ಯುವ ಜನರಿಗೆ ನಿರಾಶಾದಾಯಕ ಬಜೆಟ್

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ರಾಯಚೂರು :
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ೨೦೨೬-೨೭ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಪ್ರಮುಖವಾಗಿ ಉತ್ಪಾದನೆ
, ಮೂಲ ಸೌಕರ್ಯಗಳ ನಿರ್ಮಾಣ ಮತ್ತು ತೆರಿಗೆಯಲ್ಲಿ ಗಮನಾರ್ಹ ಸುಧಾರಣೆಗಳು ತರುವ ಮೂಲಕ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವತ್ತ ಕೇಂದ್ರಿಕರಿಸಿದಂತೆ ಗೋಚರವಾಗುತ್ತದೆ ಎಂದು ಶ್ರೀಮತಿ ಯಶೋಧರಮ್ಮ ಬೋರಪ್ಪ ಮಹಿಳಾ ಪ್ರಥಮ ದರ್ಜೆ ಕಾಲೇಜ್  ಚಿತ್ರದುರ್ಗ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ಸಂಜೀವ ಕುಮಾರ ಪೋತೆ ಅಭಿಪ್ರಾಯಪಟ್ಟಿದ್ದಾರೆ.

ಆದರೆ ಈ ಮುಂಗಡ ಪತ್ರವು ಯುವಪೀಳಿಗೆಗೆ ನಿರಾಶಾದಾಯಕವಾಗಿದೆ. ಕಲಿಕೆಯಿಂದ ಗಳಿಕೆಯತ್ತ ಸಾಗುವ ಮಾರ್ಗಗಳನ್ನು ಸೃಷ್ಟಿಸುವಲ್ಲಿ ವಿಫಲವಾಗಿದೆ. ಯುವ ಜನತೆಯ ಭಾರತಕ್ಕೆ ಔಪಚಾರಿಕ ವೃತ್ತಿಪರ ಮತ್ತು ತಾಂತ್ರಿಕ ತರಬೇತಿ ಕೌಶಲ ಯೋಜನೆಗಳು ಅತ್ಯಗತ್ಯವಾಗಿದ್ದವು. ಆದರೆ ಅವುಗಳನ್ನು ಇಲ್ಲಿ ಕಡೆಗಣಿಸಲಾಗಿದೆ.

- Advertisement - 

ಈ ಮುಂಗಡ ಪತ್ರವು ಸ್ವದೇಶಿ ಉತ್ಪನ್ನಕ್ಕೆ ಹೆಚ್ಚಿನ ಆದ್ಯತೆ ನೀಡದೆ. ಆದರೆ ವ್ಯತಿರಿಕ್ತ ವಿದೇಶಿ ಹೂಡಿಕೆಗೆ ವಿನಾಯತಿಯೂ ಸಹ ನೀಡಿದೆ. ಆದ್ದರಿಂದ ಸುಸ್ಥಿರ ಸಬಲೀಕರಣ ಪರಿಣಾಮಗಳನ್ನು ಉಂಟುಮಾಡುವ ಹೂಡಿಕೆಗಳನ್ನು ಕಡೆಗಣಿಸಿ ಕೇವಲ ತಾತ್ಕಾಲಿಕ ಬೆಳವಣಿಗೆಗೆ ಇಂಬು ನೀಡುವ ಕಡೆ ತನ್ನ ಗಮನ ಕೇಂದ್ರೀಕರಿಸಿದೆ.

ಸಾರಿಗೆ ಸಂಪರ್ಕ, ಔಷಧ ಮತ್ತು ಬಯೋಫಾರ್ಮ್ ಶಕ್ತಿ ವಲಯದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ ಎಂದು ಹೇಳಬಹುದು. ಡಿಜಿಟಲ್ ವ್ಯಸನಕ್ಕೆ ಬಲಿಯಾಗುತ್ತಿರುವ ಯುವಕರನ್ನು ಉತ್ಪಾದನೆ ಕಡೆಗೆ ಸೆಳೆದುಕೊಳ್ಳಲು ಈ ಬಜೆಟ್ ವಿಫಲವಾಗಿದೆ. ಕಾರಣ ಅದು ಉದ್ಯೋಗಗಳನ್ನು ಸೃಷ್ಟಿಸುವ ಕಡೆಗೆ ಹೆಚ್ಚಿನ ಗಮನವನ್ನು ಹರಿಸಬೇಕಾಗಿತ್ತು.

- Advertisement - 

ದೇಶದಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸಲು ಸಾರ್ವಜನಿಕ ಬಂಡವಾಳ ವೆಚ್ಚವನ್ನು ೧೨.೨ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಅದು ೨೦೨೫-೨೬ರ ಬಜೆಟ್‌ನಲ್ಲಿ ೧೧.೨ ಲಕ್ಷ ಕೋಟಿ ಇತ್ತು. ಕೃಷಿ, ಶಿಕ್ಷಣ, ಸಾರಿಕೆಸಂಪರ್ಕ ಮತ್ತು ಆಸ್ಪತ್ರೆಗಳಿಗೆ ಹೆಚ್ಚಿನ ಅನುದಾನ ನೀಡಿದ್ದು ಸ್ವಾಗತಾರ್ಹ.

ಭಾರತದ ಡೇಟಾ ಸೆಂಟರ್ ಸೇವೆಗಳನ್ನು ಬಳಸಿಕೊಂಡು ಜಾಗತಿಕವಾಗಿ ಗ್ರಾಹಕರಿಗೆ ಕ್ಲೌಡ್ ಆಧಾರಿತ ಸೇವೆಗಳನ್ನು ಒದಗಿಸುವ ಯಾವುದೇ ವಿದೇಶಿ ಕಂಪನಿಗೆ ೨೦೪೭ರವರೆಗೆ ತೆರಿಗೆ ವಿನಾಯತಿ ನೀಡುವುದಾಗಿ ಘೋಷಿಸಿದ್ದು ಇದು ಆರ್ಥಿಕತೆಯ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಬಹುದು ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

Share This Article
error: Content is protected !!
";