ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾವಪೂರ್ಣ ಶ್ರದ್ಧಾಂಜಲಿ-
ಭಾರತದ ಮಾಜಿ ಪ್ರಧಾನಮಂತ್ರಿಗಳು, ಅರ್ಥಶಾಸ್ತ್ರಜ್ಞರು, ಹಣಕಾಸು ಸಚಿವರಾಗಿದ್ದ ಡಾ.ಮನಮೋಹನ್ ಸಿಂಗ್ ರವರು ವಿಧಿವಶರಾಗಿದ್ದಾರೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.
ಶ್ರೀ ಡಾ ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಗಳಾಗಿ ನೀಡಿರುವ ಆಡಳಿತದ ವಿಚಾರವನ್ನು ಈ ಸಮಯದಲ್ಲಿ ನೆನೆಯುತ್ತೇನೆ. ಮನಮೋಹನ್ ಸಿಂಗ್ ಅವರ ಆಡಳಿತದ ವಿಚಾರ ಬಹಳಷ್ಟು ಹಳೆಯ ವಿಷಯವೇನಲ್ಲ. ಈ ವಿಷಯ ಕೇವಲ 10 ವರ್ಷಗಳ ಹಿಂದಿನದು ಅಷ್ಟೇ. ನಮ್ಮ ದೇಶದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಜಗತ್ತಿನ ಶ್ರೇಷ್ಠ ಅರ್ಥಶಾಸ್ತ್ರ ತಜ್ಞರು, ಮನಮೋಹನ್ ಸಿಂಗ್ ಅವರು ಅತ್ಯುತ್ತಮ ಜ್ಞಾನದ ಭಂಡಾರ ಹೊಂದಿರುವ ಪ್ರಧಾನಮಂತ್ರಿಗಳಾಗಿದ್ದರು.
ವಿಶ್ವಮಟ್ಟದಲ್ಲೇ ದೊಡ್ಡ ಪ್ರಮಾಣದ ಜ್ಞಾನದ ಮೌಲ್ಯಗಳನ್ನು ಹೊಂದಿರುವ ಆಡಳಿತಗಾರ ಎಂದು ಹೇಳಬಹುದಿತ್ತು. ಮನಮೋಹನ್ ಸಿಂಗ್ ಅವರ ಜ್ಞಾನದ ವಿಚಾರವಂತಿಕ್ಕೇ ವಿಷಯಗಳು ಅಮೆರಿಕದ ಆಕ್ಸ್ ಫೋರ್ಡ್ ಯುನಿವರ್ಸಿಟಿಯ ಅರ್ಥಶಾಸ್ತ್ರದ ಅಧ್ಯಯನದ ವಿಭಾಗದಲ್ಲಿ ಏಳು ಅಧ್ಯಾಯಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ವಿಚಾರ ವಾಗಿದೆ.
ಸಿಂಗ್ ಅವರ ಆಡಳಿತದ ಕಾಲದಲ್ಲಿಯೂ ಐನೂರು ರೂಪಾಯಿ ನೋಟನ್ನು ಬ್ಯಾನ್ ಮಾಡಿದ್ದರು. ಈ ವಿಚಾರ ಇಂದಿಗೂ ಅನೇಕರಿಗೆ ಗೊತ್ತಿಲ್ಲ. ಆ ಸಮಯ ಸಂದರ್ಭದಲ್ಲಿ ದೇಶದ ಜನರಲ್ಲಿ ಇರುವ ನೋಟನ್ನು ಬದಲಾಯಿಸಲು ಜನರು ಸರತಿ ಸಾಲಿನಲ್ಲಿ ನಿಂತು ಕಾಯಬೇಕಿರಲಿಲ್ಲ ಆ ಸಂದರ್ಭದಲ್ಲಿ ಈ ವಿಷಯದಲ್ಲಿ ಯಾವುದೇ ಜೀವ ಹಾನಿ ಸಂಭವಿಸಲಿಲ್ಲ. ಈ ವಿಚಾರದಲ್ಲಿ ಯಾರಿಗೂ ತೊಂದರೆಯಾಗಿಲ್ಲ.
ಇಷ್ಟೆಲ್ಲಾ ಉತ್ತಮ ಗುಣಮಟ್ಟದ ಆಡಳಿತ ನೀಡಿದರು ಅವರನ್ನು ಟೀಕಿಸುವವರು ಕಡಿಮೆಯಿರಲಿಲ್ಲ. ದೇಶದ ರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ ನಿತ್ಯ ನಿರಂತರ ಟೀಕೆಗಳನ್ನು ಮಾಡುತ್ತಲೇ ಇದ್ದರು. ಟೀಕೆಗಳ ವಿಚಾರದಲ್ಲಿ ಅವರು ಎಂದು ಯಾರ ಮೇಲೂ ಸಿಟ್ಟಾಗುತ್ತಿರಲಿಲ್ಲ ಹಾಗೂ ಹತಾಶರಾಗುತ್ತಿರಲಿಲ್ಲ ಯಾಕೆಂದರೆ ಅಧಿಕಾರದ ಸ್ಥಾನದಲ್ಲಿದ್ದವರಿಗೆ ಟೀಕೆಗಳು ಸಹಜ ಎಂಬ ಪೂರ್ಣ ಪ್ರಜ್ಞೆಯ ಅರಿವು ಅವರಿಗಿತ್ತು.
ಮನಮೋಹನ್ ಸಿಂಗ್ ಅವರಿಗೆ ನಾನು ಜಗತ್ತಿನ ದೊಡ್ಡ ಪ್ರಮಾಣದ ಪ್ರಜಾಪ್ರಭುತ್ವ ರಾಷ್ಟ್ರವೊಂದರ ಆಡಳಿತಗಾರ ಎಂಬುದು ಅರಿವಿತ್ತು. ನನ್ನ ಆಡಳಿತ ಜಗತ್ತು ಗಮನಿಸುತ್ತಿದ್ದೇ ನನ್ನ ಆಡಳಿತದಲ್ಲಿ ಹುಚ್ಚಾಟಕ್ಕೇ ಅವಕಾಶ ನೀಡಿದರೆ ಅದರಿಂದ ನನ್ನ ಆಡಳಿತಕ್ಕೆ ಮಾತ್ರವಲ್ಲ ಈ ಭಾರತ ದೇಶಕ್ಕೆ ಅವಮಾನವಾಗುತ್ತದೆ ಎಂಬ ಸಂಪೂರ್ಣ ಪ್ರಜ್ಞೆಯ ಜ್ಞಾನದ ಅರಿವಿತ್ತು.
ಅವರು ಎಂದು ವರ್ಣಮಯ ಉಡುಗೆ ತೊಡುಗೆಗಳನ್ನು ಧರಿಸುತ್ತಿರಲಿಲ್ಲ ಅವರು ತನ್ನ ಖಾಸಗಿ ಕೆಲಸಗಳಿಗೆ ಕೆಲಸಗಾರರ ಮೊರೆ ಹೋಗುತ್ತಿರಲಿಲ್ಲ ಬಹಳಷ್ಟು ಸರಳವಾದ ವ್ಯಕ್ತಿತ್ವದ ಕೈಗನ್ನಡಿ ಅವರ ನಡೆಯಲಿ ಕಾಣಿಸುತ್ತಿತ್ತು.
ಅವರು ಈ ದೇಶದಲ್ಲಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶವು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಂಡಿತ್ತು. ಸಿಂಗ್ ಅವರ ವ್ಯಕ್ತಿತ್ವದ ಮಹತ್ವ ಅರಿಯದೆ ದೇಶದ ಜನರಾದ ನಾವುಗಳು ಅವರ ಆಡಳಿತವನ್ನು ಕಳೆದುಕೊಂಡಿವು. ಈ ದಿನದಂದು ದೇಶದ ಬೆಳವಣಿಗೆ ಮನಮೋಹನ್ ಸಿಂಗ್ ಅವರ ಆಡಳಿತದ ಭವ್ಯ ಭಾರತದ ಪರಂಪರೆ ಮತ್ತೆ ಮತ್ತೆ ನೆನಪಾಗಿ ಕಾಡುತ್ತಿದೆ.
ಲೇಖನ-ರಘು ಗೌಡ, 9916101265.