ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಚಿಕ್ಕುಂತಿ ಗ್ರಾಮದ ಹಗಲುವೇಷಗಾರರ ಸಾಂಸ್ಕೃತಿಕ ಕಲಾ ಸಂಘ 69ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಹೀರೆಕೆರೆಹಳ್ಳಿ ಅಂಬೇಡ್ಕರ್ ಭವನದಲ್ಲಿ ನಡೆದ ಗ್ರಾಮೀಣ ಕಲಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಲಾಯಿತು.
ಮೊಳಕಾಲ್ಮೂರು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸೈಯದ್ ನಾಸೀರ್ ಉದ್ದೀನ್ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿ ಬಯಲು ಸೀಮೆಯ ಗಡಿನಾಡು ಭಾಗದ ನಮ್ಮ ತಾಲೂಕಿನಲ್ಲಿ ಇಂತಹ ಅಪರೂಪದ ಹಗಲು ವೇಷದಂತಹ ಕಲೆಗಳು ಮರೀಚಿಕೆಯಾಗಿದೆ.
ಇಂತಹ ಕಲೆಯನ್ನು ಉಳಿಸಿ ಬೆಳೆಸಲು ಸರ್ಕಾರ ಮುಂದಾಗಬೇಕು. ನಮ್ಮ ಪೂರ್ವಿಕರು ನೆಡೆದುಕೊಂಡು ಬಂದಂತಹ ಭಜನೆ, ಬಯಲಾಟ, ಸಂಗೀತದಂತಹ ಕಲೆಗಳನ್ನು ಯುವ ಪೀಳಿಗೆಗೆ ಮರಿಚಿಕೆ ಯಾಗದಂತೆ ಈಗಿನ ಯುವಕರು ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಹಗಲುವೇಷಗಾರರ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಶ್ರೀನಿವಾಸ್, ಗ್ರಾಪಂ ಅಧ್ಯಕ್ಷ ವೀರನಗೌಡ, ಉಪಾಧ್ಯಕ್ಷರಾದ ಬಸಪ್ಪ, ಮಾಜಿ ಗ್ರಾಪಂ ಅಧ್ಯಕ್ಷ ಲೋಕೇಶ್ ಪಲ್ಲವಿ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಬಿಎಸ್. ಮಂಜಣ್ಣ, ಹಿರಿಯ ಕಲಾವಿದ ನರಸಪ್ಪ, ನಾಗಸಮುದ್ರ ಮರಿಸ್ವಾಮಿ, ಯರ್ರಿ ಸ್ವಾಮಿ, ಕಲಾವಿದರಾದ ಧೂಪಂ ದುರುಗಪ್ಪ, ಬಸವರಾಜ್, ಅಣ್ಣಪ್ಪ, ಯಲ್ಲಪ್ಪ, ರಂಗಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.