ಉತ್ತಮ ಸಮಾಜಕ್ಕೆ ಉತ್ತಮ ಸಂದೇಶ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಾಮಾಣಿಕ ಸ್ನೇಹಕ್ಕೆ ಬಹಳಷ್ಟು ಮಹತ್ವ ಸ್ಥಾನಮಾನವಿದೆ ಹಾಗೂ ಗೌರವವಿದೆ. ಸ್ನೇಹದ ಮಹತ್ವವಾದ ಗೌರವವನ್ನು ಪ್ರಾಮಾಣಿಕವಾಗಿ ಕಾಪಾಡಿಕೊಂಡವರೇ ಹೃದಯವಂತರರು.

ಸ್ನೇಹದ ಮಹತ್ವದ ಒಗ್ಗಟ್ಟಿನಲ್ಲಿ ಇತಿಹಾಸ ಸೃಷ್ಟಿಸಿದವರು ಇದ್ದಾರೆ ಹಾಗೂ ಕೀರ್ತಿಯನ್ನು ಗಳಿಸಿದ್ದಾರೆ. ಸ್ನೇಹದ ಸೋಗಿನಲ್ಲಿ ಮೋಸ ಹಾಗೂ ದೌರ್ಜನ್ಯ ಮಾಡುವವರು ಅವರ ಆತ್ಮಕ್ಕೆ ಅವರೇ ದ್ರೋಹ ಬಗೆದುಕೊಂಡಂತೇ.
ಪವಿತ್ರ ಗ್ರಂಥವಾದ  ಮಹಾಭಾರತದಲ್ಲಿ ಸ್ನೇಹದ ವಿಶ್ವಾಸಕ್ಕೆ ಬಹಳಷ್ಟು ಮಹತ್ವ ನೀಡಲಾಗಿದೆ . ಯುಗಗಳು ಕಳೆದರು ಸ್ನೇಹದ ವಿಶ್ವಾಸಕ್ಕೆ ಮಾದರಿಯಾಗಿ ನಿಂತಿದ್ದಾರೆ ಕರ್ಣ, ಕೃಷ್ಣ
, ಸುಧಾಮ. 

ಮಹಾಭಾರತದ ಕುರುಕ್ಷೇತ್ರದ ಯುದ್ದದಲ್ಲಿ ದುರ್ಯೋಧನನ ಪಡೆಯುವರು ಸೋಲುತ್ತಾರೆ ಎಂಬ ಸತ್ಯ ಕರ್ಣನಿಗೆ ತಿಳಿದಿತ್ತು ಹಾಗೂ ಯುದ್ದದ ಸಮಯದಲ್ಲಿ ಕರ್ಣನ ಜನ್ಮ ರಹಸ್ಯ ತಿಳಿದರು ಸ್ನೇಹದ ವಿಶ್ವಾಸಕ್ಕೆ ಮಹತ್ವ ನೀಡಿ ಕುರುಕ್ಷೇತ್ರ ಯುದ್ದದಲ್ಲಿ ದುರ್ಯೋಧನ ಪರವಾಗಿ ಕರ್ಣನು ದೊಡ್ಡ ಪ್ರಮಾಣದಲ್ಲಿ ಯುದ್ದವನ್ನು ಮಾಡಿರುವ ಕರ್ಣ ತನ್ನ ಸಹೋದರರಿಂದಲ್ಲೆ ಸಾವನ್ನು ಕಾಣಬೇಕಾಯಿತು. ಇದು ಸ್ನೇಹದ ವಿಚಾರದಲ್ಲಿ ಅಜರಾಮರವಾಗಿ ಉಳಿದಿರುವ ಚರಿತ್ರೆ.

ದ್ವಾಪರ ಯುಗದಲ್ಲಿ ಕೃಷ್ಣ ಪರಮಾತ್ಮನ ಸ್ನೇಹಿತನಾಗಿ ಸುದಾಮನ ಪಾತ್ರವೊಂದು ಬರುತ್ತದೆ. ಬಡತನದ ಕಷ್ಟದಲ್ಲಿರುವ ಸುಧಾಮ ಸ್ನೇಹಿತನಾದ ಕೃಷ್ಣ ಪರಮಾತ್ಮನಿಂದ ಯಾವುದೇ ಒಂದು ಸಹಾಯ ನಿರೀಕ್ಷೆ ಮಾಡಲಿಲ್ಲ. ಈ ವಿಚಾರದಲ್ಲಿಯೇ ಸುಧಾಮ ಐತಿಹಾಸಿಕವಾಗಿ ಇತಿಹಾಸದಲ್ಲಿ ಸೇರ್ಪಡೆಯಾದ.  ಕೃಷ್ಣ ಪರಮಾತ್ಮ ಸುಧಾಮನ ಕಷ್ಟ ಕಾರ್ಪಣ್ಯಗಳನ್ನು ಗಮನಿಸಿ ಸುಧಾಮನ ಕಷ್ಟಗಳಿಗೆ ಸ್ಪಂದಿಸಿದ ಈ ಮೂಲಕ ಸ್ನೇಹ ವಿಶ್ವಾಸದ ಗಟ್ಟಿತನವನ್ನು ಜಗತ್ತಿಗೆ ಪರಿಚಯಿಸಿದ ಕೃಷ್ಣ ಪರಮಾತ್ಮ.

ಈ ಕಾಲಘಟ್ಟದಲ್ಲಿ ಸ್ನೇಹಕ್ಕೆ ಮಹತ್ವವಾದ ಸ್ಥಾನವಿದೆ. ಸ್ನೇಹಿತರು ಜೋಡೆತ್ತಿನ ರೀತಿಯಲ್ಲಿ ನ್ಯಾಯಬದ್ಧವಾಗಿ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದಾರೆ. ರಾಜಕೀಯ ಬೆಳವಣಿಗೆಯಲ್ಲಿ ಒಬ್ಬರಿಗೊಬ್ಬರು ಪ್ರಬಲವಾಗಿ ಬೆಳೆದಿದ್ದಾರೆ.  ಸಂಸಾರಿಕ ಕಷ್ಟಗಳಿಗೆ ಸ್ಪಂದಿಸುತ್ತಾರೆ. ಇನ್ನು ಹಲವಾರು ವಿಚಾರಗಳಲ್ಲಿ ಸ್ನೇಹದ ವಿಶ್ವಾಸಕ್ಕೆ ಮಹತ್ವನ್ನು ನೀಡಿದವರನ್ನು ಈ ನಾಗರಿಕತೆಯ ಸಮಾಜದಲ್ಲಿ ಕಾಣಬಹುದು.

 ಸ್ನೇಹದ ವಿಶ್ವಾಸದಲ್ಲಿ ಅಗಾಧವಾದ ನಂಬಿಕೆ ಹುಟ್ಟಿಸಿ ಮೋಸ ಮಾಡುವವರು ಇದ್ದಾರೆ. ನಂಬಿಕೆಯ ಮೋಸದಿಂದ ಆಗುವಂತಹ ದೊಡ್ಡ  ಆಘಾತಕ್ಕೆ ಜೀವನದಲ್ಲಿ ಎಲ್ಲವನು ಕಳೆದುಕೊಂಡು ಸಾವನ್ನು ಕಂಡವರು ಇದ್ದಾರೆ. ಈ ವಿಚಾರದಲ್ಲಿ ಮೋಸಗಾರರಿಗೆ ಪಾಪಪ್ರಜ್ಞೆ ಶಾಶ್ವತವಾಗಿ ಉಳಿಯುತ್ತದೆ.

ಸ್ನೇಹ, ವಿಶ್ವಾಸ, ನಂಬಿಕೆ ಈ ವಿಚಾರಗಳನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗಲು ಸ್ನೇಹವನ್ನು ನಂಬಿಕೆಯ ಆತ್ಮವಿಶ್ವಾಸದ ಪ್ರಕಾರವಾಗಿ ಗಟ್ಟಿಗೊಳಿಸಬೇಕು. ಸ್ನೇಹವೆಂದರೆ ಕನ್ನಡಿ ಇದ್ದಂತೆ ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು ಬಂಧುಗಳೆ.

 ಸ್ನೇಹಕ್ಕೆ ಸ್ನೇಹ ಈ ವಿಚಾರ ಪ್ರಗತಿಪರ ಬದುಕು ಹೌದು. ಜೀವಕ್ಕೆ ಅಂತ್ಯವು ಹೌದು ಸ್ನೇಹಿತರೆ.
ಲೇಖನ-ರಘು ಗೌಡ 9916101265

 

Share This Article
error: Content is protected !!
";