ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸ್ವಚ್ಛ ಭಾರತ ಆಂದೋಲನವು ಭಾರತದಲ್ಲಿ ನಡೆದ ಅತ್ಯಂತ ಮಹತ್ವದ ಮತ್ತು ಜನಪ್ರಿಯ ಮಿಷನ್‌ಗಳಲ್ಲಿ ಒಂದಾಗಿದೆ. ಸ್ವಚ್ಛಭಾರತ ಆಂದೋಲನವಾದ ಸ್ವಚ್ಛ ಭಾರತ ಮಿಷನ್ ಈ ಸ್ವಚ್ಛ ಭಾರತ ಆಂದೋಲನವನ್ನು ಪ್ರತಿಯೊಂದು ಹಳ್ಳಿ, ನಗರ, ಹಾಗೂ
ಪಟ್ಟಣಗಳನ್ನು ಸ್ವಚ್ಛವಾಗಿಸಲು ರೂಪಿಸಲಾಗಿದ್ದು ಸ್ವಚ್ಛ ಭಾರತ ಅಭಿಯಾನವು ಗಾಂಧೀಜಿಯವರ ಕನಸಾಗಿತ್ತು.ಅಂತೆಯೆ ಅದನ್ನು ಭಾರತದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದಿಯವರು ಅಕ್ಟೋಬರ್ 2, 2014 ರಂದು ಗಾಂಧಿ ಜಯಂತಿಯ ದಿನವೆ ಅವರ ಕನಸನ್ನು ನನಸು ಮಾಡಿದರು.
ಅದರೆ ಸ್ವಚ್ಚತೆಯೇ ಮರಿಚಿಕೆಯಾಗಿ ಮನೆಯ ಮುಂದೆ ಕಸದ ರಾಶಿ ಹಾಕಿ ಅದನ್ನು ತೆರವುಗೂಳಿಸಬೇಕಾದ ಜವಾಬ್ದಾರಿ ಹೊತ್ತ ಸ್ಥಳಿಯ ಜನಪ್ರತಿನಿಧಿಗಳು ಕಂಡರೂ ಕಾಣದೆ ಇರುವುದು ಜನರ ಅಕ್ರೋಶಕ್ಕೆ ಕಾರಣವಾಗಿದೆ ಇಂತಹ ಪ್ರಕರಣ ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ
4 ನೇ ವಾರ್ಡಿನ ರೋಜಿಪುರದ ವಿನಾಯಕ ನಗರ ಮನೆಯೊಂದರ ಮುಂದೆ ಕಸದ ರಾಶಿಯೇ ಬಿದ್ದಿದೆ. ಇದರಿಂದ ಇಲ್ಲಿ ಇಲಿ ಹೆಗ್ಗಣ ಹಾವುಗಳಿಂದ ಸುತ್ತ ಮುತ್ತಲಿನ ಮನೆಯವರಿಗೆ ಹಾಗು ಸಾರ್ವಜನಿಕರಿಗೂ ತುಂಬಾ ತೊಂದರೆಯಾಗುತ್ತಿದೆ ಎಂದು ವಾರ್ಡಿನ ಸಧಸ್ಯರಿಗೆ ದೂರು ನೀಡದರೂ ಯಾವುದೇ ಪ್ರಯೋಜನವಾಗಿಲ್ಲ.
ಅಧಿಕಾರಿಗಳಿಗೆ ದೂರು ನೀಡದರೆ ಅವರೂ ಸಹಾ ಗಮನ ಹರಿಸುತ್ತಿಲ್ಲ.ಯಾರಿಗೆ ನಮ್ಮ ಕಷ್ಟಗಳು ಹೇಳುವುದು ಈ ದೌರ್ಬಾಗ್ಯಕ್ಕೆ ಇಲ್ಲವಾ ಕಡಿವಾಣ ಎನ್ನುವುದು ವಿನಾಯಕ ನಗರದ ನಾಲ್ಕನೆ ವಾರ್ಡಿನ ಸ್ಥಳಿಯರಾದ ಅಶ್ವತ್ತಮ್ಮ ಅವರ ಅಳಲು.

