ಸಾವಿರ ಹಗರಣಗಳ ಸರಮಾಲೆ ಹೊತ್ತ ಸಾವಿರ ದಿನಗಳ ಸರ್ಕಾರ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಸಾವಿರ ದಿನಗಳು ಭರ್ತಿಯಾಗಿದೆ. ಇದೇ ಸಂದರ್ಭದಲ್ಲಿ ಸಾವಿರ ಹಗರಣಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಆಡಳಿತ ಸಿಲುಕಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದರು.

ಚಿತ್ರದುರ್ಗದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಶೋಕ್ ಅವರು 1000 ದಿನಗಳಲ್ಲಿ ಸಾವಿರಾರು ಹಣಗರಗಳು ಸಿಎಂ ಕೊರಳಿಗೆ ಸುತ್ತಿಕೊಂಡಿವೆ. ಮುಡಾದಲ್ಲಿ 14 ಸೈಟ್ ನುಂಗಿದ ಸಿಎಂ ಮತ್ತೆ ನಮ್ಮ ಹೋರಾಟದ ಫಲವಾಗಿ ವಾಪಸ್ ನೀಡಿದರು. ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರದ ಮೂಲ ಪುರುಷ ಎಂದು ವಾಗ್ದಾಳಿ ಮಾಡಿದರು.

- Advertisement - 

ಬಿಜೆಪಿ ಸರ್ಕಾರದಲ್ಲಿ ಶೇ.40ರಷ್ಟು ಲಂಚ ಇದೆ ಅಂತಾ ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣೆಗೆ ಹೋದ್ರು, ಈಗ ಬಿಜೆಪಿ ಗಿಂತ ಕಾಂಗ್ರೆಸ್ ಆಡಳಿತದಲ್ಲಿ ದುಪ್ಪಟ್ಟು ಆಗಿದೆ ಎಂಥ ಗುತ್ತಿಗೆದಾರರು ಆರೋಪಿಸುತ್ತಿದ್ದಾರೆ. ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯಬಾರದು ಎಂದು ಅಶೋಕ್ ತಾಕೀತು ಮಾಡಿದರು.

65 ಸಾವಿರ ಟ್ಯಾಕ್ಸ್ ಸಂಗ್ರಹಿಸಿದ್ದು ಎಲ್ಲಿ, ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣ ಆಯಿತು. ಸದನದಲ್ಲಿ ಸಿಎಂ ಬರೀ 87 ಕೋಟಿ ಅಂತಾ ಒಪ್ಪಿದ್ರು, ಅಬಕಾರಿ ಇಲಾಖೆಯಲ್ಲಿ 6000 ಕೋಟಿ ಹಗರಣ ಆಗಿದೆ. ಅಬಕಾರಿ ಡಿಸಿಗೆ ಎರಡೂವರೆ ಕೋಟಿ, ಅಬಕಾರಿ ವೃತ್ತ ನಿರೀಕ್ಷಕರಿಗೆ 25 ಲಕ್ಷ, ಪಿಸಿಗೆ 15 ಲಕ್ಷ ಹೀಗೆ ಪಟ್ಟಿ ದೊಡ್ಡದಾಗುತ್ತ ಹೋಗುತ್ತದೆ ಎಂದು ಅಶೋಕ್ ದೂರಿದರು.

- Advertisement - 

ವಿಧಾನಸೌಧದಲ್ಲಿ ಚಿನ್ನಾಭರಣ, ನಗದು ಕಂಡು ಬಂದರೆ ಸರಕಾರಿ ಇಲಾಖೆಯಲ್ಲಿ ಕಾಂಚಾಣ ಸುದ್ದು ಮಾಡುತ್ತಿದೆ. 1000 ದಿನದ ಸಾಧನೆ ಇದೇನಾ ಎಂದು ಅಶೋಕ್ ಟೀಕಾಪ್ರಹಾರ ಮಾಡಿದರು.

ಕಾಂಗ್ರೆಸ್ ಖದೀಮರು 5 ಸಾವಿರ ಕೋಟಿ ಗೃಹಲಕ್ಷ್ಮೀ ಹಣ ಕೊಡ್ತೀನಿ ಅಂತಾ ಹೇಳಿ ಇಂದಿಗೂ ಕೊಟ್ಟಿಲ್ಲ, ಅಕ್ಕಿ ಹಣ 780 ಕೋಟಿ ಏನಾಯ್ತು ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
5 ಸಾವಿರ ಕೋಟಿ ಹಣದ ಬಗ್ಗೆ ಮಂತ್ರಿ
,ಆರ್ಥಿಕ ಇಲಾಖೆ ನಡುವೆ ಗೊಂದಲ ಹೇಳಿಕೆ ನೀಡಿದರು. ಡಿಕೆಶಿ ಪಾಪ ಹೆಣ್ಣುಮಗಳು ಅಂತಾ ಆರ್ಥಿಕ ಇಲಾಖೆ ಕೊಟ್ಟಿಲ್ಲ ಅಂತಾರೆ ಎಂದು ಅಶೋಕ್ ದೂರಿದರು.

ಆರ್ ಸಿಬಿ ವಿಜಯೋತ್ಸವದಲ್ಲಿ 11 ಜನರ ಸಾವಾಯ್ತು, ಈಗ ಒತ್ತಡಕ್ಕೆ ಮಣಿದು ಮತ್ತು ಕ್ರೀಡೆಗೆ ಅವಕಾಶ ನೀಡಲಾಗುತ್ತಿದೆ. ರಾಜ್ಯದಲ್ಲಿ ಬ್ಯಾಂಕ್ ದರೋಡೆಗಳು ಆಗ್ತಿವೆ, ಕೆಲ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಕೆಲ ಪೊಲೀಸರೇ ಕಳ್ಳರಾಗಿದ್ದಾರೆ. ಇದರ ಬಗ್ಗೆ ಕೇಳಿದ್ರೆ ಗೃಹಮಂತ್ರಿಗಳು ಗೊತ್ತಿಲ್ಲ ಅಂತಾರೆ, ಸರಕಾರದ ಲಂಚಾವತಾರಕ್ಕೆ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡ್ರು, ಶಾಸಕರುಗಳು ಹಾಗೂ ಪುಡಾರಿಗಳು ತಹಶೀಲ್ದಾರಿಗೆ ಚಪ್ಪಲಿಯಲ್ಲಿ ಹೊಡೀತೀನಿ ಅಂದ್ರು, ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಪುಡಾರಿಯಿಂದ ಕಮಿಷನರ್ ಗೆ  ಅವಾಜ್ ಹಾಕಿದರು. ಮರಳು ಮಾಫಿಯಾ ದಂಧೆ ಕಾಂಗ್ರೆಸ್ ಸರ್ಕಾರದ ಎಟಿಎಂ ಆಗಿದೆ. ಇಂದು ಅಧಿಕಾರಿಗಳು ಸರಕಾರಕ್ಕೆ ಕಾಪಾಡಿ ಅಂತಾ ನಿಂತಿದ್ದಾರೆ. ಗುತ್ತಿಗೆದಾರರು ನಮ್ಮ ಹೋರಾಟ ಮತ್ತು ನಮ್ಮ ತಪ್ಪಿನಿಂದಲೇ ಕಾಂಗ್ರೆಸ್ ಸರಕಾರ ಬಂತು ಅಂತಾ ಹೇಳಿದ್ದಾರೆ. ಕೆಂಪಣ್ಣ ಸತ್ತಾಗ ನೋಡಲೂ ಸಿಎಂ ಹೋಗಲಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಕ್ಸಮರ ಮಾಡಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ವಿಚಾರವಾಗಿ ಪ್ರತಿಭಟನೆ ಮಾಡುತ್ತೇವೆ. ಸಿಎಂ ಆಗೋ ವಿಚಾರಕ್ಕೆ ಸಿದ್ಧರಾಮಯ್ಯ ಡಿಕೆ ಶಿವಕುಮಾರ್ ನಡುವೆ ಗೊಂದಲ ಇದೆ. ಈ‌ಮಧ್ಯೆ ಸರಕಾರ ಲೂಟಿ ಹೊಡೆಯುವ ಕಾರ್ಯ ಮಾಡುತ್ತಿದೆ. ಹಾವೇರಿ ಸಮಾವೇಶ ಲೂಟಿಗಾಗಿ ಸಮಾವೇಶ ನಡೆಯುತ್ತಿದೆ. ಅಲ್ಲಿಗೆ ಲೂಟಿ ಹೊಡೆದವರೇ ಬರ್ತಾರೆ, ರಾಜ್ಯದಲ್ಲಿ ಲೂಟಿ ಹೊಡೆದು, ರಾಹುಲ್ ಗಾಂಧಿಗೆ ಕೊಡ್ತಾರೆ ಎಂದು ಗಂಭೀರ ಆರೋಪ ಮಾಡಿದ ಅಶೋಕ್ ಅವರು, ಇದು ಕಾಂಗ್ರೆಸ್ ಸರಕಾರ ಅಲ್ಲ, ಅಲಿಬಾಬಾ ಮತ್ತು 30 ಕಳ್ಳರ ಸರಕಾರ ಎಂದು ಕುಟುಕಿದರು.

ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ರೇಶನ್ ಕಾರ್ಡ್ ಬಂದ್ ಮಾಡ್ತಿದ್ದಾರೆ, ಈ ರೀತಿ ರೇಶನ್ ಕಾರ್ಡ್ ಬಂದ್ ಮಾಡಿದರೆ ಗ್ಯಾರಂಟಿ ಯೋಜನೆಗಳನ್ನು ತಪ್ಪಿಸುವ ಹುನ್ನಾರ ಸರ್ಕಾರ ಮಾಡುತ್ತಿದೆ ಎಂದು ಕಿಡಿ ಕಾರಿದರು. ಗ್ಯಾರಂಟಿ ಕಾರಣಕ್ಕೆ ರೇಶನ್ ಕಾರ್ಡ್ ಬಂದ್ ಮಾಡ್ತಿದ್ದಾರೆ. 1000 ದಿನದಲ್ಲಿ ರಾಜ್ಯವನ್ನು ದಿವಾಳಿ ಮಾಡಿದ ಟೋಪಿ ಸರಕಾರ ಎಂದು ವಾಗ್ದಾಳಿ ಮಾಡಿದರು.

ಕಾಂಗ್ರೆಸ್ ಒತ್ತಡಕ್ಕೆ ಮಣಿದು ಚಿನ್ನಸ್ವಾಮಿಯಲ್ಲಿ ವರದಿ ಬರುವ ಮುನ್ನವೇ ಮತ್ತೆ ಅನುಮತಿ ನೀಡ್ತಿದ್ದಾರೆ. ಎರಡೆರಡು ಕಾರ್ಯಕ್ರಮ ಮಾಡೋಕೆ ಆರ್ ಸಿಬಿ ಹೇಳಿದ್ದರಾ, ನಿಮ್ಮ ಫ್ಯಾಮಿಲಿ ಫೋಟೋಗೆ 11 ಜನರ ಫೋಟೋ ಹಾಕಿಸಿದ್ರು ಎಂದು ಅಶೋಕ್ ದೂರಿದರು.

ಆಪಾದನೆ ಬೇರೆಯವರ ತಲೆಗೆ ಕಟ್ಟಲು ಕುನ್ಹಾ ಆಯೋಗ ರಚನೆ ಆದ್ರೆ ಈಗ ಅವರನ್ನು ಕೇಳದೆ ಯಾಕೆ ಅನುಮತಿ ಕೊಟ್ರಿ ಈ ಸರಕಾರ ಭ್ರಷ್ಟ ಸರಕಾರ, ಹಣ ಕೊಟ್ರೆ ಏನು ಬೇಕಾದ್ರೂ ಮಾಡ್ತಾರೆ, ಶಾಲೆ ಪಕ್ಕ ಬಾರ್ ಗೆ ಅನುಮತಿ ಕೊಟ್ಟಿದ್ದಾರೆ, ಹಣ ಕೊಟ್ರೆ ಏನು ಬೇಕಾದ್ರೂ ಮಾಡಿ ಕೊಡ್ತಾರೆ ಎಂದು ಅವರು ಕಿಡಿಕಾರಿದರು.

ರಾಜ್ಯದ ದೀರ್ಘಾವದಿ ಸಿಎಂ, 17 ಬಾರಿ ಬಜೆಟ್ ಮಂಡಿಸಿದ ಖ್ಯಾತ ಆರ್ಥಿಕ ತಜ್ಞರು 3 ಲಕ್ಷ  ಕೋಟಿ ಸಾಲ ಮಾಡಿದ್ದಾರೆ, ರಾಜ್ಯದ ಪ್ರಾದೇಶಿಕ ಅಸಮಾತೋಲನ ಶೇ.30 ರಷ್ಟು ಹೆಚ್ಚಾಗಿದ್ದು ಹೇಗೆ ಆರ್ಥಿಕ ತಜ್ಞ ಸಿಎಂ ಹೇಳಬೇಕು ಎಂದು ಅಶೋಕ್ ತಾಕೀತು ಮಾಡಿದರು.

ಹಿಂದುಳಿದವರನ್ನು ಮುಂದೆ ತರದಿದ್ರೂ ಹಿಂದಕ್ಕೆ ತುಳಿಯಬೇಡಿ ಅಂತಾ ಅಂಬೇಡ್ಕರ್ ಹೇಳಿದ್ದು ಆದ್ರೆ ಸಿದ್ದರಾಮಯ್ಯ ಹಿಂದಕ್ಕೆ ಎಳೆಯೋ ಗಿರಾಕಿ ರಾಜ್ಯವನ್ನು 9 ವರ್ಷ ಬಿಜೆಪಿ ಆಳಿದ್ದು, ದೀರ್ಘವಾಗಿ ಆಳಿದ್ದು ಕಾಂಗ್ರೆಸ್, ಹಾಗಾದ್ರೆ ಕಾಂಗ್ರೆಸ್ ರಾಜ್ಯದಲ್ಲಿ ಏನು ಮಾಡ್ತು..? ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ವಿಪಕ್ಷ ನಾಯಕ ಅಶೋಕ್ ವಾಗ್ದಾಳಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಗೋವಿಂದ ಕಾರಜೋಳ, ವಿಪ ಶಾಸಕ ಕೆ.ಎಸ್.ನವೀನ್, ಜಿಲ್ಲಾಧ್ಯಕ್ಷ ಕೆ.ಟಿ ಕುಮಾರಸ್ವಾಮಿ, ನಿಕಟಪೂರ್ವ ಜಿಲ್ಲಾಧ್ಯಕ್ಷರುಗಳಾದ ಬಿ.ಸಿ ಹನುಂತೇಗೌಡ, ಮುರುಳಿ, ಉಪಾಧ್ಯಕ್ಷರಾದ ಡಾ.ಸಿದ್ದಾರ್ಥ ಗುಂಡಾರ್ಪಿ, ಮಾಧುರಿ ಗಿರೀಶ್, ಕೆ.ದ್ಯಾಮೇಗೌಡ, ನಾಗರಾಜ್, ರೇಖಾ, ವೆಂಕಟೇಶ್ ಯಾದವ್, ಅಶೋಕ್, ಲೋಕೇಶ್, ಲಕ್ಷ್ಮಿಕಾಂತ್, ನಾಗರಾಜ್ ಬೇದ್ರೆ ಸೇರಿದಂತೆ ಮತ್ತಿತರರು ಇದ್ದರು.

 

Share This Article
error: Content is protected !!
";