ವಿಧಾನ ಪರಿಷತ್‌ ನಿವೃತ್ತ ಸದಸ್ಯರಿಗೆ ಆತ್ಮೀಯ ಬೀಳ್ಕೊಡುಗೆ

News Desk
- Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಧಾನಸೌಧದ ಭವ್ಯವಾದ ಮೆಟ್ಟಿಲುಗಳ ಮುಂಭಾಗದಲ್ಲಿ ಇಂದು 2026ನೇ ಸಾಲಿನಲ್ಲಿ ವಿಧಾನ ಪರಿಷತ್ತಿನ ಸದಸ್ಯತ್ವದ ಅವಧಿಯನ್ನು ಪೂರ್ಣಗೊಳಿಸುತ್ತಿರುವ ಸದಸ್ಯರಿಗೆ ಗೌರವಪೂರ್ವಕವಾಗಿ ಬೀಳ್ಕೊಡುವ ಗ್ರೂಪ್ ಫೋಟೋಕಾರ್ಯಕ್ರಮ ಆಯೋಜಿಸಲಾಗಿತ್ತು.

​ಈ ಸ್ಮರಣೀಯ ಕ್ಷಣದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ ಅವರು ಪಾಲ್ಗೊಂಡು ನಿವೃತ್ತಿ ಹೊಂದುತ್ತಿರುವ ಸದಸ್ಯರೊಂದಿಗೆ ಭಾವಚಿತ್ರಕ್ಕೆ ಪೋಸ್ ನೀಡಿದರು.

- Advertisement - 

​ಶುಭ ಹಾರೈಕೆ:
ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು, ಸದನದಲ್ಲಿ ನಾಡು ಮತ್ತು ನುಡಿಯ ಹಿತಕ್ಕಾಗಿ ಧ್ವನಿ ಎತ್ತಿದ ಸದಸ್ಯರ ಜನಪರ ಕಾಳಜಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. “ಸದಸ್ಯರಾಗಿ ನಿಮ್ಮ ಅವಧಿ ಇಂದು ಮುಕ್ತಾಯಗೊಳ್ಳುತ್ತಿದ್ದರೂ, ನಾಡಿನ ಏಳಿಗೆಗಾಗಿ ಮತ್ತು ಸಮಾಜದ ಹಿತದೃಷ್ಟಿಯಿಂದ ನೀವು ತೋರುತ್ತಿರುವ ಕಾಳಜಿ ಹಾಗೂ ಹೋರಾಟ ಎಂದಿನಂತೆ ಹೀಗೆಯೇ ಮುಂದುವರೆಯಲಿ” ಎಂದು ಎಲ್ಲರಿಗೂ ಆತ್ಮೀಯವಾಗಿ ಶುಭ ಹಾರೈಸಲಾಯಿತು.

​ಈ ಸಂದರ್ಭದಲ್ಲಿ ಸಚಿವರುಗಳು, ಶಾಸಕರುಗಳು ಹಾಗೂ ಸಂಸದೀಯ ಪಟುಗಳು ಉಪಸ್ಥಿತರಿದ್ದು, ನಿವೃತ್ತ ಸದಸ್ಯರ ಮುಂದಿನ ಸಮಾಜಸೇವೆಯ ಹಾದಿಗೆ ಶುಭ ಕೋರಿದರು.

- Advertisement - 

 

 

Share This Article
error: Content is protected !!
";