ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ವ್ಯಕ್ತಿ ಒಬ್ಬನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸ್ ಶ್ವಾನ ‘ತಾರಾ‘ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಆರೋಪಿ ಇದ್ದ ಕಡೆಯೇ ಓಡಿದ ಶ್ವಾನ, ಆತನನ್ನು ಎಳೆದು ತಂದು ಪೊಲೀಸರಿಗೆ ಒಪ್ಪಿಸಿದೆ.
ದಾವಣಗೆರೆ ತಾಲೂಕಿನಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹೊನ್ನೂರು ಗ್ರಾಮದ ಜಮೀನಿನಲ್ಲಿ ಎಪ್ರಿಲ್- 5ರಂದು ವ್ಯಕ್ತಿಯೊಬ್ಬನ ಕೊಲೆ ಆಗಿತ್ತು. ಆದರೆ, ಮೃತನು ಬೇರೆ ಗ್ರಾಮದವನಾಗಿದ್ದ ಕಾರಣ ಹೊನ್ನೂರು ಗ್ರಾಮಸ್ಥರು ಗೊಂದಲದಲ್ಲಿದ್ದರು.
ಪೊಲೀಸರ ಚುರುಕಿನ ತನಿಖೆ ಬಳಿಕ ಆರೋಪಿ ಚಿತ್ರದುರ್ಗ ತಾಲೂಕಿನ ಹೆಗಡೆಹಾಳ್ ಗ್ರಾಮದ ನಿವಾಸಿ ಶಿವಕುಮಾರ್ ಎಂಬುದನ್ನು ಪೊಲೀಸರು ಗುರುತಿಸಿದ್ದರು. ಶ್ವಾನದ ನೆರವಿನಿಂದ ಕೊಲೆ ಆರೋಪಿ ಜಯಪ್ಪನನ್ನು ಪೊಲೀಸರು ಈಗ ಬಂಧಿಸಿದ್ದಾರೆ.
ಏನಿದು ಪ್ರಕರಣ:
ಆರೋಪಿ ಜಯಪ್ಪನ ಹೆಂಡತಿ ಜೊತೆ ಶಿವಕುಮಾರ್ ಅನೈತಿಕ ಸಂಬಂಧ ಹೊಂದಿದ್ದಾನೆಂದು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಶ್ವಾನ ದಳವು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಶ್ವಾನ ತಾರಾ ವಾಸನೆ ಮೂಲಕ ಘಟನಾ ಸ್ಥಳದಿಂದ ಓಡಿ ಹೋಗಿ, ಹಲವು ಕಿಲೋ ಮೀಟರ್ ದೂರದಲ್ಲಿದ್ದ ಕೊಲೆ ಆರೋಪಿ ಜಯಪ್ಪನನ್ನು ಹುಡುಕಿ, ಪೊಲೀಸರಿಗೆ ಒಪ್ಪಿಸಿದೆ. ಮೂರು ವರ್ಷದ ತಾರಾ ಚಿಕ್ಕ ವಯಸ್ಸಿನಲ್ಲಿಯೇ ಇದುವರೆಗೆ 10 ಕೊಲೆ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಈ ಹಿಂದೆ ಮಲ್ಲಶೆಟ್ಟಿಹಳ್ಳಿಯಲ್ಲಿ ನಡೆದಿದ್ದ ಕೊಲೆಯ ಆರೋಪಿಯನ್ನು 10 ಕಿಲೋಮೀಟರ್ ಓಡಿ ಹೋಗಿ ಹಿಡಿದು ಸಾಧನೆ ಮಾಡಿದ್ದಳು.
ಅಕ್ರಮ ಸಂಬಂಧ: ಆರೋಪಿ ಜಯಪ್ಪನ ಪತ್ನಿ ಹಾಗೂ ಶಿವಕುಮಾರ್ ಒಂದೇ ಗ್ರಾಮದವರು. ಮೃತನಿಗೆ ವಿವಾಹವಾಗಿರಲಿಲ್ಲ. ಜಯಪ್ಪನ ಪತ್ನಿ ಮದುವೆಗೂ ಮುನ್ನ ಶಿವಕುಮಾರ್ನೊಂದಿಗೆ ಪ್ರೀತಿಯಲ್ಲಿ ಇದ್ದಳು. ಆದರೆ ಪೋಷಕರು ಜಯಪ್ಪನೊಂದಿಗೆ ವಿವಾಹ ಮಾಡಿ ಕೊಟ್ಟಿದ್ದರು. ಮದುವೆಯಾದರೂ ಈಕೆಗೆ ಶಿವಕುಮಾರ್ನನ್ನು ಮರೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಇಬ್ಬರೂ ವಿವಾಹದ ನಂತರವೂ ಆಗಾಗ್ಗೆ ಭೇಟಿಯಾಗುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ನೇಹಿತನ ಜೊತೆಗೆ ಬೈಕ್ನಲ್ಲಿ ಬಂದ ಮೃತ ಶಿವಕುಮಾರ್ ಪೋನ್ ಮಾಡಿ ಜಯಪ್ಪನ ಹೆಂಡತಿಯನ್ನು ಹೊನ್ನಾಳಿಯ ಜಮೀನೊಂದಕ್ಕೆ ಕರೆಸಿಕೊಂಡಿದ್ದ. ಈ ವೇಳೆ ಪತ್ನಿ ಮತ್ತು ಶಿವಕುಮಾರ್ ಇಬ್ಬರು ಜೊತೆಗಿರುವುದನ್ನು ಪತಿ ಜಯಪ್ಪ ನೋಡಿದ್ದಾನೆ. ಶಿವಕುಮಾರನ ಸ್ನೇಹಿತರು ಆತನಿಗೆ ಕರೆ ಮಾಡಿ ಮಾಹಿತಿ ತಿಳಿಸಲು ಮುಂದಾಗಿದ್ದು ಸ್ವಿಚ್ ಆಫ್ ಆಗಿದ್ದರಿಂದ ಸ್ನೇಹಿತರು ಶಿವಕುಮಾರ್ ಗೆ ಮಾಹಿತಿ ತಿಳಿಸಲು ಸಾಧ್ಯವಾಗಿಲ್ಲ.
ಇನ್ನೊಂದು ಪೋನ್ಗೆ ಕರೆ ಮಾಡಿದರೆ ಜಯಪ್ಪನ ಪತ್ನಿ ಕರೆ ಸ್ವೀಕರಿಸಿ, ಶಿವಕುಮಾರ್ ಮತ್ತು ನಾನು ಜೊತೆಗಿರುವುದನ್ನು ನನ್ನ ಪತಿ ನೋಡಿದ್ದಾರೆ. ಶಿವಕುಮಾರ್ ಇಲ್ಲಿಂದ ಓಡಿಹೋಗಿದ್ದಾನೆ ಎಂದಿದ್ದಳು. ಆದರೆ ಮರುದಿನ ಶಿವಕುಮಾರ್ ಶವ ಪತ್ತೆಯಾಗಿತ್ತು. ತನ್ನ ಪತ್ನಿಯು ಬೇರೊಬ್ಬನ ಜೊತೆ ಇರುವುದನ್ನು ಕಂಡ ಜಯಪ್ಪ ಹೊಡೆದು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಕೊಲೆ ಪ್ರಕರಣ ಸಂಬಂಧ ಮಾಹಿತಿ ನೀಡಿ ಏಪ್ರಿಲ್ 05ರಂದು ಕೊಲೆ ಪ್ರಕರಣ ನಡೆದಿತ್ತು. ಮೃತನ ಸಂಬಂಧಿ ಕೊಲ್ಲಪ್ಪ ಎಂಬವರು ಈ ಬಗ್ಗೆ ದೂರು ನೀಡಿದ್ದರು. ಶಿವಕುಮಾರ್ ಅವರಿಗೆ ಹೊನ್ನೂರು ನಿವಾಸಿ ಜಯಪ್ಪನ ಪತ್ನಿಯ ಪರಿಚಯವಿತ್ತು. ಆಗಾಗ ಶಿವಕುಮಾರ್ ಬಂದು ಆಕೆಯನ್ನು ಭೇಟಿ ಆಗಿ ಹೋಗುತ್ತಿದ್ದ.
ಈ ವಿಚಾರ ತಿಳಿದ ಜಯಪ್ಪ ಎಚ್ಚರಿಕೆಯನ್ನೂ ನೀಡಿದ್ದ. ಆದರೂ ಇವರಿಬ್ಬರು ಭೇಟಿಯಾಗುವುದನ್ನ ನಿಲ್ಲಿಸಿರಲಿಲ್ಲ, ಇದರ ಕೋಪಗೊಂಡಿದ್ದ ಜಯಪ್ಪ ಜಮೀನಿನಲ್ಲಿ ಶಿವಕುಮಾರ್ ತಲೆ, ಮುಖಕ್ಕೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಜಯಪ್ಪನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.
ಶ್ವಾನ(ತಾರಾ) ಕೊಲೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಗ್ರಹಿಸಿತ್ತು. ಆಗ ಹೊನ್ನೂರು ಗ್ರಾಮದ ಹೊಲದ ಬಳಿಯಿದ್ದ ಆರೋಪಿ ಶಿವಕುಮಾರ್ನನ್ನು ಪತ್ತೆ ಹಚ್ಚುವ ಮೂಲಕ ತಾರಾ ಒಳ್ಳೆಯ ಕೆಲಸ ಮಾಡಿದೆ. ಇದೇ ರೀತಿಯ ಸಾಕಷ್ಟು ಪ್ರಕರಣಗಳನ್ನು ಅದು ಭೇದಿಸಿದೆ. ಆರೋಪಿಯನ್ನು ವಿಚಾರಣೆ ನಡೆಸಿದಾಗ ಮದುವೆಗೂ ಮುನ್ನ ಶಿವಕುಮಾರ್ ಜೊತೆ ಪತ್ನಿಗೆ ಸಂಬಂಧವಿತ್ತು. ಆಗಾಗ ಬಂದು ಹೋಗುತ್ತಿದ್ದ ಎಂಬುದು ತಿಳಿದುಬಂದಿದೆ ಎಂದು ಎಸ್ಪಿ ತಿಳಿಸಿದರು.