್ನೊಳಗೊಂಡ ನಿಯೋಗವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಚಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಕನ್ನಡ ಚಲನಚಿತ್ರಗಳ ಪ್ರೋತ್ಸಾಹಕ್ಕಾಗಿ OTT ವೇದಿಕೆಯನ್ನು ಸೃಜಿಸುವ ಸಂಬಂಧ ಬಜೆಟ್ ಘೋಷಣೆಯ ಅನ್ವಯ 10 ಮಂದಿ ಸದಸ್ಯರ ತಜ್ಞರ ನಿಯೋಗವನ್ನು ವಾರ್ತಾ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ನಿಯೋಗ ರಚಿಸಲಾಗಿದೆ.
ನಿಯೋಗದಲ್ಲಿ ಸದಸ್ಯರಾಗಿ ಶ್ರೀ ಕಂಠೀರವ ಸ್ಟುಡಿಯೋ ಲಿ. ಅಧ್ಯಕ್ಷ ಮಹಬೂಬ್ ಪಾಷಾ
, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ, ಚಲನಚಿತ್ರ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ರಾಕ್‌ಲೈನ್ ವೆಂಕಟೇಶ್, ನಟ ದುನಿಯಾ ವಿಜಯ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯ ಐವಾನ್ ಡಿಸಿಲ್ವ, ದೇಶಾದ್ರಿ ಹೆಚ್ ಇರಲಿದ್ದಾರೆ.

- Advertisement - 

ಸಮಿತಿ ರಚನೆ:
ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯಗಳಲ್ಲಿ ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ಪಾಲಿಸುತ್ತಿರುವ ನೀತಿಗಳನ್ನು ಅಭ್ಯಸಿಸಿ
, ಕನ್ನಡ ಚಲನಚಿತ್ರೋದ್ಯಮದ ವಿವಿಧ ಕ್ಷೇತ್ರಗಳ ಪರಿಣಿತರೊಂದಿಗೆ ಚರ್ಚಿಸಿ ವಿವರವಾದ ಅಧ್ಯಯನ ನಡೆಸಿ, ಸಿನಿಮಾ ಕ್ಷೇತ್ರವನ್ನು ಉದ್ಯಮವಾಗಿ ಪರಿಗಣಿಸಿ ಕೈಗಾರಿಕಾ ನೀತಿಯಡಿ ನೀಡಲಾಗುತ್ತಿರುವ ಸೌಲಭ್ಯಗಳನ್ನು ವಿಸ್ತರಿಸಲು ಸೂಕ್ತ ಕರಡು ನೀತಿ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲು ಸಮಿತಿ ರಚಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

ವಾರ್ತಾ ಇಲಾಖೆ ಆಯುಕ್ತರು ಸಮಿತಿಗೆ ಅಧ್ಯಕ್ಷರಾಗಿರಲಿದ್ದಾರೆ. 12 ಮಂದಿ ಸದಸ್ಯರ ಸಮಿತಿ ಇದಾಗಿರಲಿದೆ. ಸಿನಿಮಾ ನಿರ್ದೇಶಕರುಗಳು ಈ ಸಮಿತಿಯಲ್ಲಿರಲಿದ್ದಾರೆ.

- Advertisement - 

ಚಲನಚಿತ್ರ ಭಂಡಾರ ಸ್ಥಾಪನೆ:
ಅದೇ ರೀತಿ ಸಾಮಾಜಿಕ
, ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬಿಂಬಿಸುವ ಕನ್ನಡ ಚಲನಚಿತ್ರಗಳನ್ನು ಡಿಜಿಟಲ್ ಮತ್ತು ನಾನ್ ಡಿಜಿಟಲ್ ಮಾದರಿಯಲ್ಲಿ ಸಂರಕ್ಷಿಸಲು ಚಲನಚಿತ್ರ ಭಂಡಾರದ ಸ್ಥಾಪನೆ ಕುರಿತಾದ ವಿಷಯದ ಬಗ್ಗೆ ಪೂರಕ ಅಧ್ಯಯನ ನಡೆಸಿ ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಲು ತಜ್ಞರು/ ತಾಂತ್ರಿಕ ಪರಿಣಿತರನ್ನೊಳಗೊಂಡ ನಿಯೋಗವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಚಿಸಿ ಆದೇಶಿಸಲಾಗಿದೆ. ಈ ನಿಯೋಗಕ್ಕೆ ವಾರ್ತಾ ಇಲಾಖೆ ಆಯುಕ್ತರು ಅಧ್ಯಕ್ಷರಾಗಿರಲಿದ್ದಾರೆ. ಒಟ್ಟು 10 ಸದಸ್ಯರು ನಿಯೋಗದಲ್ಲಿ ಇರಲಿದ್ದಾರೆ.

ಬಜೆಟ್​ನಲ್ಲಿ ಘೋಷಣೆ: ಕೈಗಾರಿಕಾ ನೀತಿಯಡಿ ಸೌಲಭ್ಯ ಒದಗಿಸುವುದಾಗಿ ಸಿನಿಮಾ ಕ್ಷೇತ್ರವನ್ನು ಉದ್ಯಮವೆಂದು ಪರಿಗಣಿಸಿ, ಬಜೆಟ್​ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಜೊತೆಗೆ 500 ಕೋಟಿ ವೆಚ್ಚದಲ್ಲಿ ಚಿತ್ರನಗರಿ ಹಾಗೂ 3 ಕೋಟಿ ವೆಚ್ಚದಲ್ಲಿ ಚಲನಚಿತ್ರ ಭಂಡಾರ ಸ್ಥಾಪನೆ ಮಾಡುವುದಾಗಿ ಸಿಎಂ ಪ್ರಕಟಿಸಿದ್ದರು.

 

Share This Article
error: Content is protected !!
";