ಅಂಗನವಾಡಿ ಮಕ್ಕಳನ್ನು ಕೂಡಿ ಹಾಕಿ ಜಮೀನು ಕೆಲಸಕ್ಕೆ ಹೋದ ಸಹಾಯಕಿ

News Desk

ಚಂದ್ರವಳ್ಳಿ ನ್ಯೂಸ್, ಯಾದಗಿರಿ:
ಅಂಗನವಾಡಿಯಲ್ಲಿ ಮಕ್ಕಳನ್ನು ಲಾಕ್​ ಮಾಡಿ ಸಹಾಯಕಿ ಜಮೀನು ಕೆಲಸಕ್ಕೆ ಹೋದ ಘಟನೆ ಗುರುಮಠಕಲ್​ ತಾಲೂಕಿನ ಬುದೂರ್​ ಗ್ರಾಮದಲ್ಲಿ ನಡೆದಿದೆ. ಗುರುವಾರ ಮಾಸಿಕ ಸಭೆ ನಿಮಿತ್ತ ಅಂಗನವಾಡಿ ಮುಖ್ಯ ಸಹಾಯಕಿ ಬೇರೆ ಗ್ರಾಮಕ್ಕೆ ಹೋಗಿದ್ದರು.

ಅಂಗನವಾಡಿ ಮುಖ್ಯ ಸಹಾಯಕಿ ಅತ್ತ ಹೋಗುತ್ತಿದ್ದಂತೆ ಇತ್ತ, ಸಹಾಯಕಿ ಸಾವಿತ್ರಮ್ಮ ಮಕ್ಕಳನ್ನು ಅಂಗನವಾಡಿಯಲ್ಲಿ ಲಾಕ್​ ಮಾಡಿ ಜಮೀನು ಕೆಲಸಕ್ಕೆ ಹೋಗಿದ್ದಾಳೆ.

- Advertisement - 

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಇಬ್ಬರು ಇಲ್ಲದಿರುವುದಿಂದ ಮಕ್ಕಳು ಅಳಲು ಆರಂಭಿಸಿದವು. ಮಕ್ಕಳು ಅಳುತ್ತಿರುವ ಶಬ್ದ ಕೇಳಿ ಸ್ಥಳೀಯರು ಅಂಗನವಾಡಿ ಮುಖ್ಯ ಸಹಾಯಕಿಗೆ ವಿಷಯ ತಿಳಿಸಿದ್ದಾರೆ.

ವಿಚಾರ ತಿಳಿಯುತ್ತಿದ್ದಂತೆ ಕೂಡಲೆ ಅಂಗನವಾಡಿಗೆ ಆಗಮಿಸಿದ ಮುಖ್ಯ ಸಹಾಯಕಿ ಬಾಗಿಲು ತೆರೆದಿದ್ದಾರೆ.
ಮಕ್ಕಳನ್ನು ಲಾಕ್​ ಮಾಡಿದ ಸಹಾಯಕಿ ಸಾವಿತ್ರಮ್ಮ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಜರುಗಿದೆ.

- Advertisement - 

 

 

 

 

 

 

 

Share This Article
error: Content is protected !!
";