ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜ್ಞಾನದ ದೀವಿಗೆ ಹಚ್ಚಬೇಕಾದ ಪುಸ್ತಕಗಳು ಇಂದು ಕತ್ತಲ ಕೊಠಡಿಯಲ್ಲಿ, ಧೂಳು ಹಿಡಿಯುತ್ತಿರುವುದು ಕಮಿಷನ್‌ಕರ್ನಾಟಕ ಕಾಂಗ್ರೆಸ್ ಸರ್ಕಾರದ ಧನದಾಹಕ್ಕೆ ಸಾಕ್ಷಿ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಜನರ ತೆರಿಗೆ ಹಣದಲ್ಲಿ ಖರೀದಿಸಿದ ಕೋಟ್ಯಂತರ ರೂ. ಮೌಲ್ಯದ ಪುಸ್ತಕಗಳು, ಓದುಗರ ಜ್ಞಾನ ವೃದ್ಧಿಸುವ ಬದಲು ಗ್ರಾಮ ಪಂಚಾಯಿತಿಗಳ ಸ್ಟೋರ್ ರೂಂಗಳಲ್ಲಿ ಕೊಳೆಯುತ್ತಿದೆ.
ಸಾರ್ವಜನಿಕ ಗ್ರಂಥಾಲಯಗಳಿಗೆ ಕನ್ನಡ ಪುಸ್ತಕಗಳನ್ನು ಸಗಟು ಖರೀದಿ ಮಾಡಬೇಕು ಎಂದು ಕೋರಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದಿದ್ದರೂ ಕಾಂಗ್ರೆಸ್‌ಸರ್ಕಾರ ಸ್ಪಂದಿಸಿಲ್ಲ ಎಂದು ಜೆಡಿಎಸ್ ದೂರಿದೆ.
ಸರ್ಕಾರದ ವಿವಿಧ ಯೋಜನೆಗಳಡಿ ಪುಸ್ತಕ ಖರೀದಿ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಕಮಿಷನ್ ವ್ಯವಹಾರ ನಡೆಯುತ್ತಿದ್ದು, ಓದುಗರಿಗೆ ಬೇಕಾದ ಗುಣಮಟ್ಟದ ಸಾಹಿತ್ಯಕ್ಕಿಂತ ಹೆಚ್ಚಾಗಿ, ಕಮಿಷನ್ ಆಸೆಗೆ ಬಿದ್ದು ಕೆಲವರಿಗೆ ಲಾಭ ಮಾಡಿಕೊಡುತ್ತಿದೆ ಎಂಬ ಅನುಮಾನವಿದೆ.
ಅಕ್ಷರ ಸಂಸ್ಕೃತಿಯನ್ನು ಪ್ರೋತ್ಸಾಹಿಸಬೇಕಾದ ಗ್ರಂಥಾಲಯದ ಪುಸ್ತಕಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ ಗೆದ್ದಲು ಹಿಡಿಯುತ್ತಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.

