ಜನಪದ ಸೊಗಡಿನ ಗ್ರಾಮೀಣ ಕನ್ನಡ ಭಾಷೆಗೆ ಒತ್ತು ನೀಡಿದ ಜಿಲ್ಲೆ

News Desk

ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಅಪ್ಪಟ ಕನ್ನಡ ಭಾಷೆ ಬಳಸುವ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ಪರಿಸರ, ಜನಪದ, ಅರಣ್ಯ  ಕ್ಷೇತ್ರಗಳ ಸಂರಕ್ಷಣೆ ಕನ್ನಡಿಗರ ಅಭಿಮಾನ ಜಾಗೃತಿಯಿಂದ ಉಳಿದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಉಪನ್ಯಾಸಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು .

ಅಮಚವಾಡಿ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿ ಕನ್ನಡಿಗರ ಸಂಸ್ಕೃತಿ, ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ನಿರಂತರವಾಗಿ ಕನ್ನಡ ಭಾಷೆ, ಸಾಹಿತ್ಯ, ಕಲೆ ವಾಸ್ತುಶಿಲ್ಪ, ನೃತ್ಯ, ಕನ್ನಡಿಗರ ಸ್ವಾಭಿಮಾನವನ್ನು ಹಲವಾರು ರಾಜಮನೆತನಗಳು ನಿರಂತರವಾಗಿ ಉಳಿಸಿ ಬೆಳೆಸಿದೆ. ಏಳುಕೋಟಿ ಕನ್ನಡಿಗರಾದ ನಾವೆಲ್ಲರೂ ಕನ್ನಡವನ್ನು ಬಳಸುವ ಮೂಲಕ ಮುಂದಿನ ಪರಂಪರೆಗೆ ಕನ್ನಡ ಭಾಷೆಯನ್ನು ಉಳಿಸುವ ಕಾರ್ಯವನ್ನು ಮಾಡೋಣ.

- Advertisement - 

ಗಡಿ ಭಾಗವಾದ ಚಾಮರಾಜನಗರ ಶುದ್ಧ ಜನಪದ ಸೊಗಡಿನ ಗ್ರಾಮೀಣ ಕನ್ನಡ ಭಾಷೆಯನ್ನು ನಿರಂತರವಾಗಿ ಬಳಸುವ ಮೂಲಕ ಪ್ರತೀ ಗ್ರಾಮದಲ್ಲೂ ಕನ್ನಡ ಜಾಗೃತವಾಗಿದೆ ಎಂದು ಹೆಮ್ಮೆ ಪಡಬೇಕು. ಅದಕ್ಕಾಗಿ ಚಾಮರಾಜನಗರ ಜನತೆಯ ಕನ್ನಡಿಗರ ಸ್ವಾಭಿಮಾನವನ್ನು ನಾವೆಲ್ಲರೂ ಅಭಿನಂದಿಸಲೇಬೇಕು ಎಂದು ತಿಳಿಸಿದರು.

ಕನ್ನಡ ಉಪನ್ಯಾಸಕ ರಮೇಶ್ ಮಾತನಾಡಿ ಕನ್ನಡದ ಇತಿಹಾಸ, ರಾಜಕೀಯ, ಸಾಂಸ್ಕೃತಿಕ ,ಆರ್ಥಿಕ ವೈವಿಧ್ಯತೆಗಳ ವಿವರಣೆಯನ್ನು ನೀಡಿ ಪ್ರತಿ ಹಂತದಲ್ಲೂ ಕನ್ನಡ ಭಾಷೆಯ ಬೆಳವಣಿಗೆಗೆ ನಮ್ಮೆಲ್ಲರ ಶ್ರಮ ಅಗತ್ಯವೆಂದರು. ಹಿರಿಯ ಉಪನ್ಯಾಸಕರಾದ ಮೂರ್ತಿರವರು  ಕನ್ನಡ ಗೀತೆಗಳನ್ನು ಹಾಡಿದರು. ಉಪನ್ಯಾಸಕರಾದ ಬಸವಣ್ಣ, ಸುರೇಶ್, ದೊಡ್ಡಮ್ಮಮಾತನಾಡಿದರು. ಪ್ರಾಂಶುಪಾಲ ಶಿವನಂಜಪ್ಪ ಅಧ್ಯಕ್ಷತೆ ವಹಿಸಿದ್ದರು.

- Advertisement - 

 

Share This Article
error: Content is protected !!
";