ಅದ್ದೂರಿ ಕನ್ನಡ ರಾಜ್ಯೋತ್ಸವ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಶ್ರೀನಗರದ ಕೊಳವೆಬೀದಿ ವೃತ್ತದಲ್ಲಿ ಶ್ರೀ ಪುಲಕೇಶಿ ಕನ್ನಡ ಯುವಕರ ಬಳಗದ ವತಿಯಿಂದ ಜರುಗಿದ 28 ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಹಾಗೂ 21 ಶಕ್ತಿ ದೇವತೆಗಳೊಂದಿಗೆ 12 ನೇ ವರ್ಷದ ಅಣ್ಣಮ್ಮ ದೇವಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ
, ದೇವರ ಆಶೀರ್ವಾದ ಪಡೆದು ನಾಡಿನ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಇದೇ ವೇಳೆ ಶ್ರೀ ಪುಲಕೇಶಿ ಕನ್ನಡ ಯುವಕರ ಬಳಗ ವತಿಯಿಂದ ಹಮ್ಮಿಕೊಂಡ ಅನ್ನಪ್ರಸಾದಕ್ಕೆ ಚಾಲನೆ ನೀಡಿ, ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು ಎಂದು ನಿಖಿಲ್ ತಿಳಿಸಿದರು.

- Advertisement - 

ಈ ಸಂದರ್ಭದಲ್ಲಿ ಶಾಸಕ ಮಿತ್ರರಾದ ಜಿ.ಡಿ. ಹರೀಶ್ ಗೌಡ, ಬಸವನಗುಡಿ ಅಧ್ಯಕ್ಷರಾದ ತಿಮ್ಮೇಗೌಡ, ಪುಲಕೇಶಿ ಕನ್ನಡ ಯುವಕರ ಬಳಗದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

 

- Advertisement - 

 

Share This Article
error: Content is protected !!
";