ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಚಿವ ಡಿ.ಸುಧಾಕರ್ ಆಪ್ತನೆಂದು ಹೇಳಿಕೊಂಡು ಪೊಲೀಸರ ಮೇಲೆ ಹಲ್ಲೆ ಮಾಡಿರುವ ಪ್ರಕರಣ ಚಿತ್ರದುರ್ಗ ನಗರದಲ್ಲಿ ಸೋಮವಾರ ರಾತ್ರಿ ಜರುಗಿದೆ.
ಚಿತ್ರದುರ್ಗದ ವಿಜ್ಞಾನ ಕಾಲೇಜ್ ಮುಂಭಾಗದಲ್ಲಿ ಗುಂಪೊಂದು ಮಾತಿನ ಚಕಾಮಕಿಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಕರ್ತವ್ಯ ನಿರತ ಪೊಲೀಸ್ ಪೇದೆ ದೇವರಾಜ್ ಹಾಗೂ ನಾಗರಾಜ್ ಅವರು ಗುಂಪು ಚದಿರಸಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಇಬ್ಬರು ಪೊಲೀಸರ ಮೇಲೆ ಆರೋಪಿ ಭರತ್ ರೆಡ್ಡಿ ಹಲ್ಲೆ ಮಾಡಿದ್ದ ಎನ್ನಲಾಗಿದೆ.
ಆರೋಪಿಗಳಾದ ಭರತ್ ರೆಡ್ಡಿ ಮತ್ತು ಆತನ ಸ್ನೇಹಿತರು ಈ ಸಂದರ್ಭದಲ್ಲಿ IGP, SP, DYSP ಹೆಸರೇಳಿ ಪೊಲೀಸರಿಗೆ ಬೆದರಿಕೆ ಹಾಕಿಯನ್ನೂ ಹಾಕಿದ್ದರು ಎನ್ನಲಾಗಿದೆ.
ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನ ಅರಿತ ಇಬ್ಬರು ಪೊಲೀಸರು ಮತ್ತೊಂದಿಷ್ಟು ಪೊಲೀಸರನ್ನು ಕರೆಸಿ ಬಡಾವಣೆ ಠಾಣೆಗೆ ಆರೋಪಿಗಳಾದ ಭರತ್ ರೆಡ್ಡಿ(ಎ1), ಎ2 ಆರೋಪಿ ಅರುಣ್, ಎ3 ಆರೋಪಿ ರಾಕೇಶ್ ಹಾಗೂ ಎ4 ಆರೋಪಿ ಪೃಥ್ವಿ ಇವರುಗಳನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಇದೇ ಸಂದರ್ಭದಲ್ಲಿ ನಾಲ್ಕು ಜನ ಆರೋಪಿಗಳ ವಿರುದ್ದ ಬಡಾವಣೆ ಪೊಲೀಸರು FIR ಮಾಡಿದ್ದಾರೆ.
4 ಆರೋಪಿಗಳನ್ನ ಠಾಣೆಗೆ ಕರೆತಂದು ಎ1 ಆರೋಪಿ ಭರತ್ ರೆಡ್ಡಿಯನ್ನು ಪೊಲೀಸರು ಬಿಟ್ಟು ಕಳುಹಿಸಿ ಉಳಿದ ಮೂರು ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಪ್ರಮುಖ ಆರೋಪಿ ಭರತ್ ರೆಡ್ಡಿ ಹೊರೆತುಪಡಿಸಿ ಉಳಿದ ಮೂರು ಮಂದಿ ಆರೋಪಿಗಳು ಜೈಲು ಕಂಬಿ ಎಣಿಸುತ್ತಿದ್ದಾರೆ.
ಪೊಲೀಸರೇ ಹೆದರಿ ಎ1 ಆರೋಪಿ ಭರತ್ ರೆಡ್ಡಿಯನ್ನು ಠಾಣೆಯಿಂದ ಬಿಟ್ಟು ಕಳುಹಿಸಿದ್ರಾ ಅಥವಾ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಎ1 ಆರೋಪಿ ಬಿಟ್ಟು ಕಳುಹಿಸಲು ಪೊಲೀಸರ ಮೇಲೆ ಒತ್ತಡ ಹಾಕಿದ್ರಾ ಎನ್ನುವ ಅನುಮಾನ ಕಾಡತೊಡಗಿದೆ.
4 ಜನ ಆರೋಪಿಗಳನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆತಂದಿದ್ದ ಪೊಲೀಸರು ಎ1 ಆರೋಪಿಯನ್ನ ಪೊಲೀಸರು ಕೈ ಬಿಟ್ಟಿದ್ಯಾಕೆ?, ಚಿತ್ರದುರ್ಗ ಬಡಾವಣೆ ಠಾಣೆ ಪೊಲೀಸರ ನಡೆ ಅನುಮಾನ ಮೂಡಿಸಿದೆ. ಜನ ಸಾಮಾನ್ಯರಿಗೊಂದು ನ್ಯಾಯ, ಪ್ರಭಾವಿಗಳಿಗೆ ಒಂದು ನ್ಯಾಯನಾ? ಪೊಲೀಸರ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಧಾನ ವ್ಯಕ್ತವಾಗುತ್ತಿದೆ.