ಸೆಮಿಕಂಡಕ್ಟರ್ ವಲಯದ ಬೆಳವಣಿಗೆಗೆ ಭರ್ಜರಿ ಪ್ರೋತ್ಸಾಹ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ಸೆಮಿಕಂಡಕ್ಟರ್ ವಲಯದ ಬೆಳವಣಿಗೆಗೆ ಭರ್ಜರಿ ಪ್ರೋತ್ಸಾಹ
ಭಾರತದ ಮೊಟ್ಟಮೊದಲ 300m.m. ವೇಫರ್ ವ್ಯಾಲಿಡೇಶನ್ ಕೇಂದ್ರ ಕರ್ನಾಟಕದಲ್ಲಿ ಸ್ಥಾಪನೆ! ಆಗಲಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹೇಳಿದರು.

- Advertisement - 

#AppliedMaterials ಸಂಸ್ಥೆ ಬೃಹತ್ ಹೂಡಿಕೆಗೆ ಮುಂದಾಗಿದೆ. ಬೆಂಗಳೂರಿನಲ್ಲಿ ಸಹಯೋಗದ ಇಂಜಿನಿಯರಿಂಗ್ ಕೇಂದ್ರ ಸ್ಥಾಪನೆಗಾಗಿ 4 ವರ್ಷಗಳಲ್ಲಿ 3,500 ಕೋಟಿ ($400 ಮಿಲಿಯನ್) ಹೂಡಿಕೆ ಮಾಡಲಿದೆ ಎಂದು ಸಚಿವರು ತಿಳಿಸಿದರು.

- Advertisement - 

ಈ ಕೇಂದ್ರದ ಮೂಲಕ ಭವಿಷ್ಯದಲ್ಲಿ 16,000 ಕೋಟಿಗೂ ಹೆಚ್ಚು ($2 ಬಿಲಿಯನ್) ಮೌಲ್ಯದ ಹೂಡಿಕೆಗೆ ಉತ್ತೇಜನ ದೊರೆಯಲಿದೆ. ಭಾರತದ ಮೊಟ್ಟಮೊದಲ ಖಾಸಗಿ 300 m.m. ವೇಫರ್ ವ್ಯಾಲಿಡೇಶನ್  ಕೇಂದ್ರ ಕರ್ನಾಟಕದಲ್ಲಿ ಸ್ಥಾಪನೆಯಲ್ಲಿದೆ ಎಂದು ಎಂ.ಬಿ ಪಾಟೀಲ್ ತಿಳಿಸಿದರು. ಸಾವಿರಾರು ಹೈಟೆಕ್ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಹೂಡಿಕೆ, ಕರ್ನಾಟಕವನ್ನು ಜಾಗತಿಕ ಮಟ್ಟದ ಸೆಮಿಕಂಡಕ್ಟರ್ ಹಾಗೂ ಪ್ರಗತಿಶೀಲ ತಯಾರಿಕಾ ಕೇಂದ್ರವನ್ನಾಗಿ ರೂಪಿಸುವ ನಮ್ಮ ದೃಷ್ಟಿಕೋನದಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ.

#AppliedMaterials ಜೊತೆ ನಮ್ಮ ನಿರಂತರ ಪ್ರಯತ್ನಗಳು ಹಾಗೂ ಕಾರ್ಯತಂತ್ರದ ಸಹಕಾರದ ಫಲವಾಗಿ, ನವೀನ ಆವಿಷ್ಕಾರ ಹಾಗೂ ಪ್ರಗತಿಶೀಲ ತಯಾರಿಕೆಗೆ ಕರ್ನಾಟಕದ ಬಲಿಷ್ಠ ಪರಿಸರ ಮತ್ತೊಮ್ಮೆ ಆಯ್ಕೆಯ ತಾಣವೆಂದು ಸಾಬೀತುಪಡಿಸಿದೆ.

- Advertisement - 

ಈ ಹೂಡಿಕೆ, ಕರ್ನಾಟಕವನ್ನು ಜಾಗತಿಕ ಸೆಮಿಕಂಡಕ್ಟರ್ ಮತ್ತು ಉನ್ನತ ಮೌಲ್ಯದ ತಯಾರಿಕಾ ಕೇಂದ್ರವನ್ನಾಗಿ ಬೆಳೆಸುವ ನಮ್ಮ ದೃಷ್ಟಿಕೋನದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

ಧನ್ಯವಾದಗಳು @Applied4Tech — ಕರ್ನಾಟಕದ ಬೆಳವಣಿಗೆಯ ಕಥೆಗೂ, ಸೆಮಿಕಂಡಕ್ಟರ್ ಸಾಹಸಕ್ಕೂ ನೀವು ಅಮೂಲ್ಯ ಸಹಭಾಗಿಗಳಾಗಿದ್ದೀರಿ ಎಂದು ಪಾಟೀಲ್ ತಿಳಿಸಿದ್ದಾರೆ.

 

 

Share This Article
error: Content is protected !!
";