ಪ್ರೀತಿ ವಿಚಾರಕ್ಕೆ ಚಾಕು ಇರಿತ

News Desk

ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಯುವಕನೊರ್ವನಿಗೆ ಪ್ರೀತಿ ವಿಚಾರಕ್ಕೆ ಚಾಕುವಿನಿಂದ ಇರಿದ ಘಟನೆ ನಗರದ ಸದರಸೋಫಾ ಓಣಿಯಲ್ಲಿ ನಡೆದಿದೆ.
ಚಾಕು ಇರಿತಕ್ಕೊಳಗಾದ ಯುವಕ ಗೌಸು ಮೊಯಿನುದ್ದೀನ್. ಚಾಕುವಿನಿಂದ ಇರಿದ ಆರೋಪಿ ವಸೀಂ.
ಕಸಬಾಪೇಟೆ ಪೊಲೀಸ್​ ಠಾಣಾ ವ್ಯಾಪ್ತಿಯ ಸದರ್​ ಸೋಫಾ​ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಚೂರಿ ಇರಿತ ಘಟನೆ ಸಂಭವಿಸಿದೆ.

ಘಟನೆಯಲ್ಲಿ ಗೌಸು ಮೊಯಿನುದ್ದೀನ್(22) ಎಂಬಾತ ಗಾಯಗೊಂಡಿದ್ದು, ಆರೋಪಿ ವಸೀಂ ಸೇರಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಹು-ಧಾ ಪೊಲೀಸ್ ‌ಕಮಿಷನರ್ ಎನ್.ಶಶಿಕುಮಾರ್ ಇರಿತಕ್ಕೊಳಗಾದ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

- Advertisement - 

ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅವರು, ತಾನು ಓರ್ವ ಹುಡುಗಿ ಜೊತೆ ವಿಶ್ವಾಸದಿಂದ ಇದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿರುವುದಾಗಿ ಇರಿತಕ್ಕೊಳಗಾದ ಗೌಸು ತಿಳಿಸಿದ್ದಾನೆ. ಆದರೆ, ಹುಡುಗಿಯ ಚಿಕ್ಕಪ್ಪನಿಗೆ ತಮ್ಮ ಪ್ರೀತಿ ಬಗ್ಗೆ ಒಪ್ಪಿಗೆ ಇರಲಿಲ್ಲ.

ತಾನು ಪ್ರೀತಿಸುತ್ತಿದ್ದ ಹುಡುಗಿಯಿಂದಲೇ ಕಳೆದ ರಾತ್ರಿ ಫೋನ್​ ಮಾಡಿಸಿ ಕರೆಯಿಸಿಕೊಂಡು ಹಲ್ಲೆ ಮಾಡಿದ್ದಲ್ಲದೇ ಚಾಕು ಇರಿದಿದ್ದಾನೆ.ಎಂದು ಗೌಸು ಹೇಳಿಕೆ ನೀಡಿದ್ದಾನೆ. ಆರೋಪಿ ವಸೀಂ (34) ಹಾಗೂ ಹುಡುಗಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

- Advertisement - 

ಪ್ರಕರಣದಲ್ಲಿ ತಾನು ಪ್ರೀತಿಸುತ್ತಿದ್ದ ಹುಡುಗಿಯ ಪಾತ್ರ ಕೂಡ ಇದ್ದು, ಒತ್ತಾಯಪೂರ್ವಕವಾಗಿ ತನ್ನನ್ನು ಕರೆಯಿಸಿಕೊಳ್ಳಲಾಗಿದೆ ಎಂದು ಆರೋಪ ಮಾಡಿದ್ದರಿಂದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಯಾವ ಕಾರಣಕ್ಕಾಗಿ ಚಾಕು ಇರಿತವಾಗಿದೆ ಎನ್ನುವುದು ಸೇರಿದಂತೆ ಇತ್ಯಾದಿ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.

ಕೃತ್ಯದಲ್ಲಿ ಯುವತಿ ಪಾತ್ರ ಸ್ಪಷ್ಟವಾಗಿದ್ದು, ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ, ಆರೋಪಿ ವಸೀಂ ಮೇಲೆ ಶಹರ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣವಿದ್ದು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಕಮಿಷನರ್ ಶಶಿ ಕುಮಾರ್ ತಿಳಿಸಿದರು.

ಗೌಸು ಹಾಗೂ ವಶಕ್ಕೆ ಪಡೆಯಲಾದ ಹುಡುಗಿ ಇಬ್ಬರು ಕಳೆದ ಹಲವು ದಿನಗಳಿಂದ ವಿಶ್ವಾಸದಿಂದ ಇದ್ದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಆದರೆ, ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರೋ ಅಥವಾ ಇಲ್ಲವೋ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಇದೇ ವೇಳೆ ಅವರು ಹೇಳಿದರು.

Share This Article
error: Content is protected !!
";