ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಕೂನಿಕೆರೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆಳುವಿನವರ ಕುಲದ ಸಹೋದರರು, ಭಕ್ತಾಧಿಗಳು, ವಿವಿಧ ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ಮಾರ್ಚ್-3ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ಮಹತ್ವದ ಸಭೆ ಕರೆಯಲಾಗಿದೆ ಎಂದು ಆಳುವಿನ ಕುಲದ ಹಿರಿಯರಾದ ಡಾ.ಎಂ.ಜಿ.ಗೋವಿಂದಯ್ಯ ಅವರು ತಿಳಿಸಿದ್ದಾರೆ.
ಶ್ರೀ ಆಂಜನೇಯಸ್ವಾಮಿ ಕ್ಷೇತ್ರಾ ಅಭಿವೃದ್ಧಿ ಸಮಿತಿ ವತಿಯಿಂದ ಸಭೆ ಕರೆಯಲು ಉದ್ದೇಶಿಸಿದೆ. ಆದ್ದರಿಂದ ಎಲ್ಲಾ ಗ್ರಾಮದ ಪ್ರಮುಖರು ಸಭೆಗೆ ಭಾಗವಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.
ಮಹತ್ವದ ಸಭೆ ಕರೆದಿರುವ ವಿಷಯವನ್ನು ನಿಮ್ಮ ಗ್ರಾಮದಲ್ಲಿ ತಮಟೆ ಮುಖಾಂತರ ಅಥವಾ ಖುದ್ದಾಗಿ ಅಣ್ಣ-ತಮ್ಮಂದಿರುಗಳು ಮನೆಗಳಿಗೆ ಭೇಟಿ ನೀಡಿ ತಿಳಿಸಿ ಭಾಗವಹಿಸುವಂತೆ ತಿಳಿಸಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ.