ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಕಾರ್ಮಿಕ ಇಲಾಖೆಯೂ ಹಗರಣಗಳ ಗೂಡಾಗಿದೆ. ಔಷಧಿಗಳು ಮತ್ತು ನ್ಯೂಟ್ರಿಷನ್‌ಕಿಟ್‌ಖರೀದಿಯಲ್ಲೂ ಕಾಂಗ್ರೆಸ್‌ಲೂಟಿ ಬಯಲಿಗೆ ಬಂದಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ಸರ್ಕಾರದ ಅನುಮತಿ ಪಡೆಯದೇ ನಿಯಮಗಳನ್ನು ಉಲ್ಲಂಘಿಸಿ ಔಷಧ ಖರೀದಿಯಲ್ಲಿ ಭಾರೀ ಗೋಲ್‌ಮಾಲ್‌ನಡೆದಿದೆ.
ಜೊತೆಗೆ ಮಾರುಕಟ್ಟೆಯಲ್ಲಿ ಕೇವಲ 600ಕ್ಕೆ ಸಿಗುವ ನ್ಯೂಟ್ರಿಷನ್‌ಕಿಟ್‌ಗಳಿಗೆ 2600 ಕೊಟ್ಟು ಖರೀದಿಸಲಾಗಿದೆ. 400 ಪಟ್ಟು ದುಪ್ಪಟ್ಟು ಹಣ ನೀಡಿ ಕೋಟ್ಯಂತರ ರೂ. ಹಣವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸ್ವಾಹ ಮಾಡಿದ್ದಾರೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ರಾಜ್ಯದ ಇಎಸ್‌ಐ ಆಸ್ಪತ್ರೆಗಳಿಗೆ 2023-24ನೇ ಸಾಲಿನಲ್ಲಿ 16.32 ಕೋಟಿ ವೆಚ್ಚದಲ್ಲಿ ಹೈಟೆಕ್ ಆಂಬ್ಯುಲೆನ್ಸ್ , ಇಸಿಜಿ ಯಂತ್ರ ಸೇರಿದಂತೆ ವೈದ್ಯಕೀಯ ಸಲಕರಣೆ ಮತ್ತು ಔಷಧಗಳ ಖರೀದಿಯಲ್ಲಿ ಅಕ್ರಮ ನಡೆದಿತ್ತು ಎಂದು ಜೆಡಿಎಸ್ ದೂರಿದೆ.