ಇಬ್ಬರು ಪ್ರಿಯತಮೆಯರಿಗಾಗಿ ಕಳ್ಳತನ, ದರೋಡೆಗಿಳಿದ ಮಹಾನ್ ಕಳ್ಳ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಡದಿ, ಮಕ್ಕಳಿಗಾಗಿ ಏನು ಮಾಡದ ಕೆಲವರು ಪ್ರೀತಿಸಿದ ಯುವತಿಯರಿಗಾಗಿ ಕೊಲೆ, ಸುಲಿಗೆ, ದರೋಡೆ ಏನು ಬೇಕಾದರೂ ಮಾಡುತ್ತಾರೆ. ಇಲ್ಲೊಬ್ಬ ಇಬ್ಬರು ಪ್ರಿಯತಮೆಯರಿಗಾಗಿ ಕಳ್ಳತನ, ದರೋಡೆ ಗಿಳಿದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ ಹಲಸೂರು ಗೇಟ್​​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ಆಸಿಫ್ ಬಂಧಿತ ಆರೋಪಿಯಾಗಿದ್ದು ಮದುವೆಯಾಗಿದ್ದರೂ ಇಬ್ಬರು ಗರ್ಲ್ ಫ್ರೆಂಡ್ಸ್​​ಗಾಗಿ ಬೈಕ್ ಕಳ್ಳತನ, ದರೋಡೆ, ಕೊಲೆಯತ್ನ ಕೂಡ ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಕದ್ದ ಬೈಕ್​ನಲ್ಲಿ ಪ್ರಿಯತಮೆಯರನ್ನು ಜಾಲಿ ರೈಡ್​ಗೆ ಕರೆದೊಯ್ಯುತ್ತಿದ್ದ ಆರೋಪಿ ಆಸಿಫ್ ಬಳಿಕ, ಪ್ರಿಯತಮೆಯನ್ನು ಡ್ರಾಪ್ ಮಾಡಿ ಅಲ್ಲಿಯೇ ಬೈಕ್ ಬಿಟ್ಟು ಬರುತ್ತಿದ್ದ ಎನ್ನಲಾಗಿದೆ.

ವಿವಿಧ ಠಾಣೆಗಳಲ್ಲಿ ಆರೋಪಿ ಆಸಿಫ್​ ವಿರುದ್ಧ ಏಳು ಪ್ರಕರಣ ದಾಖಲಾಗಿವೆ. ಆರೋಪಿ ಆಸಿಫ್​ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡು ತಿರುಗಾಡುತ್ತಿದ್ದ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ 2014ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ. ಹೀಗಾಗಿ, ಹಲಸೂರು ಗೇಟ್ ಪೊಲೀಸರು ಆರೋಪಿ ಆಸಿಫ್​​ಗಾಗಿ ಹುಡುಕಾಟ ನಡೆಸಿದ್ದರು.

ಆರೋಪಿ ಆಸಿಫ್​​​ನ ದಿನಚರಿ ತಿಳಿದು ಪೊಲೀಸರು ಬೆನ್ನುಹತ್ತಿದ್ದರು. ಕೊನೆಗೂ ಹಲಸೂರು ಗೇಟ್ ಪೊಲೀಸರು ಆರೋಪಿ ಆಸಿಫ್​​ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

 

 

- Advertisement -  - Advertisement - 
Share This Article
error: Content is protected !!
";