ಕೋಡಿಹಳ್ಳಿ ಗ್ರಾಮದಲ್ಲಿ ಅದ್ದೂರಿ ಗಣೇಶೋತ್ಸವ ಆಚರಣೆ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಜೈ ಭೀಮ್ ಯುವ ವಿನಾಯಕ ಸಂಘ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಸಂಘ ಇವರ ಸಹಯೋಗದೊಂದಿಗೆ ದಲಿತ ಸಮುದಾಯದ ಶಕ್ತಿ ದೇವತೆ ಶ್ರೀ ದುರ್ಗಾಂಬಿಕ ದೇವಸ್ಥಾನದ ಆವರಣದಲ್ಲಿ  ಗೌರಿ ಗಣೇಶನನ್ನು  ಪ್ರತಿಷ್ಟಾಪಿಸಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಪ್ರತಿ ದಿನ ಸಂಜೆ ಯುವಕ ಯುವತಿಯರು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಡ್ಯಾನ್ಸರ್ ಮೈಕಲ್ ವೆಂಕಿ  ನಡೆಸಿಕೊಟ್ಟರು. ಪ್ರತಿ ದಿನವೂ ವಿವಿಧ ಕುಟುಂಬಗಳಿಂದ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕೊನೆಯ ದಿನ ಇಡೀ ಸಮುದಾಯದ ಎಲ್ಲ ಜನತೆಗೆ ಅನ್ನ ಸಂತರ್ಪಣೆ ನಡೆಯಿತು. ಸುಮಾರು 12 ಅಡಿ ಶ್ರೀರಾಮ ಸೀತೆ ಹಾಗೂ ಆಂಜನೇಯ ಇರುವ  ಶ್ರೀ ಗಣೇಶ ಮೂರ್ತಿಯ ದಾನಿ ಡಾ.ಮುನಿಸ್ವಾಮಿ ರೆಡ್ಡಿರವರಾಗಿದ್ದರೆ.
ಗಣೇಶ ಮೂರ್ತಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಹೂವಿನ ಮಾಲೆ ಹರಾಜು ಪ್ರಕ್ರಿಯೆ ಮುಗಿಸಿ, ವಿಸರ್ಜನೆಗೆ ಚಾಲನೆ ನೀಡಲಾಯಿತು.

  ಗ್ರಾಮದ ಎಲ್ಲ ರಾಜ ಬೀದಿಗಳಲ್ಲಿ ಪಟಾಕಿ ಸಿಡಿಸುತ್ತಾ ಡಿ.ಜೆ ಸೌಂಡ್ ನೊಂದಿಗೆ  ಸಾವಿರಾರು ಯುವಕ ಯುವತಿಯರು ಹಿರಿಯರು ಕುಣಿದು ಕುಪ್ಪಳಿಸಿದರು. ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಗ್ರಾಮದ ಜನರು ಗಣಪನಿಗೆ ವಿಶೇಷ ಪೂಜೆ ಮಾಡಿಸಿದರೆ, ನಾಗರಾಜು ರವರು ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು.

ಯಾವುದೇ ಅಹಿತಕರ ಘಟನೆಗಳು ನಡೆಯದೆ ಸುರಕ್ಷಿತವಾಗಿ ಗಣಪತಿ ಪೂಜಿಸಿ ಗ್ರಾಮದ ಕೆರೆಯಲ್ಲಿ ಭಕ್ತಿಪೂರ್ವಕವಾಗಿ ವಿಸರ್ಜನೆ ಮಾಡಲಾಯಿತು.

ಗೌರಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಸಣ್ಣ ನಾಗಯ್ಯ, ಎಂ.ಹೆಚ್ ತಿಪ್ಪೇಸ್ವಾಮಿ, ಮಲ್ಲಯ್ಯ, ಗಂಗಣ್ಣ, ಹನುಮಂತಪ್ಪ, ಪುಟ್ಟಣ್ಣ, ತಿಪ್ಪೇಸ್ವಾಮಿ, ಓಬಣ್ಣ, ದುರುಗಣ್ಣ, ನಿಂಗಣ್ಣ, ಕೊಲ್ಲಾರಪ್ಪ , ಲಿಂಗರಾಜು.ಡಿ, ಮಲ್ಲಿಕಾರ್ಜುನಯ್ಯ.ಟಿ, ವಿನಯ್ ಕುಮಾರ್.ಬಿ.ಎಂ, ಮಂಜುನಾಥ್, ರುದ್ರಮುನಿ.ಹೆಚ್, ಮೋಹನ್ .ಡಿ ನಂದೀಶ್. ಓ  ಶ್ರೀಧರ್.ಹೆಚ್ , ರಾಜು.ಡಿ , ವಿಜಯ್ ಕುಮಾರ್.ಡಿ, ತಿಪ್ಪೇಸ್ವಾಮಿ.ಯು, ರಮೇಶ್.ಎಂ, ಶಿವಮೂರ್ತಿ.ಟಿ , ಗುರುಮೂರ್ತಿ, ಚಿದಾನಂದ್, ಉಪೇಂದ್ರ, ರವೀಶ್, ಮಲ್ಲಿಕಾರ್ಜುನ್.ಜಿ, ಅರುಣ್ ಕುಮಾರ್.ಟಿ, ದಯಾನಂದ.ಟಿ, ಶಿವಪುತ್ರ,  ಡ್ಯಾನ್ಸ್ ಮಾಸ್ಟರ್ ವೆಂಕಟೇಶ್, ತಿಪ್ಪೇಶ್ , ಮನೋಜ್ ಕುಮಾರ್.ಟಿ, ಜಯಂತ್, ನಾಗೇಶ್, ಮಂಜು, ಕಿರಣ್, ಸ್ವಾಮಿ.ಆರ್, ಕೋಟೆಶ್, ಗೋಪಿನಾಥ್, ಮೈಲಾರಿ, ದುರುಗೇಶ್, ಅಭಿಷೇಕ್, ವಿಜಯ್.ಎಸ್, ಮಾರಣ್ಣ, ಶಿವಪ್ಪ, ಪರಶುರಾಮ್, ಕಣುಮೇಶ್ , ಮಹೇಶ್, ಕೊಲ್ಲಾರಿ ಸೇರಿದಂತೆ ಸಮುದಾಯದ ಮುಖಂಡರು, ಹಿರಿಯರು, ಯುವಕ ಯುವತಿಯರು, ಸರ್ವ ಸದಸ್ಯರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಿದರು.

- Advertisement -  - Advertisement - 
Share This Article
error: Content is protected !!
";