ಮುನಿರತ್ನ ಶಾಸಕ ಸ್ಥಾನ ವಜಾಗೊಳಿಸಿ- ಒಕ್ಕಲಿಗ ಗೆಳೆಯರ ಬಳಗ ಆಗ್ರಹ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಒಕ್ಕಲಿಗ ಸಮುದಾಯದ ಬಗ್ಗೆ
 ಅವಹೇಳನಕಾರಿಯಾಗಿ ಮಾತನಾಡಿದ ಮುನಿರತ್ನನನ್ನು ಶಾಸಕ ಸ್ಥಾನದಿಂದ ಕೂಡಲೇ ವಜಾಗೊಳಿಸುವಂತೆ ದೊಡ್ಡಬಳ್ಳಾಪುರ ಯುವ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

 ನಗರದ ತಾಲೂಕು  ಕಚೇರಿ ಆವರಣದಲ್ಲಿ  ಒಕ್ಕಲಿಗ ಯುವ ಘಟಕದ ವತಿಯಿಂದ ಶಾಸಕ ಮುನಿರತ್ನ ವಿರುದ್ಧ ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ  ಬುಧವಾರ ಪ್ರತಿಭಟನೆ ನಡೆಸಿದರು.

 ಒಕ್ಕಲಿಗ ಸಮುದಾಯ ಮುಖಂಡ ವಿಶ್ವಾಸ್ ಹುನುಮಂತೇ ಗೌಡ ಮಾತನಾಡಿ, ಸ್ವಾತಂತ್ರ‍್ಯ ಬಂದು 77 ವರ್ಷಗಳು ಕಳೆಯುತ್ತಿದ್ದರೂ ದೇಶದ ಕೆಲವು ಜನಪ್ರತಿನಿಧಿಗಳು ನಡೆದುಕೊಳ್ಳುವ ರೀತಿ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ರೀತಿಯಲ್ಲಿ ಇದೆ. ಸಮಾಜವನ್ನು ಉತ್ತಮ ದಿಕ್ಕಿನ ಕಡೆಗೆ ಮುನ್ನಡೆ ಸಬೇಕಾದ ಜನಪ್ರತಿನಿಧಿಗಳೇ ಜಾತಿ ನಿಂದನೆ ಮಾಡಿರುವುದು ಖಂಡನೀಯ. ಮುನಿರತ್ನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

 ಶಾಸಕ ಮುನಿರತ್ನ ಹಣ ಹಾಗೂ ಅಧಿಕಾರ ಬಲದಿಂದ ದಲಿತ ಗುತ್ತಿಗೆದಾರರನ್ನು ಬಹಳ ನಿಕೃಷ್ಟವಾಗಿ ನಡೆಸಿಕೊಂಡು ಜಾತಿ ಹೆಸರಿಡಿದು ಬಾಯಿಗೆ ಬಂದಂತೆ ಮಾತನಾಡಿ ಕೋಲೆ ಬೆದರಿಕೆ ಹಾಕಿದ್ದಾರೆ. ನಾಗರಿಕ ಸಮಾಜ ಇಂತಹ ಅವೀವೇಕಿಗಳ ನಡತೆಯನ್ನು ತೀವ್ರವಾಗಿ ಖಂಡಿಸ ಬೇಕಾದೆ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಗುತ್ತಿಗೆದಾರರಿಂದ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಸಂವಿಧಾನ ವಿರೋಧಿ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು, ಜೀವ ಬೆದರಿಕೆ ಹಾಕಿರುವ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು  ಆಗ್ರಹಿಸಿದರು.

 ಮುನಿರತ್ನ ಅವರ ವರ್ತನೆ ಸಂವಿಧಾನ ವಿರೋಧಿಯಾಗಿದ್ದು, ಮುಂದಿನ ಯಾವುದೇ ಚುನಾವಣೆಯಲ್ಲಿ ಅವರು ಸ್ಪರ್ಧಿಸದಂತೆ ರಾಜ್ಯಪಾಲರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

 ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಡಿ.ಸಿ.ಶಶಿಧರ್, ವಿಶ್ವಾಸ್, ಮುನಿ ಪಾಪ್ಪಣ್ಣ ಎಚ್(ಆರ್ಸಿಎಂ), ನಾಗೇಶ್ ಸಿ ಗೌಡ, ಹರ್ಷ ಗೌಡ, ಮನೋಹರ್ ಎಂ.ಸಿ., ವಕೀಲರಾದ ರವಿ, ಅಶೋಕ್ ಜೋಗಹಳ್ಳಿ, ದೀಪು ಗೌಡ, ರೇವತಿ, ರತ್ನಮ್ಮ, ಸುನಂದ, ಶೋಭ, ದೇವರಾಜು, ಶಿವಕುಮಾರ್ ಉಪಸ್ಥಿತರಿದ್ದರು.

 

 

- Advertisement -  - Advertisement - 
Share This Article
error: Content is protected !!
";