ಹಾಲೋಬ್ರಿಕ್ಸ್ ನಿಂದ ತಲೆ ಜಜ್ಜಿ ಭೀಕರ ಕೊಲೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಗರ ಹೊರವಲಯದ ಬಾಶೆಟ್ಟಿಹಳ್ಳಿ ಬಳಿ ವ್ಯಕ್ತಿಯೊಬ್ಬನನ್ನು ಹಾಲೋ ಬ್ರಿಕ್ಸ್ ನಿಂದ ತಲೆಯನ್ನು ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

 ಬಾಶೆಟ್ಟಿಹಳ್ಳಿ ಬಳಿಯ ಜೆಪಿ ಪ್ಯಾಲೆಸ್ ಬಳಿ ಬುಧವಾರ ರಾತ್ರಿ ಸುಮಾರು 12ಗಂಟೆಯಲ್ಲಿ ಘಟನೆ ನಡೆದಿದೆ. ಮೃತನನ್ನು ದೊಡ್ಡಬಳ್ಳಾಪುರ ನಗರದ ತ್ಯಾಗರಾಜನಗರ ನಿವಾಸಿ ಬುಲೆಟ್ ರಘು(38) ಎಂದು ಗುರುತಿಸಲಾಗಿದೆ. 

- Advertisement - 

 ಬುಲೆಟ್ ರಘು ಕಳೆದ ಆರೇಳು ವರ್ಷಗಳಿಂದ ಬೆಳಗಾವಿಯಲ್ಲಿ ಖಾನಾವಳಿ ಇಟ್ಟುಕೊಂಡಿದ್ದ, ಪ್ರೇಮ ವಿವಾಹವಾಗಿ ಬೆಳಗಾವಿಯಲ್ಲೇ ವಾಸವಿದ್ದ. ಬೆಳಗಾವಿಯಿಂದ ಒಂದು ವಾರದ ಹಿಂದಷ್ಟೇ ದೊಡ್ಡಬಳ್ಳಾಪುರಕ್ಕೆ ಬಂದಿದ್ದ ಎಂದು ತಿಳಿದುಬಂದಿದೆ.

 ಈ ಹಿಂದೆ ಇಬ್ಬರ ಜೊತೆ ಗಲಾಟೆ ಮಾಡಿಕೊಂಡಿದ್ದ. ಆ ಗಲಾಟೆ ವಿಷಯ ರಾಜಿ ಸಂಧಾನವಾಗಿತ್ತು. ನಿನ್ನೆ ಸಂಜೆ ಸುಮಾರು 6 ಗಂಟೆ ಸಮಯದಲ್ಲಿ ನಾನು ಸ್ನೇಹಿತರ ಜೊತೆ ಹೊರಗೆ ಹೋಗುತ್ತೇನೆಂದು ತನ್ನ ತಾಯಿಗೆ ಹೇಳಿ ಹೋಗಿದ್ದಾನೆ. ಮನೆಯಿಂದ ಹೊರ ಹೋದವನು ಕೊಲೆಯಾಗಿದ್ದಾನೆ.

- Advertisement - 

ಸದ್ಯ ಈತನ ಗೆಳೆಯರು ಯಾರು ? ಕೊಲೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಕೊಲೆಗೆ ಸಂಬಂಧಿಸಿದಂತೆ ತನಿಖೆ ಮಾಡಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಡಿಷನಲ್ ಎಎಸ್ಪಿ ನಾಗರಾಜು ತಿಳಿಸಿದ್ದಾರೆ.

 ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಡಿಷನಲ್ ಎಸ್ಪಿ ನಾಗರಾಜು, ದೊಡ್ಡಬಳ್ಳಾಪುರ ಡಿವೈಎಸ್ಪಿ ರವಿ.ಪಿ, ಗ್ರಾಮಾಂತರ ಠಾಣೆಯ ಇನ್ಸೆಕ್ಟರ್ ಸಾದಿಕ್ ಪಾಷಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

Share This Article
error: Content is protected !!
";